ಶಿವಮೊಗ್ಗ GST ಅಧಿಕಾರಿಗಳ ತಂಡದಿಂದ ಎರಡು ಪತ್ರಿಕಾ ಕಚೇರಿಗಳ ಮೇಲೆ ದಿಡೀರ್ ದಾಳಿ: ದಾಖಲೆ ವಶಕ್ಕೆ
ಶಿವಮೊಗ್ಗ :ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಶಿವಮೊಗ್ಗದ ಕ್ರಾಂತಿದೀಪ ಪ್ರಾದೇಶಿಕ ದಿನಪತ್ರಿಕೆಯ ಕಚೇರಿ ಮೇಲೆ ಮತ್ತು ಶಿವಮೊಗ್ಗ ಟೈಮ್ಸ್ , ಪಬ್ಲಿಷರ್ಸ್ ಪ್ರಿಂಟಿಂಗ್ ಪತ್ರಿಕಾ ಕಚೇರಿಯ ಮೇಲೆ ಶಿವಮೊಗ್ಗದ ಕಮರ್ಷಿಯಲ್ tax GST ಅಧಿಕಾರಿ ಗಳಿಂದ ದಿಡೀರ್ ದಾಳಿ ನಡೆದಿದೆ.
ಕ್ರಾಂತಿದೀಪ ದೀಪ ದಿನಪತ್ರಿಕೆಯ ಪ್ರಸಾರ ಸಂಖ್ಯೆ ಅಧಿಕ ತೋರಿಸಿ ಇಲಾಖೆಗೆ ತಪ್ಪು ಮಾಹಿತಿ ನೀಡಲಾಗಿದೆ ಮತ್ತು ಪ್ರಿಂಟಿಂಗ್ ಸಂಬಂಧಿಸಿದಂತೆ ಸುಳ್ಳು ಮಾಹಿತಿಯನ್ನು ವಾರ್ತಾ ಇಲಾಖೆಗೆ ನೀಡಿದ್ದಾರೆ. ಮತ್ತು ಪ್ರಿಂಟಿಂಗ್ ಸಂಬಂಧಿಸಿದಂತೆ ರಶೀದ್ GST ಕಟ್ಟಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಎರಡು ತಂಡಗಳಲ್ಲಿ ಆಗಮಿಸಿದ ಅಧಿಕಾರಿಗಳು ಬಂದು ದಾಳಿ ಮಾಡಿ ಮದ್ಯಾಹ್ನದಿಂದ ಸಂಜೆವರೆಗೆ ದಾಖಲೆಗಳನ್ನು ಪರಿಶೀಲನೆ ಮಾಡಿ, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ಹೋಗಿರುತ್ತಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ GST ಜಾರಿ ಅಧಿಕಾರಿಗಳ ದಾಳಿಯಿಂದಾಗಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಯಾರನ್ನೂ ಉಳಿಸಲು ಹೋಗಿ ಲಕ್ಷ ಲಕ್ಷ GST ಕಟ್ಟ ಬೇಕಾದ ಸಂದರ್ಬ ಬಂದಿದೆ ಎನ್ನಲಾಗುತ್ತಿದೆ. ಪತ್ರಿಕಾ ವಲಯದಲ್ಲಿ ಬಿರುಗಾಳಿ ಎದ್ದಿದ್ದು ಬಿಸಿ ಬಿಸಿ ಚರ್ಚೆಯಾಗ ತೊಡಗಿದೆ. ಮುಂದೇನಾಗುವುದು ಕಾದು ನೋಡಬೇಕು...
Leave a Comment