ನಿವೃತ್ತ ಪಿಎಸ್ಐ ಮತ್ತು ಸಂಘದ ಮಾಜಿ ಅಧ್ಯಕ್ಷರಾದ ಪಿ.ಚಿಕ್ಕೆಗೌಡ ನಿಧನ-ಸಂತಾಪ

ಶಿವಮೊಗ್ಗ: ನಿವೃತ್ತ PSI ಮತ್ತು  ಮಾಜಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಚಿಕ್ಕೇಗೌಡ ರವರು ಇಂದು ಬೆಳಿಗ್ಗೆ 4-30 ಸಮಯದಲ್ಲಿ ಅಶೋಕ ನಗರ ಪೊಲೀಸ್ ಕ್ವಾಟ್ರಸ್ ಹತ್ತಿರ ಇರುವ‌ ಮನೆಯಲ್ಲಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

 ಪಿ.ಚಿಕ್ಕೆಗೌಡ ಇವರು ಎಲ್ಲರಿಗೂ ಚಿರಪರಿಚಿತರು ಸರಳ, ಸಜ್ಜನ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಪಿ.ಸಿ.ಯಿಂದ ಪಿಎಸ್ಐ ಆಗಿ ಕೆಲಸಕ್ಕೆ ಸೇರಿದ ಇವರು ಪಿಎಸ್ಐ ಆಗಿ ಪದೋನ್ನತಿ ಹೊಂದಿದ್ದರು..
ಅವರ ನಿಧನಕ್ಕೆ ಸಂಘದ ಎಲ್ಲಾ ಪಧಾದಿಕಾರಿಗಳು ಸಂತಾಪ ಸೂಚಿಸಿದ್ದಾರೆ.ಮೃತರ ಆತ್ಮಕ್ಕೆ ಚಿರಶಾಂತಿಸಿಗಲೀ ಮತ್ತು ಕುಟುಂಬ ವರ್ಗಕ್ಕೆ ದು:ಖಬರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದಾರೆ.

2012ರಿಂದ ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದರು. ಮತ್ತು 2017 ರಿಂದ 2023 ರವರೆಗೆ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಜೆ ಪಿ ಚಿಕ್ಕೆಗೌಡ PSI (Rtd)  ರವರು ಅನಾರೋಗ್ಯದ ಕಾರಣ ಚಿಕಿತ್ಸೆಯನ್ನು ಪಡೆದಿದ್ದರು.

ಮೃತರು  ಪತ್ನಿ ಶ್ರೀಮತಿ ಲಕ್ಷ್ಮೀ,ಮಗ ಮಧು ಮತ್ತು ಮೂರು ಜನ ಹೆಣ್ಣುಮಕ್ಕಳು ಆಶಾರಾಣಿ,ಉಷಾರಾಣಿ,ಸುಧಾರಾಣಿ ಇವರನ್ನು ಬಿಟ್ಟು ಅಗಲಿದ್ದಾರೆ.

 ಎಲ್ಲಾ ಮಕ್ಕಳಿಗೆ,ಮತ್ತು ಬಂಧು ಮಿತ್ರರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇವೆ.

ಮೃತದೇಹವನ್ನುಅಶೋಕನಗರ ಪೋಲಿಸ್ ಕ್ವಾಟ್ರಸ್ ಹತ್ತಿರ ಇರುವ ಅವರ ಮನೆಯಲ್ಲಿ ದರ್ಶನಕ್ಕೆ ಇಡಲಾಗಿದೆ. ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

 ಮೃತರ ಸುದ್ದಿ ತಿಳಿದ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಪಧಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮೃತರ ಮನೆಗೆ ಬೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಸಲುವಾಗಿ ಪೊಲೀಸ್ ಇಲಾಖೆ ಯಿಂದ ಒದಗಬಹುದಾದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಕೊಡಿಸಿಕೊಡುವುದಾಗಿ ತಿಳಿಸಿದ್ದಾರೆ.

ಮೃತರು ಶಿವಮೊಗ್ಗ ಜಿಲ್ಲೆಯ ಹಲವು ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದರು.ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.