2 ನೇ ವಿಶ್ವ ಧ್ಯಾನ ದಿನಾಚರಣೆ: ಶಿವಮೊಗ್ಗ ಸಂಚಾರಿ ಪೊಲೀಸರಿಗೆ "ಧ್ಯಾನ ಯೋಗ"ದ ಸ್ಪರ್ಶ.
ವಿಶ್ವ ಧ್ಯಾನ ದಿನಾಚರಣೆಯನ್ನು ಸಂಚಾರಿ ಪೊಲೀಸ್ ಸಿಬ್ಬಂದಿಯೊಂದಿಗೆ ಆಚರಿಸಲಾಯಿತು.
ಕಣದ ಯೋಗ ಕೇಂದ್ರ ವತಿಯಿಂದ ಆಯೋಜಿಸಲಾಗಿದ್ದ ಈ ಸಂದರ್ಭದಲ್ಲಿ ಯೋಗ ಗುರುಗಳಾದ ಅನಿಲ್ ಶೆಟ್ಟರ್, ಅಧ್ಯಕ್ಷರಾದ ಮಂಜು ಬೆಳಗೂರು, ಯೋಗ ಅಭ್ಯರ್ಥಿಗಳಾದ ಮಂಜು ಕರ್ನಲ್ಲಿ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಮ್ಯಾನೇಜರ್, ರಘುನಾಥ್, ಹರ್ಷ ಭಾಗವಹಿಸಿದ್ದರು. ಈ ಒಂದು ಅದ್ಭುತ ಕಾರ್ಯದಲ್ಲಿ ಸಂಚಾರಿ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಮತ್ತು ಸಿಬ್ಬಂದಿಯವರು ಸಹಾಯದಿಂದ ವಿಶ್ವ ಧ್ಯಾನ ದಿನಾಚರಣೆಯನ್ನು ಆಚರಿಸಲಾಯಿತು.
ಶಿವಮೊಗ್ಗ, ಡಿ.21 :2ನೇ ವಿಶ್ವ ಧ್ಯಾನ ದಿನಾಚರಣೆಯ ಪ್ರಯುಕ್ತ ಡಿಸೆಂಬರ್ 21 ಭಾನುವಾರದಂದು ಬೆಳಿಗ್ಗೆ 6.30 ರಿಂದ 7.30 ರವರೆಗೆ ಶಿವಮೊಗ್ಗ ನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಾಗಿ “ಧ್ಯಾನ ಯೋಗದ ಮಹತ್ವ ಮತ್ತು ಅಭ್ಯಾಸ” ಕಣಾದ ಯೋಗ ಫೌಂಡೇಶನ್ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಕಣಾದ ಯೋಗ ಫೌಂಡೇಷನ್‌ನ ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್. ಶೆಟ್ಟರ್ ಅವರು ಸಂಗೀತದ ಹಿನ್ನೆಲೆಯಲ್ಲಿ ಸಪ್ತ ಚಕ್ರ ಧ್ಯಾನದಿಂದ ದೇಹ–ಮನಸ್ಸಿನ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳ ಕುರಿತು ವಿವರಿಸಿ, ಪ್ರಾಯೋಗಿಕ "ಚಕ್ರ ಧ್ಯಾನಾಭ್ಯಾಸ"ವನ್ನು ನಡೆಸಿಕೊಟ್ಟರು. ಈ ಧ್ಯಾನಾಭ್ಯಾಸವು ಮಾನಸಿಕ ಶಾಂತಿ, ಏಕಾಗ್ರತೆ, ಆಂತರಿಕ ಸಮತೋಲನ ಮತ್ತು ಒತ್ತಡ ನಿವಾರಣೆಗೆ ಸಹಕಾರಿಯಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಾಫಿಕ್ CPI ದೇವರಾಜ್ ಅವರು, ನಿರಂತರ ಒತ್ತಡದ ಮಧ್ಯೆ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಧ್ಯಾನವು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯಂತ ಅಗತ್ಯವಾಗಿದ್ದು, ನಿತ್ಯ ಜೀವನದಲ್ಲಿ ಧ್ಯಾನವನ್ನು ಅಳವಡಿಸಿಕೊಂಡರೆ ಕೆಲಸದ ದಕ್ಷತೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಧ್ಯಾನಾಭ್ಯಾಸದಲ್ಲಿ ಭಾಗವಹಿಸಿದ ಪೊಲೀಸ್ ಸಿಬ್ಬಂದಿಗಳು ತಮ್ಮ ಅದ್ಭುತ ಹಾಗೂ ಆಂತರಿಕ ಅನುಭವಗಳನ್ನು ಹಂಚಿಕೊಂಡು, ಇಂತಹ ಕಾರ್ಯಕ್ರಮಗಳು ಮನಸ್ಸಿಗೆ ಹೊಸ ಶಕ್ತಿ ತುಂಬುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಣಾದ ಯೋಗ ಫೌಂಡೇಷನ್ ಅಧ್ಯಕ್ಷ ಬೆಲಗೂರು ಮಂಜುನಾಥ್, ಯೋಗಬಂಧುಗಳಾದ ಹರ್ಷ, ರಘುನಾಥ್ ಹಾಗೂ ಮಂಜು ಕರ್ನಲ್ಲಿ ಸ್ಟಾರ್ ಹೆಲ್ತ್ ಬ್ರಾಂಚ್ ಮ್ಯಾನೇಜರ್ ಶಿವಮೊಗ್ಗ ಅವರು ಧ್ಯಾನ ಪ್ರಾತ್ಯಕ್ಷಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕಾರ ನೀಡಿದರು.
ವಿಶ್ವ ಧ್ಯಾನ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮ ಪೊಲೀಸ್ ಸಿಬ್ಬಂದಿಯಿಂದ ಉತ್ತಮ ಸ್ಪಂದನೆ ಪಡೆದಿತು.

Leave a Comment