ಆಟೋ ಕಾಂಪ್ಲೆಕ್ಸ್ ನಿರ್ಮಿಸಲು ಮೆಕಾನಿಕ್ ಮತ್ತು ಆಟೋಮೋಬೈಲ್ ಮಾಲೀಕರ ಸಂಘದ ವತಿಯಿಂದ ಸರ್ಕಾರಕ್ಕೆ ಒತ್ತಾಯ.
ಶಿಕಾರಿಪುರ ನಗರದ ಹೊರ ವಲಯದಲ್ಲಿ ಆಟೋ ಕಾಂಪ್ಲೆಕ್ಸ್ ನಿರ್ಮಿಸಲು ಮೆಕಾನಿಕ್ ಮತ್ತು ಆಟೋಮೋಬೈಲ್ ಮಾಲೀಕರ ಸಂಘದ ವತಿಯಿಂದ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಲಯನ್ ಜಯರಾಜ್ ನಾಯ್ಡು ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶಿಕಾರಿಪುರ ಮೆಕಾನಿಕ್ ಮತ್ತು ಆಟೋಮೋಬೈಲ್ ಮಾಲೀಕರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಶಿಕಾರಿಪುರ ನಗರಕ್ಕೆ ಅವಶ್ಯಕತೆಯಾಗಿ ಆಟೋ ಕಾಂಪ್ಲೆಕ್ಸ್ ( ಸಣ್ಣ ಕೈಗಾರಿಕಾ ವಸಹಾತು ಪ್ರದೇಶ) ಮಂಜೂರಾತಿ ಮಾಡಲು ಸರ್ಕಾರಕ್ಕೆ ಒತ್ತಡ ತರಲು ಸಂಘದ 180 ಸದ್ಯಸರು ಒಗ್ಗಟ್ಟಾಗಿ ಸಂಘಟನೆ ಮಾಡಬೇಕು ಎಂದ ಅವರು ನಗರ ಪ್ರದೇಶದಲ್ಲಿ ಬಾಡಿಗೆಯ ಪ್ರಮಾಣ ಅಧಿಕವಾಗಿದ್ದು, ಸ್ಥಳಿಯರಿಂತ ಕಿರುಕುಳ ಮತ್ತು ಕಿರಿಕಿರಿಯಿಂದಾಗಿ ನಿಮ್ಮಗಳ ಸಂಸ್ಥೆಯ ನಿರ್ವಹಣೆ ಹಾಗೂ ಸಂಸಾರದ ನಿರ್ವಹಣೆ ಕಷ್ಟಕರವಾಗಿರುತ್ತದೆ ಆದ್ದರಿಂದ ಬಹು ಮುಖ್ಯವಾಗಿ ಈ ವಿಷಯದ ಕುರಿತು ಸರ್ಕಾರದ ಗಮನಕ್ಕೆ ತರಬೇಕೆಂದರು.
ಸರ್ವಾನುಮತದಿಂದ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯದ ಮುಜ್ಜು ಮಿಲ್ ರವರು ಮಾತನಾಡಿ ನಗರದಲ್ಲಿ ಸುಮಾರು 100 ಕ್ಕಿಂತ ಅಧಿಕ ಗ್ಯಾರೇಜ್ ಹಾಗೂ ಆಟೋಮೋಬೈಲ್‌ಗಳನ್ನು ಹೊಂದಿದ್ದು, ಸತತ ಸುಮಾರು 25 ವರ್ಷಕ್ಕಿಂತ ಅಧಿಕ ಸಮಯದಿಂದ ಆಟೋಮೋಬೈಲ್ ಮತ್ತು ಮೆಕಾನಿಕ್ ವೃತ್ತಿಯನು ನೆಡೆಸಿಕೊಂಡು ಬರುತ್ತಿದ್ದೇವೆ. 25 ವರ್ಷಗಳ ಮೊದಲು ನಮ್ಮ ಸಂಸ್ಥೆಗಳು ನೆಡೆಸುತ್ತಿದ್ದ ಜಾಗಗಳು ಖಾಲಿ ಪ್ರದೇಶಗಳಾಗಿದ್ದವು. ಇತ್ತಿಚೇಗೆ ಅತಿವೇಗದಲ್ಲಿ ನಗರ ಬೆಳವಣಿಗೆ ಹೊಂದುತ್ತಿದ್ದು, ನಮ್ಮ ಸಂಸ್ಥೆಗಳ ಇರುವ ಜಾಗಗಳು ನಾಗರಿಕ ವಸತಿ ಪ್ರದೇಶಗಳಾಗಿ ಮಾರ್ಪಾಡಾಗಿವೆ ಆದ್ದರಿಂದ ನಮ್ಮ ವೃತ್ತಿಯ ಸಮಯದಲ್ಲಿ ಉಂಟಾಗುವ ಹೆಚ್ಚಿನ ಜನದಟ್ಟಣೆ, ವಾಹನ ದಟ್ಟಣೆ, ಶಬ್ದಮಾಲಿನ್ಯ ವಾಯುಮಾಲಿನ್ಯದಿಂದ ಪರಿಸ ಮಾಲಿನ್ಯವಾಗುತ್ತಿದೆ ಆದ್ದರಿಂದ ನಗರಕ್ಕೆ ಸಮೀಪದಲ್ಲಿ ಪ್ರತ್ಯೇಕ ಸಣ್ಣ ಕೈಗಾರಿಕಾ ವಸಹಾತು ಪ್ರದೇಶದ ಅವಶ್ಯಕತೆಯಿದ್ದು ನಾವುಗಳು ಪ್ರತ್ಯೇಕ ಸಣ್ಣ ಕೈಗಾರಿಕಾ ವಸಹಾತು ಪ್ರದೇಶದ ಅವಶ್ಯಕತೆಗೆ ಹೋರಾಡಬೇಕು ಎಂದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಫಾರ್ವಿಜ್ ಖಾನ್ , ಪ್ರದಾನ ಕಾರ್ಯದರ್ಶಿ ರುದ್ರೇಶ್ , ಖಜಾಂಚಿ ಸಂತೋಷ್ ಗೌಡ, ಕಾರ್ಯದರ್ಶಿ ಇರ್ಫಾನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 10 ಎಸ್ ಕೆ ಪಿ 1 ಶಿಕಾರಿಪುರ ಪಟ್ಟಣದ ಮೆಕಾನಿಕ್ ಮತ್ತು ಆಟೋಮೋಬೈಲ್ ಮಾಲೀಕರ ಸಂಘದ ನೂತನ ಅದ್ಯಕ್ಷರಾಗಿ ಮುಜ್ಜು ಮಿಲ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Leave a Comment