ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ರಸಗೊಬ್ಬರದ ಕಲಬೆರಿಕೆಯ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆ
ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ರಸಗೊಬ್ಬರದ ಕಲಬೆರಿಕೆಯ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆಯಲ್ಲಿ ಮಾಹಿತಿ ನೀಡಿದರು .
ರಸಗೊಬ್ಬರವು ರೈತರ ಬೆಳೆ ಬೆಳವಣಿಗೆಯ ಪ್ರಮುಖ ಅಂಶವಾಗಿದ್ದು, ಅದರ ಗುಣಮಟ್ಟ ಕಾಪಾಡುವುದು ಅತ್ಯಂತ ಅಗತ್ಯ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ರಸಗೊಬ್ಬರ ಮಿಶ್ರಣ ಹೆಚ್ಚುತ್ತಿರುವುದರಿಂದ ರೈತರು ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ರಸಗೊಬ್ಬರದ ಗುಣಮಟ್ಟವನ್ನು ತಿಳಿಯಲು ರೈತರು ಬಣ್ಣ, ವಾಸನೆ, ಕಣಗಳ ಅಳತೆ ಮತ್ತು ನೀರಿನಲ್ಲಿ ಕರಗುವಿಕೆ ಮುಂತಾದ ಲಕ್ಷಣಗಳನ್ನು ಗಮನಿಸಬಹುದು. ನಿಜವಾದ ರಸಗೊಬ್ಬರವು ಸಮಪ್ರಮಾಣವಾಗಿ ಕರಗುತ್ತದೆ, ಆದರೆ ಮಿಶ್ರಿತ ಗೊಬ್ಬರದಲ್ಲಿ ಕಣಗಳು ಕೆಳಭಾಗದಲ್ಲಿ ಉಳಿಯುತ್ತವೆ ಎಂದು ವಿಧ್ಯಾರ್ಥಿಗಳು ಮಾಹಿತಿ ನೀಡಿದರು.
ರಸಗೊಬ್ಬರದ ಗುಣಮಟ್ಟವನ್ನು ಪರಿಶೀಲಿಸುವುದರಿಂದ ರೈತರು ಉತ್ತಮ ಬೆಳೆ ಉತ್ಪಾದನೆ ಪಡೆಯಲು, ಭೂಮಿಯ ಉರ್ವರತೆ ಕಾಪಾಡಲು ಮತ್ತು ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು ಮತ್ತು ರೈತರ ಪ್ರಶ್ನೆಗಳಿಗೆ ಉತ್ತರ ನೀಡಿ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು.

Leave a Comment