ಕಳಪೆ ಬೀಜದಿಂದ ಬೆಳೆ ನಷ್ಟ ತಡೆಯಲು ಬೀಜ ಮೊಳಕೆ ಪರೀಕ್ಷೆ ಅನಿವಾರ್ಯ

ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ  ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿಎಸ್ಸಿ ಆನರ್ಸ್ ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ  ಅಂಗವಾಗಿ ಬೀಜ ಮೊಳಕೆ ಹೊಡೆಯುವ ಪರೀಕ್ಷೆ ಪ್ರಾಮುಖ್ಯತೆ ಮತ್ತು ಮಾಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿತಯನ್ನು ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಬೆಳೆ ಎಷ್ಟೇ ದೊಡ್ಡದಾಗಿ ಬೆಳೆದರೂ ಅದು ಹುಟ್ಟುವುದು .ಬೀಜದಿಂದಲೇ ಕೆಲವೊಮ್ಮೆ ಎಷ್ಟೇ ಬೀಜಗಳನ್ನು ಬಿತ್ತಿದ್ದರು ಎಲ್ಲವೂ ಒಳ್ಳೆಯ ಬೆಳೆಯಾಗಿ ಹೊರಹೊಮ್ಮುವುದಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಬೀಜ ಮೊಳಕೆಯೊಡೆಯರುವುದು. ಆದ್ದರಿಂದ ಮೊಳಕೆ ಪರೀಕ್ಷೆ ಮಾಡಿದರೆ ಬೀಜಗಳ ಮೊಳಕೆ ಒಡೆಯುವಿಕೆಯ ಪ್ರಮಾಣವನ್ನು ತಿಳಿದುಕೊಳ್ಳಬಹುದು. ಇದನ್ನು ಮಾಡುವುದರಿಂದ ರೈತರಿಗೆ ಆಗುವ ನಷ್ಟ ಮತ್ತು ಸಮಯವನ್ನು ಉಳಿಸಬಹುದು. ಇದರ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಪ್ರಾತ್ಯಕ್ಷಿತೆಯನ್ನು ಏರ್ಪಡಿಸಲಾಗಿತ್ತು. 

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪ್ರಿಯಾ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರು ಕೃಷಿ ವಿಜ್ಞಾನದ ಮಹಾವಿದ್ಯಾಲಯ ಇರುವಕ್ಕಿ ಆಗಮಿಸಿದ್ದರು . ಮೊದಲಿಗೆ ಡಾ. ಪ್ರಿಯಾ ಅವರು ಕೃಷಿಯಲ್ಲಿ ಬೀಜದ ಮಹತ್ವ ಮತ್ತು ಅದು ಮೊಳಕೆ ಹೊಡೆಯುವಾಗ ಯಾವ ಯಾವ ಪ್ರಕ್ರಿಯೆಗಳು ಭಾಗಿಯಾಗುತ್ತವೆ ಎಂದು ಹೇಳಿದರು. ನಂತರ ಬೀಜ ಮೊಳಕೆ ಒಡೆಯ ಪರೀಕ್ಷೆ ಪ್ರಾಮುಖ್ಯತೆಯನ್ನು ರೈತರಿಗೆ ತಿಳಿಸಿದರು ಮತ್ತು ಹೇಗೆ ಕಾಗದ ಮತ್ತು ಮರಳನ್ನು ಬಳಸಿ ಮನೆಯಲ್ಲೇ ತಾವು ಬೆಳೆಯುವ ಬೀಜಗಳನ್ನು ಪರೀಕ್ಷೆ ಮಾಡಬಹುದೆಂದು ತಿಳಿಸಿ ಪ್ರಾತ್ಯಕ್ಷಿತವಾಗಿ ಮಾಡಿ ತೋರಿಸಿದರು.

 ನೆರೆದಿದ್ದ ರೈತರಿಂದ ಬೀಜ ಮೊಳಕೆ ಪರೀಕ್ಷೆ ಮಾಡಿಸಲಾಯಿತು. 
ಕಾರ್ಯಕ್ರಮದ ಹಂತದಲ್ಲಿ ರೈತರು ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು. ಸುಮಾರು 60ಕ್ಕೂ  ಹೆಚ್ಚು ರೈತರ ಭಾಗವಹಿಸಿ ಈ ಕಾರ್ಯಕ್ರಮ ಸದುಪಯೋಗ ಪಡೆದುಕೊಂಡರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.