ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯ *ನೆರವಿಗೆ ಧಾವಿಸುತ್ತಿರುವ ವಿದ್ಯಾರ್ಥಿಗಳು*...
ಸಾಗರ:ಒಳ್ಳೆಯ ಮನೋಭಾವನೆ ಉಳ್ಳ ವ್ಯಕ್ತಿಯಾಗಿದ್ದ ಕುಮಾರ ಕೇಶವ್ , ಪ್ರಾಯ - 22 ವರ್ಷ, ಮೂಲತಃ ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲೂಕಿನ, ಸುಂಕತ್ತಿ (ಹಲಗೇರಿ) ಊರಿನವರಾಗಿದ್ದು, ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದಾರೆ.
ಮಂಗಳೂರು KS ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಕಿಡ್ನಿ ಬದಲಿಸಬೇಕೆಂದು ಹಾಗೂ ಆಪರೇಷನ್ ಗೆ ಅಂದಾಜು 15 ರಿಂದ 20 ಲಕ್ಷ ಬೇಕೆಂದು ಹೇಳಿರುತ್ತಾರೆ. ಇವರ ಕುಟುಂಬದ ಆದಾಯದ ಮೂಲ ಕೂಲಿಯಾಗಿದ್ದು, ಮನೆಯಲ್ಲಿ ತಂದೆ, ತಾಯಿ, ತಂಗಿ, ಇದ್ದು ಆರ್ಥಿಕವಾಗಿ ಬಡವರಾಗಿರುತ್ತಾರೆ.
ಇವರಿಗೆ ಹಣದ ಅವಶ್ಯಕತೆ ತುಂಬಾ ಇರುವುದರಿಂದ ಮನ ಗಂಡು ಸಾಗರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನೆರವಾಗಲು ಮುಂದಾದರು.
7 ರಿಂದ 8 ಗುಂಪುಗಳನ್ನು ಮಾಡಿಕೊಂಡು ಸ್ಕ್ಯಾನರ್ ಹಾಗೂ ಬಾಕ್ಸ್ ಅನ್ನು ತೆಗೆದುಕೊಂಡು ಕಾಲೇಜು ಆವರಣದಲ್ಲಿ ಮತ್ತು ಸಾಗರ ನಗರದ ಬೀದಿ ಬೀದಿಗಳಲ್ಲೂ ,ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ಮತ್ತು ಬಸ್ಸಿ ನ ಒಳಗಿರುವ ಪ್ರಯಾಣಿಕರ ಬಳಿ ಹೋಗಿ ಆ ವ್ಯಕ್ತಿಗೆ ಆಂತರಿಕವಾಗಿ ಧನ ಸಹಾಯ ಮಾಡುವಂತೆ ಕೋರುತ್ತಿದ್ದಾರೆ.
ಈ ಕಾಲೇಜು ವಿದ್ಯಾರ್ಥಿಗಳ ಇಂತಹ ಸೇವ ಮನೋಭಾವವನ್ನು ನಾವು ಮೆಚ್ಚಲೇಬೇಕು. ಹಾಗೂ ಇದಕ್ಕೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಸಹ ಆಂತರಿಕ ನೆರವನ್ನು ನೀಡಲು ಮುಂದಾಗಿದ್ದಾರೆ.
Leave a Comment