ಭದ್ರಾವತಿಯ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಚಾಕು ಇರಿತ: ಇಬ್ಬರ ಸಾವು

ಚಾಕು ಇರಿತದಿಂದ ಮೃತಪಟ್ಟ ಮಂಜುನಾಥ್
ಭದ್ರಾವತಿ : ನಗರದ ಓಲ್ಡ್ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಚಾಕು ಇರಿತದಿಂದ ಸಾವನ್ನಪ್ಪಿದ್ದು, ಒಬ್ಬ ಸ್ಥಳದಲ್ಲಿ ಸಾವನಪ್ಪಿದ್ದರೆ,ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆ ಉಸಿರು ಎಳೆದಿದ್ದಾನೆ.
 ಈ ಘಟನೆ ನಿನ್ನೆ ಶುಕ್ರವಾರ  ಸುಮಾರು ರಾತ್ರಿ 9 ಗಂಟೆಯ ಸಮಯದಲ್ಲಿ  ಭದ್ರಾವತಿಯ ಜೈ ಭೀಮ್ ನಗರದಲ್ಲಿ ನಡೆದಿದೆ.. 

ಮೃತರು 25 ವರ್ಷದ ಕಿರಣ್ ಮತ್ತು 65 ವರ್ಷದ ಮಂಜುನಾಥ್ ಇವರಿಬ್ಬರೂ ಗುಂಪಿನ ನಡುವಿನ ಜಗಳವನ್ನು ಶಮನಗೊಳಿಸಲು ಹೋಗಿದ್ದರು ಇದೀಗ ಮೃತಪಟ್ಟಿದ್ದಾರೆ.. ಇನ್ನೊಬ್ಬ ವ್ಯಕ್ತಿ ಸುರೇಶ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಪ್ರಕರಣದಲ್ಲಿ ನಂದೀಶ್ ಮತ್ತು ಸೃಷ್ಟಿ  ಪರಸ್ಪರ ಪ್ರೀತಿಸುತ್ತಿದ್ದು ಇವರಿಗೆ ಕಿರಣ್ ಮತ್ತು ಸುರೇಶ್ ಬೆಂಬಲ ನೀಡುತ್ತಿದ್ದರು ಆದರೆ  ಎರಡು ದಿನಗಳ ಹಿಂದೆ ಇಬ್ಬರು ಓಡಿ ಹೋಗಿ ಹೈದ್ರಾಬಾದ್ ನಲ್ಲಿ ಇದ್ದು ವಾಪಸ್ ಬಂದಿದ್ದರು .

 ಆದರೆ ಇಂದು  ಪೊಲೀಸ್ ಠಾಣೆಗೆ ಬಂದಾಗ  ಹುಡುಗಿ ಹುಡುಗನೊಂದಿಗೆ ಹೋಗುವುದಾಗಿ ಹೇಳಿದ್ದಾಳೆ.  ಇದರಿಂದ ಕೆರಳಿದ ಹುಡುಗಿಯ ಸಹೋದರ ಮತ್ತು ಅವನ ಸ್ನೇಹಿತರು  ನಂದೀಶನ ಸ್ನೇಹಿತರಾದ ಕಿರಣ್ ಮತ್ತು ಸುರೇಶ್ ಇವರಿಬ್ಬರಿಗೆ ಪ್ರೀತಿಸಲು ಸಹಾಯ ಮಾಡಿದ್ದು ಇವರೇ ಇವರನ್ನು ಬದುಕಲು ಬಿಡಬಾರದು ಎಂದು   ಚಾಕುವಿನಿಂದ ಇಬ್ಬರನ್ನು ಇರಿದಿದ್ದಾರೆ.

ಹುಡುಗ ಮತ್ತು ಹುಡುಗಿ ಇಬ್ಬರೂ ಎಸ್‌ಸಿ ಸಮುದಾಯಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ತಕ್ಷಣ ಪೋಲೀಸರು ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಸೂಕ್ತವಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.




ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.