ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಬಹುದಿನಗಳ ಕನಸು ಇದೀಗ ನನಸಾಗಿದೆ: ಎಸ್ಪಿ,ಜಿ.ಕೆ.ಮಿಥುನ್ ಕುಮಾರ್

ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಕಟ್ಟಡದ ಭೂಮಿಯ ಗುದ್ದಲಿ ಪೂಜಾ ಕಾರ್ಯಕ್ರಮ ಶಿಲಾನ್ಯಾಸವನ್ನು ಜಿಲ್ಲಾ ರಕ್ಷಣಾಧಿಕಾರಿಗಳಾದ ಶ್ರೀಯುತ ಜಿ.ಕೆ.ಮಿಥುನ್ ಕುಮಾರ್ ರವರು ನೆರವೇರಿಸಿದರು.ಇಂದು ಬೆಳಿಗ್ಗೆ  ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಕ್ವಾಟ್ರಸ್ ಆವರಣದಲ್ಲಿರುವ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಹೆಸರಿಗೆ ಮಂಜೂರು ಆಗಿರುವ ಜಾಗದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.
ಇದೇ ಸಂದರ್ಭದಲ್ಲಿ ಜಿಲ್ಲಾರಕ್ಷಣಾಧಿಕಾರಿಗಳಾದ ಜಿ.ಕೆ.ಮಿಥುನ್ ಕುಮಾರ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಜಿಲ್ಲಾರಕ್ಷಣಾಧಿಕಾರಿಗಳಾದ ಜಿ.ಕೆ.ಮಿಥುನ್ ಕುಮಾರ್ ರವರು ಮಾತನಾಡಿ,,  ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರ ಮತ್ತು ಪಧಾದಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಹಾಗೂ ಸದಸ್ಯರು ಗಳ ಬಹುದಿನಗಳ ಕನಸು ಇದೀಗ ನನಸಾಗಿದೆ ಅವರ ಬೇಡಿಕೆ ಮನವಿ ಈಡೇರಿದೆ ಎಂದರು.
ಈ ನೂತನ ಕಟ್ಟಡ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಹಕಾರ  ಕೊಡುವುದಾಗಿ ತಿಳಿಸುತ್ತಾ ಅತ್ಯುತ್ತಮ ವಾದ ಬಹುಮಹಡಿ ಕಟ್ಟಡವನ್ನು ನಿರ್ಮಿಸಿ  ಎಂದು ಶುಭಹಾರೈಸಿದರು. 
ನಿವೃತ್ತಿ ಆದ ನಂತರ ನಾವು ಸಹ ಒಂದು ದಿವಸ ಈ ಕಟ್ಟಡದಲ್ಲಿ ಬಂದು ಕೂತುಕೊಳ್ಳಬೇಕಾಗುತ್ತದೆ. ಪೊಲೀಸ್ ಇಲಾಖೆಯಿಂದ ಏನು ಸಹಕಾರ ಬೇಕು ಎಲ್ಲಾರೀತಿಯ ಆರ್ಥಿಕ ಸಹಾಯವನ್ನು ಕೂಡ ಮಾಡಲಾಗುತ್ತದೆ ಎಂದರು.

ಪ್ರಾಸ್ತಾವಿಕ ವಾಗಿ ಸಂಘದ ಅಧ್ಯಕ್ಷರಾದ ಹೆಚ್.ಈ.ಮಂಜಪ್ಪ ಇವರು ಮಾತನಾಡುತ್ತಾ ಸಂಘ ಅಸ್ತಿತ್ವಕ್ಕೆ ಬಂದು 28 ವರ್ಷವಾಗಿದೆ.ಇತ್ತೀಚಿಗೆ ಡಿ.ಜಿ.ಮತ್ತು IGP ಸಾಹೇಬ ರವರು ಶಿವಮೊಗ್ಗಕ್ಕೆ ಬಂದಾಗ ಸಂಘದ ಕಟ್ಟಡದ ಸಲುವಾಗಿ ಜಾಗ ಮಂಜೂರಾತಿ ಮಾಡುವಂತೇ ಮನವಿ ಸಲ್ಲಿಸಲಾಗಿತ್ತು, ಅದನ್ನು  ಜಿಲ್ಲಾರಕ್ಷಣಾಧಿಕಾರಿಗಳು ಕೂಡಲೇ ಬಹುಬೇಗನೇ  ನಮ್ಮ ಮನವಿಯ ಅರ್ಜಿಯನ್ನು ಶಿಫಾರಸ್ಸು ಮಾಡಿ ಕಳುಹಿಸಿದ ಮೇರೆಗೆ ಇದೀಗ 30×40 ಜಾಗ ಮಂಜೂರು ಆಯಿತು ಎಂದು  ಅವರಿಬ್ಬರಿಗೂ ಸಂಘದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.ಡಿ.ಜಿ ಮತ್ತು ಐಜಿಪಿ ಡಾ. ಎಂ.ಎ.ಸಲೀಂ ಇವರನ್ನು ಸ್ಮರಿಸಿದರು.
ಆದಷ್ಟು ಬೇಗನೇ ಕಟ್ಟಡದ ಕಾಮಗಾರಿಯನ್ನು ಪ್ರಾರಂಬಿಸಲಾಗುಗುವುದು .ಸಂಘದ ಎಲ್ಲಾ ಸದಸ್ಯರುಗಳ ಸಹಕಾರ ಅತ್ಯಗತ್ಯ ಮತ್ತು ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿಅಡಿಷನಲ್ ರಸ್ಪಿ ಕಾರಿಯಪ್ಪ,, ಪ್ರೊಬೇಷನರಿ ಐಪಿಎಸ್ ಆಫೀಸರ್ ಮೇಘ ಅಗರವಾಲ್, ಡಿವೈಎಸ್ಪಿ ಆಂಜನಪ್ಪ, ಡಿಆರ್ ಡಿವೈಎಸ್ಪಿ ದೀಪಕ್, ಡಿವೈಎಸ್ಪಿ ಸಂಜಯ್‌ಕುಮಾರ್, ಸಂಘದ ಕಾರ್ಯದರ್ಶಿ ವಿ.ಜಗನ್ನಾಥಯ್ಯ, ಎಂ.ಚಂದ್ರಶೇಖರಪ್ಪ, ಕೃಷ್ಣೇಗೌಡ, ಡಿ.ಜಿ.ನಾಗರಾಜ್, ತುಕಾರಾಂ ಸಂಘದ ಎಲ್ಲಾ ಪಧಾದಿಕಾರಿಗಳು ಹಾಗೂ ನಿರ್ದೇಶಕರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.