ಗೌರಿ ಗಣೇಶ ಹಬ್ಬದ ಹಿನ್ನೆಲೆ ನಾವು ಕೆಲವು ಸಿದ್ದತೆ ಮಾಡಿಕೊಂಡಿದ್ದೆವೆ: ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ

ಶಿವಮೊಗ್ಗ:  ಗೌರಿ ಗಣೇಶ ಹಬ್ಬ ಅದರ ಪ್ರಯುಕ್ತವಾಗಿ ನಮ್ಮ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ರೀತಿಯಿಂದನು ನಾವು ಸಿದ್ಧತೆ ಮಾಡ್ಕೊಳ್ತಾ ಇದ್ದೇವೆ. ಗಣೇಶ ಮೂರ್ತಿ ಕೂಡಿಸೋದು ಆಯ್ತು ಪ್ರೊಸೆಶನ್ ಆಯ್ತು ವಿಸರ್ಜನಾ ಸ್ಥಳ ಆಯ್ತು, ಎಲ್ಲ ಕಡೆನೂ ನಾವು ಸ್ವಲ್ಪ ವ್ಯವಸ್ಥೆಗಳನ್ನ ಈಗ ಮಾಡಿಸ್ತಾ ಇದ್ದೇವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಹೇಳಿದರು.

ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೇಟಿ ಮಾಡಿ ಹಲೋ ಶಿವಮೊಗ್ಗ ದಿನಪತ್ರಿಕೆ ವತಿಯಿಂದ ಮಾತನಾಡಿಸಿದಾಗ ಗೌರಿ ಗಣೇಶ ಹಬ್ಬದ ಹಿನ್ನೆಲೆ ನಾವು ಕೆಲವು ಸಿದ್ದತೆ ಮಾಡಿಕೊಂಡಿದ್ದೆವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ನುಡಿದರು.ಸಮಸ್ತ ಜಿಲ್ಲೆಯ ಎಲ್ಲಾ ನಾಗರಿಕರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸುತ್ತಾ ಮಾತನಾಡಿದರು. ಒಂದು ಉತ್ತಮವಾಗಿ ಶಾಂತಿಯುತವಾಗಿ ಒಂದು ಒಳ್ಳೆ ವ್ಯವಸ್ಥೆಯಿಂದ ನಮ್ಮ ಗಣೇಶ ಹಬ್ಬ ನಡೆಯಲಿ ಅಂತ ಹೇಳಿ ನಾನು ಆಶಿಸ್ತಾ ಇದ್ದೀನಿ ಎಂದರು. 

ಸಿಂಗಲ್ ವಿಂಡೋ ಸಿಸ್ಟಮ್ಸ್ ಅನ್ನೆಲ್ಲ ನಾವು ಎಲ್ಲಾ ಕಡೆ ಈಗ ಸೆಟ್ ಮಾಡಿದ್ದೀವಿ. ಪ್ರಮುಖವಾಗಿ ಶಿವಮೊಗ್ಗ ನಗರ ಸಾಗರ ಭದ್ರಾವತಿಯಲ್ಲಿ ನಮ್ಮಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇಡೋದನ್ನ ನಾವು ಗಮನಿಸಿದ್ದೀವಿ. ಅಲ್ಲಿ ಸ್ವಲ್ಪ ಇನ್ನು ವಿಶೇಷ ಸಿದ್ಧತೆಗಳನ್ನ ಮಾಡ್ಕೋಬೇಕಾಗುತ್ತೆ. ಆಮೇಲೆ ಪ್ರೊಸೆಷನ್ಸ್ ಎಲ್ಲೆಲ್ಲಿ ನಡೆಯುತ್ತೆ , ಅಲ್ಲಿ ಸಹಿತ ಸಾಕಷ್ಟು ವ್ಯವಸ್ಥೆಗಳನ್ನ ಮಾಡ್ಕೋಬೇಕಾಗುತ್ತೆ. ಅಲ್ಲಿ ಮಾರ್ಗಗಳಾಯಿತು  ಅದನ್ನೆಲ್ಲ ಈಗಾಗಲೇ ಪೊಲೀಸ್ ಅವರು ನಿಗದಿ ಮಾಡಿದ್ದಾರೆ. ಅದರ ಜೊತೆಗೆ ಅಲ್ಲಿ ಕ್ಲೀನಿಂಗ್ ವ್ಯವಸ್ಥೆ ಏನಿದೆ ಆಯಾ ನಗರ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ನಾವು ಸ್ವಚ್ಛತೆ ವಿಚಾರಕ್ಕಾಗಿ ಇನ್ಸ್ಟ್ರಕ್ಷನ್ಸ್ ಅನ್ನ ಕೊಟ್ಟಿದ್ದೀವಿ ಅಲ್ಲಿ ಮೆಸ್ಕಾಮ್ ಇಲಾಖೆಯಿಂದನು ಸಹಿತ ಯಾವುದೇ ರೀತಿ ಅವಗಡಗಳು ಆಗದೆ ಇದ್ದಂಗೆ ನಿಗಾವಹಿಸಲಿಕ್ಕೆ ನಾವು ತಿಳಿಸಿದ್ದೀವಿ ಎಂದರು.

 ಮೆಸ್ಕಾಂ ಇಲಾಖೆಯಿಂದ ನಿಗಾ: ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಇನ್ಮೇಲೆ ಡೈರೆಕ್ಷನ್ಸ್ ಅನ್ನ ಕೊಡ್ತೀನಿ ಅದರ ಜೊತೆಗೆ ವಿಸರ್ಜನಾ ಸ್ಥಳದಲ್ಲಿ ಕಡ್ಡಾಯವಾಗಿ ಲೈಟಿಂಗ್ ವ್ಯವಸ್ಥೆ ಮತ್ತೆ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಲ್ಲಿ ಕ್ಲೀನಿಂಗ್ ಇತರ ಮತ್ತೆ ಲೈಫ್ ಲೈಫ್ ಗಾರ್ಡ್ಸ್ ಅವರನ್ನ ಸಹಿತ ವ್ಯವಸ್ಥೆ ಮಾಡಲಿಕ್ಕೆ ಈಗಾಗಲೇ ನಾವು ಕ್ರಮ ವಹಿಸಿದ್ದೀವಿ ಅದರ ಜೊತೆಗೆ ಈಗ ತೆಪ್ಪದಲ್ಲಿ ಏನು ತೆರಳುತಾರೆ.ಅಲ್ಲೂ ಸಹಿತ ರೆಸ್ಟ್ರಿಕ್ಷನ್ಸ್ ಒಂದು ಇಬ್ಬರಿಂದ ಮೂರು ಜನ ಮಾತ್ರ ತೆರಳಬೇಕು ಬಹಳಷ್ಟು ಜನ ತೆರಳಬಾರದು ಅಂತನು ಈಗ ರೆಸ್ಟ್ರಿಕ್ಷನ್ಸ್ ಮಾಡಿದೀವಿ ಎಂದರು.

ಅದಾದಮೇಲೆ ಡಿಜೆ ಏನಿದೆ ಅದರ ಕುರಿತು ಈಗಾಗಲೇ ಬ್ಯಾನ್ ಮಾಡೋ ಆದೇಶವನ್ನು ಸಹಿತ ನಾವು ಮಾಡಿಸಿದೀವಿ .ಪೇಪರ್ ಬ್ಲಾಸ್ಟರ್ ಅಂತ ಈಗ ಬರ್ತದೆ ಅದು ಸಹಿತ ಸ್ವಲ್ಪ ಬಹಳಷ್ಟು ಜನ ಇವರಿಗೆಲ್ಲ ತೊಂದರೆ ಆಗುತ್ತೆ. ಅದನ್ನು ಸಹಿತ ಈಗಾಗಲೇ ಬ್ಯಾನ್ ಮಾಡಿ ಆದೇಶ ಮಾಡಿದೀವಿ. ಯಾವುದೇ ರೀತಿ ಬೈಕ್ ರ್ಯಾಲಿಯನ್ನ ಈ ಟೈಮ್ನಲ್ಲಿ ಮಾಡಲಿಕ್ಕೆ ಅವಕಾಶ ಇರೋದಿಲ್ಲ. ಅದನ್ನು ಸಹಿತ ಬ್ಯಾನ್ ಮಾಡಿದ್ದೇವಿ. ಮತ್ತೆ ಫ್ಲೆಕ್ಸ್ ಹೋಲ್ಡಿಂಗ್ಸ್ ಬ್ಯಾನರ್ಸ್ ಏನಿರುತ್ತೆ ಅವುಗಳಲ್ಲಿ ಸಹಿತ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗೆ ಅದನ್ನ ಮಾಹಿತಿ ನೀಡಿಯೇ ಅದನ್ನ ಮಾಡಬೇಕು ಅಂತ ಹೇಳಿ ಈಗಾಗಲೇ ಎಲ್ಲಾ ಆರ್ಗನೈಸರ್ಸ್ಗೂ ಹೇಳಿದ್ದೀವಿ ಮತ್ತೆ ಪ್ರಿಂಟಿಂಗ್ ಪ್ರೆಸ್ ಅವರಿಗೂ ಸಹಿತ ಅದನ್ನ ಮಾಹಿತಿಯನ್ನ ನಾವು ನೀಡಿದ್ದೀವಿ ಎಂದರು.

 ಸೋಶಿಯಲ್ ಮೀಡಿಯಾದಲ್ಲಿ ಪೊಲೀಸ್ ಇಲಾಖೆಯಿಂದ ವಿಶೇಷವಾಗಿ ನಿಗಾ ವಹಿಸ್ತಾ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ರೀತಿ ಹಬ್ಬಕ್ಕೆ ಅಹಿತಕರ ಘಟನೆ ಆಗೋ ರೀತಿಯಲ್ಲಿ ಯಾವುದಾದರೂ ಪೋಸ್ಟ್ಗಳನ್ನ ಯಾರಾದರೂ ಮಾಡ್ತಾ ಇದ್ರೆ ಅದರ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗೋ ರೀತಿಯಲ್ಲಿ ಯಾರಾದರೂ ಮಾಡ್ತಾ ಇದ್ರೆ ಅದನ್ನು ಸಹಿತ ಅವರು ಕ್ರಮ ತೆಗೆದುಕೊಳ್ಳಬಹುದು. ಈ ಭಾರತೀಯ ನ್ಯಾಯ ಸಮಿತಿ ಅಡಿಯಲ್ಲಿ ಸಹಿತ ಆಕ್ಷನ್ ತಗೊಳ್ಬಹುದು ಅದನ್ನು ನಾವು ಎಲ್ಲಾ ಕಮ್ಯೂನಿಟಿ ಅವರಿಗೆ ಒಂದು ಮೀಟಿಂಗ್ ಮಾಡಿ ಅದನ್ನ ತಿಳಿಸಿದೀವಿ  ಎಂದರು.

ಮತ್ತೆ ಈಗಾಗಲೇ ಪೊಲೀಸ್ ಇಲಾಖೆ ಎಸ್ಪೆಷಲಿ ಎಸ್ ಪಿ ಅವರ ನೇತೃತ್ವದಲ್ಲಿ ಸಾಕಷ್ಟು ಸಭೆಗಳನ್ನ ಬೇರೆ ಬೇರೆ ಸಮುದಾಯಗಳ ಮುಖಂಡರುಗಳು ಮತ್ತೆ ಬೇರೆ ಬೇರೆ ಲೋಕಾಲಿಟಿಯಲ್ಲಿ ಜನರ ಒಂದು ಕಾನ್ಫಿಡೆನ್ಸ್ ತಗೊಂಡು ಈಗಾಗಲೇ ಕ್ರಮ ವಹಿಸುತಾ ಇದೆ. ಅವರಿಗೆ ನಾವು ಜಿಲ್ಲಾಡಳಿತ ದಿಂದ ನಾವು ಏನೇನು ಸಹಾಯ ಬೇಕು ಅದನ್ನು ಸಹಿತ ನಾವು ಮಾಡ್ತಾ ಇದ್ದೀವಿ ಎಂದರು.

ಅಂದಾಗೆ ಪಿಓಪಿ ಗಣಪತಿನು ಸಹಿತ ಈಗಾಗ ನಿಷೇಧಿಸಿದ್ದೀವಿ ತಮಗೆಲ್ಲ ಗೊತ್ತಿದ್ದ ಹಾಗೆ ಇದು ರಾಜ್ಯದಾದ್ಯಂತ ಪಿಓಪಿ ಗಣಪತಿಯನ್ನ ನಿಷೇಧ ಆಗಿದೆ ಯಾರು ಸಹಿತ ಪಿಓಪಿ ಗಣಪತಿಯನ್ನ ಕೊಂಡುಕೊಳ್ಳಬೇಡಿ ಮತ್ತೆ ಮಾಡಕೆ ಹೋಗಬೇಡಿ  ಅಂತಹೇಳಿ ನಾವು ಹೇಳಿದ್ದೀವಿ. ಆ ತಯಾರಿಕರಿಗೂ ಸಹಿತ ಬಹಳ ಅಡ್ವಾನ್ಸ್ ಆಗಿ ನಾವು ಅದನ್ನ ಆದೇಶವನ್ನ ಬ್ಯಾನ್ ಆದೇಶ ಮಾಡಿ ಅವರಿಗೆ ಕಮ್ಯುನಿಕೇಟ್ ಮಾಡಿದ್ದೀವಿ. ಇವನ್ ಪಟಾಕಿಯನ್ನು ಸಹಿತ ಹಸಿರು ಪಟಾಕಿಯನ್ನ ಅಷ್ಟೇ ನಾವು ಬಳಸಬೇಕು ಅಂತ ಹೇಳಿ ಪಟಾಕಿ ಮಾರಾಟ ಗಾರರಿಗೆ ನಾವು ನಿರ್ಬಂಧ ಹೇರಿದ್ದೀವಿ. ಇದರಿಂದ ನಮಗೆ ಒಳ್ಳೆ ರೀತಿಯಿಂದ ಒಂದು ಪರಿಸರ ಸ್ನೇಹಿಯಾಗಿ ನಾವು ಗಣೇಶ ಹಬ್ಬವನ್ನು ಆಚರಿಸಲಿಕ್ಕೆ ಆಗುತ್ತೆ ಎಂದರು.

ಮೆರವಣಿಗೆ ಉಲ್ಲಂಘನೆ ಆದ್ರೆ ಕ್ರಮ  ಖಂಡಿತ. ನಾವು ಪಿಓಪಿ ಗಣಪತಿ ಮಾರಾಟ ಆಗಿದ್ದು ಕಂಡು ಬಂದ್ರೆ ನಮ್ಮ ಪೊಲ್ಯೂಷನ್ ಕಂಟ್ರೋಲ್ ಅಧಿಕಾರಿಗಳು ಏನಿದ್ದಾರೆ ಅವರಿಂದ ಈಗಾಗಲೇ ನಾವು ಲ್ಯಾಬ್ ಗಳನ್ನ ಸೆಟ್ಪ್ ಮಾಡಿ ಪಿಓಪಿ ಪರೀಕ್ಷೆ ಮಾಡೋದಾಯ್ತು ವಿದಿನ್ 24 ಹವರ್ಸ್ ರಿಸಲ್ಟ್ ಬಂದು ಅವರ ಮೇಲೆ ಅದನ್ನ ಸೀಜು ಮಾಡ್ತೀವಿ ಆಮೇಲೆ ಅವರಿಗೆ ದಂಡನು ಹಾಕ್ತೀವಿ ಮತ್ತೆ ಎಫ್ಐಆರ್ ಸಹಿತ ನಾವು ರಿಜಿಸ್ಟರ್ ಮಾಡ್ತೀವಿ ಎಂದರು.

ನಾವು ಈಗ ಎಲ್ಲಾ ಟೌನ್ಗಳಲ್ಲಿ ಮಾರ್ಗ ಏನಿದೆ ಪ್ರೊಸೆಷನ್ ಏನಿದೆ ಎಸ್ಪೆಷಲಿ ಇಂಪಾರ್ಟೆಂಟ್ ಗಣಪತಿ ಎಲ್ಲಿ ಜಾಸ್ತಿ ಜನ ಸೇರ್ತಾರೆ ಆ ಎಲ್ಲ ಮಾರ್ಗಗಳನ್ನು ಪೊಲೀಸರು ಈಗಾಗಲೇ ಅದನ್ನ ವರ್ಕೌಟ್ ಮಾಡಿ ಅದನ್ನ ಆರ್ಗನೈಸರ್ಸ್ಗೆ ಈಗಾಗಲೇ ತಿಳಿಸಿದ್ದಾರೆ.ಆ
ಮಾರ್ಗಗಳನ್ನ ನಮ್ಮ ಮೆಸ್ಕಾಮ್ ಡಿಪಾರ್ಟ್ಮೆಂಟ್ ಮತ್ತೆ ಈವನ್ ಫಾರೆಸ್ಟ್ ಡಿಪಾರ್ಟ್ಮೆಂಟ್ಗೂ ನಾವು ಮಾಹಿತಿ ಕೊಟ್ಟಿದೀವಿ. ಅಲ್ಲಿ ಟ್ರೀ ಬ್ರಾಂಚ್ ಕಟಿಂಗ್ ಸಹಿತ ನಾವು ಮಾಡ್ತಾ ಇದೀವಿ ಎಂದರು.

ಆಮೇಲೆ ಇನ್ನೊಂದು ನಾವು ಗಣೇಶ ಮೂರ್ತಿಯನ್ನ ಸಹಿತ ಐದರಿಂದ ಆರು ಫೀಟ್ಗೆ ರೆಸ್ಟ್ರಿಕ್ಷನ್ ಮಾಡಿ ಅಂತನು ಆರ್ಗನೈಸರ್ಸ್ಗೆ ಹೇಳ್ತಾ ಇದೀವಿ. ಕೆಲವೊಂದು ವಿಶೇಷ ಇಂಪಾರ್ಟೆಂಟ್ ಗಣಪತಿಗಳು ಇರ್ತವೆ ಅವು ಬಹಳ ಅಂದ್ರೆ ದೊಡ್ಡ ಮಾರ್ಗದಲ್ಲಿ ಹೋಗ್ತಾ ಇರ್ತವೆ ಅಲ್ಲಿ ಸಮಸ್ಯೆ ಆಗಲ್ಲ ಅದನ್ನ ನಾವು ಒಪ್ಪಬಹುದು. ಬಟ್ ಚಿಕ್ಕ ಚಿಕ್ಕ ಗಣಪತಿಗಳಿದ್ರೆ ರೋಡ್ ಇರುತ್ತೆ ಇಂಟರ್ನಲ್ ರೋಡ್ಸ್ ಇರುತ್ತೆ ಅಲ್ಲೆಲ್ಲ ತುಂಬಾ ದೊಡ್ಡ ಗಣಪತಿ ಮಾಡ್ಕೊಂಡ್ರೆ ಈ ತರ ಅವಗಡ ಆಗೋ ಸಮಸ್ಯೆನು
ಇರುತ್ತೆ. ಸೊ ಅಲ್ಲೂ ಸಹಿತ ನಾವು ಸ್ವಲ್ಪ ಹೈಟ್ ರೆಸ್ಟ್ರಿಕ್ಷನ್ ಎಲ್ಲಿ ನಮ್ಮ ಚಿಕ್ಕ ಚಿಕ್ಕ ರೋಡ್ ಅಲ್ಲಿ ಹೋಗುತ್ತಲ್ಲ ಅಂತಲ್ಲಿ ಸ್ವಲ್ಪ ಹೈಟ್ನ್ನ ನೋಡ್ಕೊಂಡು ಒಂದು ಐದು ಆರು ಫೀಟ್ ಏನಿದೆ ನೋಡ್ಕೊಂಡು ಆರ್ಗನೈಸರ್ಸ್ಗೆ ಗಮನ ತಗೊಂಡು ಅವರಿಗೂ ಇನ್ಫಾರ್ಮ ಇದನ್ನ ಇನ್ಫಾರ್ಮ್ ಮಾಡಿ ಮಾಡಿ ಅಂತ ಹೇಳಿ ನಾವು ಈಗಾಗಲೇ ತಿಳಿಸಿದೀವಿ ಎಂದರು.

ಮತ್ತೆ ತಾವು ಹೇಳಿದಂಗೆ ಮೆಸ್ಕಾಮ್ ಇಲಾಖೆಗೆ ಇನ್ನೊಂದು ನಾವು ಸೆಪರೇಟ್ ನಿರ್ದೇಶನವನ್ನ ನಾನು ನೀಡ್ತೀನಿ ಇವತ್ತೆ ಯಾವುದೇ ರೀತಿ ಅಲ್ಲಿ ಎಲ್ಲಿ ಗಣಪತಿ ಕೂಡಿಸ್ತಾರೆ ಮತ್ತು ಮಾರ್ಗ ಎಲ್ಲಿ ಬರ್ತದೆ ಅಲ್ಲಿ ಎಲ್ಲೂ ಸಹಿತ ಸಮಸ್ಯೆ ಈ ರೀತಿ ಆಗದೆ ಇದ್ದಂಗೆ ಪರಿಶೀಲನೆ ಮಾಡಿ ಪರ್ಮಿಷನ್ ಕೊಡ್ಲಿಕ್ಕೆ ನಾನು ಹೇಳ್ತೀನಿ.ಹೇಳಬಹುದು ಏನು ತೊಂದರೆ ಇಲ್ಲ ಅವರು ಈಗಾಗಲೇ ಏನಿದೆ ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಎಲ್ಲ ನಿಗಾವಹಿಸಿದ್ದಾರೆ ಅವರು ಸೆಪರೇಟ್ ಅವರ ಟೀಮೇ ಅದನ್ನ ಸೆಟ್ಅಪ್ ಮಾಡಿದ್ದಾರೆ ಎಂದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.