ಭದ್ರಾವತಿ ಚೂರಿ ಇರಿತ ಪ್ರಕರಣ: 5 ಆರೋಪಿಗಳ ಬಂಧನ ಯಾರು ಅಂತೀರಾ ನೋಡಿ

ಭದ್ರಾವತಿ : ನಗರದ ಓಲ್ಡ್ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಚಾಕು ಇರಿತದಿಂದ ಸಾವನ್ನಪ್ಪಿದ್ದು, ಈ ಪ್ರಕರಣದಲ್ಲಿನ ಐದು ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

*1) ಮಂಜುನಾಥ್ ಸೈಲೆಂಟ್ ಶಶಿ* ತಂದೆ ಕುಮಾರ 29 ವರ್ಷ ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 4 ನೇ ತಿರುವು ಭದ್ರಾವತಿ ಟೌನ್ 
*2) ಭರತ್ @ಸುಂಡು* ತಂದೆ ಕುಮಾರ 32 ವರ್ಷ  ನಗರ ಸಭೆಯಲ್ಲಿ ಟಾಟಾ ಎ ಸಿ ಗಾಡಿ ಚಾಲಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್ 
*3) ಸಂಜಯ್ @ ಕುಳ್ಳಿ* ತಂದೆ ವಡಿವೇಲು 24 ವರ್ಷ  ನಗರ ಸಭೆಯಲ್ಲಿ ಕೂಲಿ and ಡ್ರೈವರ್ ಕೆಲಸ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್ 
*4) ಸುರೇಶ್ @ ಸೂರಿ* ತಂದೆ ಕಲಾ 27 ವರ್ಷ  ಕೂಲಿ ಕೆಲಸ ವಾಸ ಮನೆ number 1 B ಬ್ಲಾಕ್ ಜೈ ಭೀಮ್ ನಗರ 2 ನೇ ತಿರುವು ಭದ್ರಾವತಿ ಟೌನ್ 
*5) ವೆಂಕಟೇಶ್ @ಕೆಂಚ* ತಂದೆ ಕುಮಾರ್ 28 ವರ್ಷ  ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್

ಚೂರಿ ಇರಿತ ಪ್ರಕರಣದ ಹಿನ್ನೆಲೆ:
ಭದ್ರಾವತಿ : ನಗರದ ಓಲ್ಡ್ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಚಾಕು ಇರಿತದಿಂದ ಸಾವನ್ನಪ್ಪಿದ್ದು, ಒಬ್ಬ ಸ್ಥಳದಲ್ಲಿ ಸಾವನಪ್ಪಿದ್ದರೆ,ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ,

 ಈ ಘಟನೆ ನಿನ್ನೆ ಶುಕ್ರವಾರ  ಸುಮಾರು ರಾತ್ರಿ 9 ಗಂಟೆಯ ಸಮಯದಲ್ಲಿ  ಭದ್ರಾವತಿಯ ಜೈ ಭೀಮ್ ನಗರದಲ್ಲಿ ನಡೆದಿತ್ತು.

ಮೃತರು 25 ವರ್ಷದ ಕಿರಣ್ ಮತ್ತು 65 ವರ್ಷದ ಮಂಜುನಾಥ್ ಇವರಿಬ್ಬರೂ ಗುಂಪಿನ ನಡುವಿನ ಜಗಳವನ್ನು ಶಮನಗೊಳಿಸಲು ಹೋಗಿದ್ದರು ಇದೀಗ ಮೃತಪಟ್ಟಿದ್ದಾರೆ.. ಇನ್ನೊಬ್ಬ ವ್ಯಕ್ತಿ ಸುರೇಶ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಪ್ರಕರಣದಲ್ಲಿ ನಂದೀಶ್ ಮತ್ತು ಸೃಷ್ಟಿ  ಪರಸ್ಪರ ಪ್ರೀತಿಸುತ್ತಿದ್ದು ಇವರಿಗೆ ಕಿರಣ್ ಮತ್ತು ಸುರೇಶ್ ಬೆಂಬಲ ನೀಡುತ್ತಿದ್ದರು ಆದರೆ  ಎರಡು ದಿನಗಳ ಹಿಂದೆ ಇಬ್ಬರು ಓಡಿ ಹೋಗಿ ಹೈದ್ರಾಬಾದ್ ನಲ್ಲಿ ಇದ್ದು ವಾಪಸ್ ಬಂದಿದ್ದರು .

 ಆದರೆ ಇಂದು  ಪೊಲೀಸ್ ಠಾಣೆಗೆ ಬಂದಾಗ  ಹುಡುಗಿ ಹುಡುಗನೊಂದಿಗೆ ಹೋಗುವುದಾಗಿ ಹೇಳಿದ್ದಾಳೆ.  ಇದರಿಂದ ಕೆರಳಿದ ಹುಡುಗಿಯ ಸಹೋದರ ಮತ್ತು ಅವನ ಸ್ನೇಹಿತರು  ನಂದೀಶನ ಸ್ನೇಹಿತರಾದ ಕಿರಣ್ ಮತ್ತು ಸುರೇಶ್ ಇವರಿಬ್ಬರಿಗೆ ಪ್ರೀತಿಸಲು ಸಹಾಯ ಮಾಡಿದ್ದು ಇವರೇ ಇವರನ್ನು ಬದುಕಲು ಬಿಡಬಾರದು ಎಂದು   ಚಾಕುವಿನಿಂದ ಇಬ್ಬರನ್ನು ಇರಿದಿದ್ದಾರೆ.

ಹುಡುಗ ಮತ್ತು ಹುಡುಗಿ ಇಬ್ಬರೂ ಎಸ್‌ಸಿ ಸಮುದಾಯಕ್ಕೆ ಸೇರಿದವರು ಎಂದು ತಿಳಿದುಬಂದಿದೆ.







ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.