ಯಡಿಯೂರಪ್ಪ ರವರ ಕನಸನ್ನು ಭಗ್ನಗೊಳಿಸಿದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್
ಶಿವಮೊಗ್ಗ: ಪ್ರತಿ ಜಿಲ್ಲೆಯಲ್ಲಿ ಇರು ಎಲ್ಲಾ ಪತ್ರಕರ್ತರ ಚಟುವಟಿಕೆ ಗಳಿಗೆ ಅನುಕೂಲವಾಗಲೆಂದು ಪತ್ರಿಕಾ ಭವನ ನಿರ್ಮಿಸಲು, ಬಿ.ಎಸ್.ಯಡಿಯೂರಪ್ಪ ರವರು ಸಿಂ.ಎಂ ಆಗಿದ್ದಾಗ ಒಳ್ಳೆಯ ಉದ್ದೇಶದಿಂದ 2008-2009 ಸಾಲಿನಲ್ಲಿ ವಾರ್ತಾ ಇಲಾಖೆಯ ಮೂಲಕ 25 ಲಕ್ಷ ಹಣ ಬಿಡುಗಡೆ ಮಾಡಿದ್ದರು. ಭವ್ಯವಾದ ಪತ್ರಿಕಾಭವನ ನಿರ್ಮಾಣದ ಕನಸು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರ ಕನಸು..ನಂತರ ಹಂತ ಹಂತವಾಗಿ ಹಣ ಬಿಡುಗಡೆ ಮಾಡಿದ್ದರು.ಇದು ಹೆಚ್ಚು ಕಡಿಮೆ ಎರಡು ಕೋಟಿ ಖರ್ಚು ಮಾಡಿ ಕಟ್ಟಿದ ಭವ್ಯ ಪತ್ರಿಕಾಭವನ ಇದಾಗಿದೆ.
ಇದೀಗ ಸದರಿ ಪತ್ರಿಕಾಭವನ ಪ್ರೆಸ್ ಟ್ರಸ್ಟ್ ನದು ಎಂದು ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಹೇಳಿಕೊಂಡು, ಸದರಿ ಜಾಗದಲ್ಲಿ ಪ್ರೆಸ್ ಮೀಟ್ ಮಾಡುವ ಆಯೋಜಕರಿಂದ ಮತ್ತು ಪ್ರೆಸ್ ನೋಟ್ ಹೆಸರಲ್ಲಿ ಹಣವಸೂಲಿ ದಂಧೇ ಮಾಡಿಕೊಂಡು, ತನಗೆ ಬೇಕಾದ ಪತ್ರಕರ್ತರಿಗೆ ಮಾತ್ರ ಪತ್ರಿಕಾಭವನಕ್ಕೆ ಪ್ರವೇಶ, ಇತರರಿಗೆ ಪ್ರವೇಶ ನೀಡದೇ ಅಟ್ಟಹಾಸ ಮರೆಯುತ್ತಿದ್ದಾನೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ 23 ಜನ ಪತ್ರಕರ್ತರು ಇರುವ ಖಾಸಾಗಿ ಟ್ರಸ್ಟ್ ಗೆ ಅಧ್ಯಕ್ಷ...ಅದರಲ್ಲಿ ಕೆಲವರು ಟ್ರಸ್ಡಿಗಳು ಈಗಾಗಲೇ ಬಿಟ್ಟು ಹೋಗಿದ್ದಾರೆ. ಟ್ರಸ್ಟ್ ವತಿಯಿಂದ ಪತ್ರಿಕಾಭವನ ಕ್ಕೆ ಹೋಗಲು ಪತ್ರಕರ್ತರಿಗೆ ಐಡಿ ಕಾರ್ಡ್ ಕೊಡಲಾಗುತ್ತದೆ ಎಂಬ ಹೊಸ ವರಸೆ ಆಟ ಶುರು ಮಾಡಿದ್ದಾನೆ.ಪೋಸ್ಟರ್ ಅಂಟಿಸಿದ್ದಾನೆ ಇವನದೇ ನಿಯಮ ಅಂತೇ..ಅದನ್ನೆಲ್ಲಾ ನೋಡಿದರೇ ಈತ ಸಂಪಾದಕ ಅಥವಾ ಪತ್ರಕರ್ತನಾಗಿರಲು ಯೋಗ್ಯನಾ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.ಈತನ ವಿದ್ಯಾಬ್ಯಾಸ ಏನು ಅಂತಾ ಗೊತ್ತಿಲ್ಲ.ಈತನ ನಡವಳಿಕೆ ನೋಡಿದರೇ ಬೇಸರ ತರಿಸುತ್ತದೆ. ಇದನ್ನೆಲ್ಲಾ ನೋಡಿಕೊಂಡು ನಮ್ಮ ಕೆಲವು ಹಿರಿಯಪತ್ರಕರ್ತರು ಈತನ ಬೆಂಬಲಕ್ಕೆ ನಿಂತಿದ್ದಾರೆ ಎಂದರೇ ಶೋಚನೀಯ...
ಹಾಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರ ಕೊಡುಗೆ ಅನುದಾನ ಸಹ ಪತ್ರಿಕಾಭವನಕ್ಕೆ ಬಿಡುಗಡೆ ಆಗಿದೆ..ಅವರ ಕನಸುಬಕೂಡ ಭಗ್ನ!!
ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗಲೂ ಮಾಜಿ MLA K.B.ಪ್ರಸನ್ನಕುಮಾರ್ ರವರು ಪತ್ರಿಕಾಭವನ ನಿರ್ಮಾಣದ ಸಲುವಾಗಿ 50 ಲಕ್ಷ ಬಿಡುಗಡೆ ಮಾಡುವಂತೇ ಕೋರಿದ್ದರು..ಅವರು ಸಹ ತಮ್ನ MLA ಫಂಡ್ ನಿಂದ 5 ಲಕ್ಷ ಕೊಟ್ಟಿದ್ದಾರೆ. ಅದೇ ರೀತಿ ಹಾಲಿ MP B.Y.ರಾಘವೇಂದ್ರ ಕೂಡ 10 ಲಕ್ಷ ಹಣ ಅನುದಾನ ನೀಡಿದ್ದಾರೆ. ಇಷ್ಟೊಂದು ಹಣ ಪತ್ರಿಕಾಭವನಕ್ಕೆ ಬೇಕಾ ಮಿನಿ ವಿಧಾನಸೌದ ಕಟ್ಟ ಬಹುದಾಗಿತ್ತು...ಇನ್ನು ಹಲವಾರು MLC, ಗಣ್ಯರು ಸಹ ಪತ್ರಿಕಾಭವನಕ್ಕೆ ಹಣ ನೀಡಿದ್ದಾರೆ.
ಇವರೆಲ್ಲರೂ ಹಣ ಕೊಟ್ಟಿದ್ದು, ಎಲ್ಲಾ ಪತ್ರಕರ್ತರ ಚಟುವಟಿಕೆಗಳಿಗೆ ಪ್ರೆಸ್ ಮೀಟ್ ಗೆ ಹೋಗಲು ಅನುಕೂಲವಾಗುವಂತೆ ಪತ್ರಿಕಾಭವನ ನಿರ್ಮಾಣವಾಗಲಿ ಎಂಬುದು ಆಗಿತ್ತು..ಆದರೇ ಟ್ರಸ್ಟ್ ಅಧ್ಯಕ್ಷ ಪತ್ರಿಕಾಭವನದ ಬೀಗ ಹಾಕಿ ಇಟ್ಟು ಕೊಂಡಿದ್ದಾನೆ.ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ನನ್ನು ಪತ್ರಿಕಾಭವನದಿಂದ ಹೊರ ಹಾಕಬೇಕು. ಆಗ ಎಲ್ಲಾ ಪತ್ರಕರ್ತರಿಗೆ ಪತ್ರಿಕಾಭವನಕ್ಕೆ ಪ್ರೆಸ್ ಮೀಟ್ ಗೆ ಹೋಗಲು ಪ್ರವೇಶ ಅವಕಾಶ ಸಿಗುತ್ತದೆ.
KWJV ಸಂಘಟನೆ ಶಿವಮೊಗ್ಗ ಘಟಕದಿಂದ ಸುಮಾರು 10 ತಿಂಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿರುತ್ತೆವೆ.ಹಲವಾರು ದೂರುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾಗಿದೆ. ಮಾನ್ಯ ಜಿಲ್ಲಾಧಿಕಾರಿ ಗಳು ಏನು ಪತ್ರಿಕಾಭವನಕ್ಕೆ ಹೋಗಲು ಮುಕ್ತವಾದ ಅವಕಾಶ ನೀಡಿದ್ದಾರೆ. ಆದರೇ ಇವರ ಆದೇಶಕ್ಕೆ ಕಿಮ್ಮತ್ತಿಲ್ಲ ಅಂತಲೇ ಹೇಳಬಹುದು...ಇದನ್ನೆಲ್ಲಾ ನೋಡಿಕೊಂಡು ನಮ್ಮ ಜನಪ್ರತಿನಿಧಿಗಳು...ಉಸ್ತುವಾರಿ ಸಚಿವ ಮಧುಬಂಗಾರಪ್ಪ ಮೌನವಾಗಿದ್ದಾರೆ...ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ.ಅವರಿಗೆ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಮತ್ತು ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತ್ರ ಮುಖ್ಯ...ಇನ್ನು ಯಾರು ಬೇಕಿಲ್ಲ ಅನಿಸುತ್ತದೆ....
ಈ ಪತ್ರಿಕಾಭವನ ಸರ್ಕಾರದ ಜನಪ್ರತಿನಿಧಿಗಳ ಹಣದಿಂದ ಮತ್ತು ಸರ್ಕಾರದ ಅನುದಾನದಿಂದ ಮತ್ತು PWD ಇಲಾಖೆ ವಿಶೇಷ ವಿಭಾಗ ಇವರು ಪ್ರೆಸ್ ಮೀಟ್ ನಡೆಯುವ ಹಾಲ್ ರಿನೋವೇಷನ್ ಗೆ ಒಂದು ಕೋಟಿ ಖರ್ಚು ಮಾಡಿದೆ.ಈ ರೀತಿಯಲ್ಲಿ ನಿರ್ಮಾಣವಾದ ಪತ್ರಿಕಾಭವನದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್ ಮಂಜುನಾಥ್ ಸೇರಿಕೊಂಡು. ಪತ್ರಕರ್ತರ ನಡುವೆ ತಾರತಮ್ಯ ಬೇದಭಾವ,ಮಾಡಿ ಕೆಲವು ಪತ್ರಕರ್ತರಿಗೆ ಪತ್ರಿಕಾಭವನಕ್ಕೆ ಹೋಗಲು ನಿರ್ಭಂದ ಹಾಕಿ ತನ್ನದೇ ಖಾಸಾಗಿ ಸ್ವತ್ತು ಮಾಡಿಕೊಂಡಿದ್ದಾನೆ.ಇದನ್ನೆಲ್ಲಾ ನೋಡಿಕೊಂಡು ನಾವು ಸುಮ್ಮನಿರಬೇಕಾ? ಇವನ ಅಪ್ಪನದಾ ಪತ್ರಿಕಾ ಭವನ....ನೋಡಿ ಮುಂದೇನಾಗುತ್ತದೆ ಕಾದು ನೋಡಿ....
ನಾವು ಸರ್ಕಾರದ ಪತ್ರಿಕಾಭವನ ಎಂದು ಹೋರಾಟ ಮಾಡಿ ಯಶಸ್ವಿ ಆಗಿದ್ದೆವೆ.ಇದೀಗ ನಿವೃತ್ತ ನ್ಯಾಯಾಧೀಶರು ನೀಡಿದ 42 ಪುಟಗಳ ವರಧಿಯಿಂದ ಮತ್ತು ಜಿಲ್ಲಾಧಿಕಾರಿ ಗಳು ನೀಡಿದ 15 ಪುಟಗಳ ವರಧಿಯಿಂದ ಇದು ಸರ್ಕಾರದ ಒಡೆತನದ ಪತ್ರಿಕಾಭವನ ಸಾರ್ವಜನಿಕರ ಸ್ವತ್ತು ಎಂದು ಸಾಬೀತು ಆಗಿದೆ. ಎಲ್ಲಾ ಪತ್ರಕರ್ತರಿಗೆ ಪತ್ರಿಕಾಭವನಕ್ಕೆ ಹೋಗಲು ಮುಕ್ತವಾದ ಪ್ರವೇಶವಿದೆ. ನಿರ್ಬಂಧಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಗಳು ವರದಿಯಲ್ಲಿ ನಮೋದಿಸಿದರೂ ಸಹ ಅದನ್ನು ಕೇಳುವ ಸ್ಥಿತಿಯಲ್ಲಿ ಟ್ರಸ್ಟ್ ಅಧ್ಯಕ್ಷ ಇಲ್ಲ.ಈತನಿಗೆ ಹೇಳುಔರು ಕೇಳುಔರು ಇಲ್ಲದಂತಾಗಿದೆ.ಆಗಾಗಿ ನಾವು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದೆವೆ.
ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಈತನ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕಿದೆ.ಈತ ಎನ್.ಮಂಜುನಾಥ್ ಎಲ್ಲಿ ಕಾಲಿಡುತ್ತಾನೆ ಅಲ್ಲೆಲ್ಲಾ ಇದೇ ಸಮಸ್ಯೆ...ಉಪ್ಪಾರ ಸಮಾಜದಲ್ಲಿ ಹೊರಗೆ ಹಾಕಿದ್ದಾರೆ....ಅದೇ ರೀತಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ...ಈತ ಟ್ರಸ್ಟ್ ನಲ್ಲಿ ಕೇವಲ 23 ಜನ ಪತ್ರಕರ್ತರು ಇದ್ದಾರೆ ಅದಕ್ಕೆ ಈತ ಅಧ್ಯಕ್ಷ...ಈತ ಯಾವುದೇ ಪತ್ರಕರ್ತರ ಸಂಘಟನೆ ಯಲ್ಲಿ ಪಧಾಧಿಕಾರಿ ಅಥವಾ ಸದಸ್ಯನಾಗಿಲ್ಲ.ಈತ ಶಾಶ್ವತ ಅಧ್ಯಕ್ಷ ಟ್ರಸ್ಟ್ ನಲ್ಲಿ...
ಬಿ.ಎಸ್.ಯಡಿಯೂರಪ್ಪ ರವರ ಕನಸನ್ನು ಮತ್ಯು ಮುಖ್ಯಮಂತ್ರಿ ಸಿದ್ದರಾಮಯ್ಯ ರವರ, ಹಾಗೂ ಜನಪ್ರತಿನಿಧಿಗಳ ಕನಸನ್ನು ಭಗ್ನಗೊಳಿಸಿದ್ದಾನೆ ಅಂತಲೇ ಹೇಳಬಹುದು.ಈತನಿಗೆ ತಕ್ಕಪಾಠವನ್ನು ಕಲಿಸದೇ ಬಿಡುವುದಿಲ್ಲ...ಇವನ ಅಟ್ಟಹಾಸಕ್ಕೆ ಬ್ರೇಕ್ ಹಾಕದೇ ಬಿಡುವುದಿಲ್ಲ.. KWJV ಸಂಘಟನೆ ಶಿವಮೊಗ್ಗ ಘಟಕ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ.....
ಡಿ.ಜಿ.ನಾಗರಾಜ
ಸಂಪಾದಕರು
ಹಲೋ ಶಿವಮೊಗ್ಗ ದಿನಪತ್ರಿಕೆ
ಜಿಲ್ಲಾಧ್ಯಕ್ಷರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ,
ಶಿವಮೊಗ್ಗ ಘಟಕ
ಮೊ.9449063043

Leave a Comment