ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಮನೆಯಲ್ಲೇ ಬಿಸ್ಕತ್ ತಯಾರಿಸುವುದರ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆ

ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಮನೆಯಲ್ಲೇ ಬಿಸ್ಕತ್ ತಯಾರಿಸುವುದರ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆಯಲ್ಲಿ ಡಾ.ಜ್ಯೋತಿ ರಾಥೋಡ್ ಪ್ರಾಧ್ಯಾಪಕರು ಆಹಾರ ವಿಜ್ಞಾನ ವಿಭಾಗ ಮತ್ತು ಡಾ. ಶಿಲ್ಪಾ ಸಹಾಯಕ ಪ್ರಾಧ್ಯಾಪಕರು ಕೃಷಿ ಸೂಕ್ಷ್ಮಜೀವಾಣುಶಾಸ್ತ್ರ  ವಿಭಾಗ ಉಪಸ್ಥಿತರಿದ್ದು ಮಾಹಿತಿ ನೀಡಿದರು.

 ಮಹಿಳೆಯರಿಗಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ನಮ್ಮ ಪ್ರಾಧ್ಯಾಪಕರು ಆರೋಗ್ಯದ ಮಹತ್ವ, ಸಮತೋಲನ ಆಹಾರದ ಅವಶ್ಯಕತೆ ಮತ್ತು ಮನೆಯಲ್ಲೇ ಉದ್ಯಮಿಯಾಗುವ ಮೂಲಕ ಸ್ವಯಂ ಉದ್ಯೋಗದ ಅವಕಾಶಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದರು. ಅವರು ಮಹಿಳೆಯರು ತಮ್ಮ ಆರೋಗ್ಯದತ್ತ ಹೆಚ್ಚು ಗಮನ ಹರಿಸಬೇಕು, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವುದರಿಂದ ದೇಹ ಮತ್ತು ಮನಸ್ಸು ತಾಜಾ ಆಗುತ್ತದೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕರು ರಾಗಿ ಬಿಸ್ಕತ್ ತಯಾರಿಸುವ ವಿಧಾನವನ್ನು ಸ್ಥಳದಲ್ಲೇ ಪ್ರದರ್ಶಿಸಿ, ಅದರ ಆರೋಗ್ಯಕಾರಿ ಗುಣಗಳ ಕುರಿತು ವಿವರಿಸಿದರು. ರಾಗಿಯು ಕಬ್ಬಿಣ, ಕ್ಯಾಲ್ಸಿಯಂ ಮತ್ತು ನಾರಿನ ಅಂಶಗಳಲ್ಲಿ ಸಮೃದ್ಧವಾಗಿದ್ದು, ಶಕ್ತಿಯುತ ಆಹಾರವಾಗಿದೆ ಎಂದು ತಿಳಿಸಿದರು. ಇಂತಹ ಪೌಷ್ಟಿಕ ಬಿಸ್ಕತ್‌ಗಳನ್ನು ಮನೆಯಲ್ಲೇ ತಯಾರಿಸಿ ಮಾರಾಟ ಮಾಡುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬಹುದು, ತಮ್ಮ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬ ಸಂದೇಶವನ್ನು ಅವರು ನೀಡಿದರು. ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ,ಅವರ ಪ್ರಶ್ನೆಗಳನ್ನು ಕೇಳಿ  ರಾಗಿ ಬಿಸ್ಕತ್ ತಯಾರಿಸುವ ಅನುಭವವನ್ನು ಪಡೆದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.