ಎನ್.ಮಂಜುನಾಥ್ ಸಂಪಾದಕರು ಕ್ರಾಂತಿದೀಪ ಪ್ರಾದೇಶಿಕ ಕನ್ನಡ ದಿನಪತ್ರಿಕೆ ಇವರ ವಿರುದ್ಧ ಮತ್ತೆ ಮೂರು ದೂರು ದಾಖಲು

ಶಿವಮೊಗ್ಗ: ಜಾಗದ ಮಾಲೀಕರ ಅನುಮತಿ ಇಲ್ಲದೇ ತಮ್ಮ ಜಾಗದಲ್ಲಿ ಬಾಡಿಗೆದಾರ 50 ರಿಂದ 60 ಹೆಚ್.ಪಿ ಪವರ್ ವಿದ್ಯುತ್ ಸಂಪರ್ಕ ಪಡೆದಿದ್ದಾರೆಂದು ಆರೋಪಿಸಿ, ವಿದ್ಯುತ್ ಸಂಪರ್ಕ ಕಟ್ ಮಾಡಲು ಮತ್ತು ಅವರ ಮೇಲೆ ಕೇಸ್ ದಾಖಲು ಮಾಡುವಂತೆ ನೊಂದ 84 ವರ್ಷದ ವೃದ್ಧೆಯೊಬ್ಬರು ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್. ಮಂಜುನಾಥ್ ವಿರುದ್ಧ ದೂರು ನೀಡಿದ್ದಾರೆ.

ತಿಲಕ್ ನಗರದ‌ ನಿವಾಸಿ ಜಿ.ಹೆಚ್. ಕಮಲಮ್ಮ ಕೋಂ ಲೇಟ್ ಡಾ.ರುದ್ರಮೂರ್ತಿ ಎಂಬ 84 ವರ್ಷದ ವೃದ್ಧೆ ಎನ್. ಮಂಜುನಾಥ್ ವಿರುದ್ಧ ದೂರು ನೀಡಿದ್ದಾರೆ.

ಎನ್. ಮಂಜುನಾಥ್ ನನ್ನ ಸ್ವಂತದ ಜಾಗವಾದ ತಿಲಕ್ ನಗರದ ಎಸ್.ಬಿ.ಐ. ಬ್ಯಾಂಕ್ ಪಕ್ಕದ ಜಾಗವನ್ನು ಕಳೆದ 20 ವರ್ಷಗಳ ಹಿಂದೆ ತಿಂಗಳಿಗೆ 5 ಸಾವಿರ ರೂಪಾಯಿಗಳಂತೆ ಬಾಡಿಗೆ ಪಡೆದಿದ್ದರು. ಆದರೆ ಅಲ್ಲಿ ಕಟ್ಟಡ ಕಟ್ಟಿ ಒಳಬಾಡಿಗೆ ನೀಡುವ ಮೂಲಕ ನನಗೆ ವಂಚಿಸಿದ್ದರು. ಬಾಡಿಗೆಯನ್ನು ಸರಿಯಾಗಿ ಕೊಡುತ್ತಿರಲಿಲ್ಲ. ನಾನು ಬಾಡಿಗೆ ಕೇಳಲು ಹೋದಾಗ ನನ್ನನ್ನು ತಳ್ಳಿ, ನಿಂದಿಸಿ ದೌರ್ಜನ್ಯ ವೆಸಗಿದರು. 
ನಂತರ ನಾನು ಜಾಗದ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೂ ಎನ್. ಮಂಜುನಾಥ್ ನನ್ನ ಗಮನಕ್ಕೆ ತಾರದೇ ನಾನು ಅನುಮತಿ ನೀಡದೇ ಅಕ್ರಮವಾಗಿ 50-60 ಹೆಚ್.ಪಿ. ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಇದು ನನ್ನ ಗಮನಕ್ಕೆ ತಡವಾಗಿ ಬಂದಿದೆ.

ಎನ್. ಮಂಜುನಾಥ್ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ಮತ್ತು ಮೆಸ್ಕಾಂ ಅಧಿಕಾರಿಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕ ಕೊಟ್ಟಿರುವ ಬಗ್ಗೆ ಕ್ರಮ ಕೈಗೊಂಡು, 84 ವರ್ಷ ವಯೋವೃದ್ಧೆಯಾದ ನನಗೆ ನ್ಯಾಯ ಕೊಡಿಸಬೇಕೆಂದು ಕಮಲಮ್ಮ ದೂರಿನಲ್ಲಿ ಪ್ರಾರ್ಥಿಸಿದ್ದಾರೆ.

ಅಲ್ಲದೆ, ಇದೇ ದೂರನ್ನು ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರಿಗೆ ಪ್ರತ್ಯೇಕವಾಗಿ ದೂರು ನೀಡಿದ್ದಾರೆ.ಕೂಡಲೇ ಪವರ್ ವಿದ್ಯುತ್ ಸಂಪರ್ಕ ನಿಲುಗಡೆ ಮಾಡುವಂತೆ ವಿನಂತಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.