ಮೌಲ್ಯಮಯ ಬೆಳೆಗಾಗಿ ನಿಖರ ಬೀಜ ಮೊಳಕೆ ಪರೀಕ್ಷೆ
ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬೀಜ ಮೊಳಕೆಯೊಡೆಯುವ ಪರೀಕ್ಷೆಯ ಕುರಿತು ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆಯಲ್ಲಿ ಮಾಹಿತಿ ನೀಡಿದರು .
ಬೀಜ ಮೊಳಕೆಯೊಡೆಯುವ ಪರೀಕ್ಷೆ ಮಾಡುವುದು ಅತ್ಯಂತ ಅವಶ್ಯಕ, ಏಕೆಂದರೆ ಇದು ಬೀಜಗಳಲ್ಲಿ ಎಷ್ಟು ಪ್ರತಿಶತ ಆರೋಗ್ಯಕರ ಬೀಜಗಳು ಮೊಳೆತು ಉತ್ತಮ ಚೇತನವನ್ನು ನೀಡುತ್ತವೆ ಎಂಬುದನ್ನು ತಿಳಿಸುತ್ತದೆ. ಕೃಷಿಯಲ್ಲಿ ದುಬಾರಿ ಬೀಜಗಳನ್ನು ಬಿತ್ತಿದರೂ ಅವು ಮೊಳಕೆಯೇ ಬರದೇ ಹೋದರೆ ರೈತರಿಗೆ ನಷ್ಟ ಉಂಟಾಗುತ್ತದೆ. ಆದ್ದರಿಂದ ಈ ಪರೀಕ್ಷೆ ರೈತರಿಗೆ ವಿಶ್ವಾಸಾರ್ಹ ಮಾಹಿತಿ ನೀಡುತ್ತದೆ ಮತ್ತು ಉತ್ತಮ ಗುಣಮಟ್ಟದ ಬೀಜವನ್ನು ಆಯ್ಕೆ ಮಾಡುವಲ್ಲಿ ಸಹಾಯಕವಾಗುತ್ತದೆ ಎಂದು ತಿಳಿಸಿಕೊಟ್ಟರು.
ಇದರಲ್ಲಿ ಮೂರು ವಿಧಾನಗಳು ಸರಳವಾಗಿದ್ದು, ಸಾಮಾನ್ಯವಾಗಿ ಕಾಗದ ವಿಧಾನ, ಮರಳು ವಿಧಾನ, ಮಣ್ಣಿನ ವಿಧಾನಗಳನ್ನು ಬಳಸಲಾಗುತ್ತದೆ. ಕಾರ್ಯಕ್ರಮದಲ್ಲಿ ರೈತರ ಭಾಗವಹಿಸುವಿಕೆಯಿಂದ ಪರೀಕ್ಷೆಯನ್ನು ನೇರವಾಗಿ ತೋರಿಸಲಾಯಿತು. ಹಾಜರಿದ್ದ ರೈತರಿಗೆ ಬೀಜ ಆಯ್ಕೆ, ಬೀಜಗಳ ತೇವಾವಶ್ಯಕತೆ, ಒದ್ದೆ-ಒಣ ಪರಿಸ್ಥಿತಿಯ ಪರಿಣಾಮ, ಮೊಳೆದು ಬಂದ ಬೀಜಗಳ ಶೇಖರಣಾ ಮಹತ್ವ ಇತ್ಯಾದಿ ವಿವರಿಸಲಾಯಿತು. ರೈತರು ಕೇಳಿದ ಪ್ರಶ್ನೆಗಳಿಗೆ ಕ್ರಮವಾಗಿ ಉತ್ತರ ನೀಡಲಾಯಿತು. ಈ ಪ್ರದರ್ಶನದಿಂದ ರೈತರು ತಮ್ಮದೇ ಗ್ರಾಮದಲ್ಲಿ, ತಮ್ಮದೇ ಬೆಳೆ ಬೀಜಗಳ ಮೇಲೆ ಸರಳವಾಗಿ ಉಗುರುವು ಪರೀಕ್ಷೆ ಮಾಡಬಹುದು ಎಂಬ ನಂಬಿಕೆಯನ್ನು ಗಳಿಸಿದರು ಮತ್ತು ಕಾರ್ಯಕ್ರಮದಲ್ಲಿ ಊರಿನ ಮುಖ್ಯಸ್ಥರು, ರೈತರು ಮತ್ತು ವಿಧ್ಯಾರ್ಥಿಗಳು ಹಾಜರಿದ್ದರು.

Leave a Comment