ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆ-ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂಗ್
ಶಿವಮೊಗ್ಗ,ನವೆಂಬರ್.12: ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆಯನ್ನು ಜಾರಿಗೊಳಿಸುವುದು ಹಾಗೂ ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂಗ್ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆಯವರು ಆದೇಶಿಸಿರುತ್ತಾರೆ.
ದ್ವಿಚಕ್ರ ವಾಹನ ನಿಲುಗಡೆ :
ಮಹಾನಗರಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ(ಕುಚಲಕ್ಕಿ ಕೇರಿ ಎದುರಿನಿಂದ ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ದ್ವಿಚಕ್ರ ಪಾರ್ಕಿಂಗ್. ಸಂಗಮ್ ಟೈಲರ್ ಶಾಪ್‌ನಿಂದ ಡಯಟ್ ಕಾಲೇಜ್ ಕ್ರಾಸ್(ಸಾವರ್ಕರ್ ನಗರ ಕ್ರಾಸ್)ವರೆಗೆ ಬಲ ಬದಿಯಲ್ಲಿ ದ್ವಿಚಕ್ರ ಪಾರ್ಕಿಂಗ್.
ನಾಲ್ಕು ಚಕ್ರದ ವಾಹನ ನಿಲುಗಡೆ ನಿಷೇಧ:
ಬಿ.ಹೆಚ್.ರಸ್ತೆ: ಅಮೀರ್ ಅಹ್ಮದ್ ಸರ್ಕಲ್ ವೆಂಕಟೇಶ್ವರ ಸ್ವೀಟ್ ಹೌಸ್‌ನಿಂದ ಕರ್ನಾಟಕ ಸಂಘ ಸರ್ಕಲ್‌ವರೆಗೆ ರಸ್ತೆಯ ಎಡಬಲ ಬದಿಯಲ್ಲಿ.
ಗಾಂಧಿ ಬಜಾರ್ ಮುಖ್ಯ ರಸ್ತೆ: ಶಿವಪ್ಪನಾಯಕ ಸರ್ಕಲ್‌ನಿಂದ ಗಾಂಧಿಬಜಾರ್ 02ನೇ ಕ್ರಾಸ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆ ನಿಷೇಧ.
ನೆಹರು ರಸ್ತೆ: ನೆಹರು ರಸ್ತೆಯಲ್ಲಿ ಗೋಪಿ ಸರ್ಕಲ್‌ನಿಂದ ಅಮೀರ್ ಅಹ್ಮದ್ ಸರ್ಕಲ್‌ವರೆಗೆ ಶಿವಮೊಗ್ಗ ಸ್ಮಾರ್ಟ್ಸಿಟಿ ವತಿಯಿಂದ ವಾಹನಗಳ ಪಾರ್ಕಿಂಗ್ ಸಲುವಾಗಿ ಅಭಿವೃದ್ದಿಪಡಿಸಿರುವ ಕನ್ಸರ್ವೆನ್ಸಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಜಾರಿಯಾದ ನಂತರ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ನಿಷೇಧ ಮಾಡಲಾಗಿದ್ದು ಈ ಅಧಿಸೂಚನೆಯನ್ನು ನ.11 ರಂದು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
--------------------
ನಗರದೊಳಗೆ ಭಾರೀ ವಾಹನಗಳ ಸಂಚಾರ ನಿಷೇಧ: ಡಿಸಿ ಆದೇಶ
ಶಿವಮೊಗ್ಗ,ನವೆಂಬರ್.12: ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮೋಟಾರು ವಾಹನ ಕಾಯ್ದೆ 1998 ಕಲಂ 115 ರ ಅನ್ವಯ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989 ರ ನಿಯಮ 221(ಎ)(5) ರನ್ವಯ ಶಿವಮೊಗ್ಗ ನಗರ ಗೋಪಿ ಸರ್ಕಲ್‌ನಿಂದ ಜೆಪಿಎನ್ ರಸ್ತೆ, ಜ್ಯುವೆಲ್ ರಾಕ್ ಹೊಟೇಲ್ ರಸ್ತೆ ಮಾರ್ಗವಾಗಿ ಕುವೆಂಪು ರಸ್ತೆ ಮತ್ತು ಜೈಲ್ ರಸ್ತೆ ಮೂಲಕ ಲಕ್ಷ್ಮಿ ಟಾಕೀಸ್ ವರೆಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಭಾರೀ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
Leave a Comment