ಗ್ರಾಮೀಣ ಕೃಷಿ ಕಾರ್ಯಾನುಭವ ದ್ರವ ಸಾವಯವ ಗೊಬ್ಬರಗಳ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆ
ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ದ್ರವ ಸಾವಯವ ಗೊಬ್ಬರಗಳ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆಯಲ್ಲಿ ಮಾಹಿತಿ ನೀಡಿದರು .
ಇತ್ತೀಚಿನ ಕೃಷಿಯಲ್ಲಿ ದ್ರವ ಸಾವಯವ ಗೊಬ್ಬರಗಳ ಬಳಕೆ ಅತ್ಯಂತ ಅಗತ್ಯವಾಗಿದೆ ಎಂದು ನಮ್ಮ ಪ್ರಾಧ್ಯಾಪಕರಾದ ಡಾ.ಸೋಮಶೇಖರಪ್ಪ ಹೇಳಿದರು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಮಣ್ಣಿನ ಆರೋಗ್ಯ ಹಾಳಾಗಲು ಕಾರಣವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ, ಜೀವಾಮೃತ, ಪಂಚಗವ್ಯ, ಬೀಜಾಮೃತ ಮುಂತಾದ ದ್ರವ ಗೊಬ್ಬರಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಮಣ್ಣಿನ ಜೀವಸತ್ವವನ್ನು ಪುನಃ ಸ್ಥಾಪಿಸುತ್ತವೆ ಎಂದು ಹೇಳಿದರು.
ದ್ರವ ಸಾವಯವ ಗೊಬ್ಬರಗಳ ಬಳಕೆ ಕೃಷಿ ಬೆಳೆಗಳಿಗೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಇದು ಮಣ್ಣಿನ ಸೂಕ್ಷ್ಮಾಣು ಜೀವಿಗಳ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ, ಬೆಳೆಗಳ ಬೇರುಗಳ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಮತ್ತು ರಾಸಾಯನಿಕ ಗೊಬ್ಬರಗಳ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಜೀವಾಮೃತದ ಬಳಕೆ ಬೆಳೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ರೈತರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ನೀಡುತ್ತದೆ.ಇಂತಹ ದ್ರವ ಜೈವಿಕ ಗೊಬ್ಬರಗಳ ಬಳಕೆ ಮುಂದಿನ ಪೀಳಿಗೆಗಳಿಗೂ ಸಮೃದ್ಧ ಕೃಷಿ ವ್ಯವಸ್ಥೆಯನ್ನು ನೀಡುವಲ್ಲಿ ಸಹಾಯಕವಾಗುತ್ತದೆ ಎಂದು ತಿಳಿಸಿಕೊಟ್ಟರು.
ನಮ್ಮ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಹಾಜರಿದ್ದ ರೈತರೊಂದಿಗೆ ಸಂವಾದ ನಡೆಸಿ, ಅವರು ಕೇಳಿದ ಪ್ರಶ್ನೆಗಳಿಗೆ ಸಹನೆಯುತವಾಗಿ ಉತ್ತರ ನೀಡಿದರು.

Leave a Comment