ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯ ಹೋರಾಟ: ಬಂಗ್ಲೆ ಮಲ್ಲಿಕಾರ್ಜುನ್

ಬೆಂಗಳೂರು: ಕಾನಿಪ ಧ್ವನಿ ಸಂಘಟನೆ ವತಿಯಿಂದ ಬೆಳಗಾವಿಯ ಸುವರ್ಣಾ ಗಾರ್ಡನ್ ಟೆಂಟ್ ನಂಬರ್ 8 (ಟೆಂಟ್ ನಂಬರ್ ಎಂಟು) ಸುವರ್ಣಾ ಸೌಧದ ಮುಂಭಾಗದಲ್ಲಿ  ಡಿಶೆಂಬರ್ 15 ರಂದು ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾನಿಪ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಹೇಳಿದರು.
 ಪತ್ರಕರ್ತರ ರಕ್ಷಣಾ ಕಾಯ್ದೆ ಹಾಗೂ ಇನ್ನೀತರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಕಾನಿಪ ಧ್ವನಿ ಯಿಂದ ಬೆಳಗಾವಿ ಚಲೋ ಹೋರಾಟಕ್ಕೆ ಬೆಳಗಾವಿ ನಗರದ ಪೋಲಿಸರ ಆಯುಕ್ತರಿಂದ ಡಿಶೆಂಬರ್ 15 ಕ್ಕೆ ನಡೆಸಲಿರುವ ಬೃಹತ್ ಧರಣಿ ಪ್ರತಿಭಟನೆ ಹೋರಾಟ ಮಾಡವುದಕ್ಕೆ ಅಧಿಕೃತ ಪರವಾನಗಿ ದೊರೆತಿದೆ ಎಂದು ತಿಳಿಸಿದ್ದಾರೆ.

 ಬೆಳಗಾವಿಯ ಸುವರ್ಣಾ ಗಾರ್ಡನ್ ಟೆಂಟ್ ನಂಬರ್ 8 ರಲ್ಲಿ ಪ್ರತಿಭಟನೆ ಮಾಡಲು ಸೂಚಿಸಿರುವ ಹಿನ್ನೆಲೆಯಲ್ಲಿ ಆ ಪ್ರತಿಯನ್ನು ತಮ್ಮೆಲ್ಲರ ಗಮನಕ್ಕೆ ತರುತ್ತಾ,ರಾಜ್ಯಾಧ್ಯಂತವಿರುವ ನಮ್ಮ ಕಾನಿಪ ಧ್ವನಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಮಾಧ್ಯಮ ಮಿತ್ರರು ಈ ಅರ್ಥಪೂರ್ಣ ಹೋರಾಟದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತ  ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸೋಣ ಜೊತೆಗೆ ಹೋರಾಟಕ್ಕೆ ಸಂಬಂಧಿಸಿದಂತ ಪೋಸ್ಟರ್, ಪತ್ರಿಕಾ ಹೇಳಿಕೆಗಳು, ವ್ಯಾಟ್ಸಫ್ ಮುಖಾಂತರ,ಪೇಸ್ ಬುಕ್ ಹಾಗೂ ಸಾಮಾಜಿಕ ಜಾಲತಾಣಗಳ ಮುಖಾಂತರ ಕಾನಿಪ ಧ್ವನಿ ತಾಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳು ನೀಡುವುದರ ಮುಖಾಂತರ ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿ ಮಾಡಿದ್ದಾರೆ.

ನಾಡಿನ ಪತ್ರಕರ್ತರ ಪ್ರಮುಖ 12 ಬೇಡಿಕೆಗಳ ಈಡೇರಿಕೆಗಾಗಿ ನಾಡಿನ ಮುಖ್ಯಮಂತ್ರಿ ಹಾಗೂ ವಾರ್ತಾ ಇಲಾಖೆಯ ಖಾತೆಯನ್ನು ಹೊಂದಿರುವ ಸನ್ಮಾನ್ಯ ಸಿದ್ದರಾಮಯ್ಯ ನವರಿಗೆ ಮನವಿ ಮೂಲಕ ಹಕ್ಕೊತ್ತಾಯ ಮಾಡುತ್ತಿರುವ ಮನವಿಯ ಪ್ರತಿಯನ್ನು ಸಹ ಬಿಡುಗಡೆ ಮಾಡಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.