ಶಿವಮೊಗ್ಗದಲ್ಲಿ ನಡು ರಸ್ತೆಯಲ್ಲಿ ಇಬ್ಬರ ಕೊಲೆ:ಬರ್ಭರ ಹತ್ಯೆ ನೋಡಿ ಬೆಚ್ಚಿ ಬಿದ್ದ ಜನ

ಶಿವಮೊಗ್ಗ:ಶಿವಮೊಗ್ಗದಲ್ಲಿ ನಡು ರಸ್ತೆಯಲ್ಲಿ ಇಬ್ಬರನ್ನ ಕೊಲೆ ಮಾಡಲಾಗಿದೆ. ಲಷ್ಕರ್ ಮೊಹಲ್ಲಾದ ಮಟನ್ ಸ್ಟಾಲ್ ವೊಂದರ ಬಳಿ ಇಬ್ಬರನ್ನೂ ಕೊಲೆ ಮಾಡಲಾಗಿದೆ. ಇಬ್ಬರು ಸಹ ರೌಡಿ ಶೀಟರ್ ಎಂದು ಮೂಲಗಳು ತಿಳಿಸಿದೆ.

ಲಷ್ಕರ್ ಮೊಹಲ್ಲಾದಲ್ಲಿ ಶೋಹೆಬ್ ಮತ್ತು ಗೌಸ್ ಕೊಲೆಯಾದ ವ್ಯಕ್ತಿಗಳು ಎಂದು ತಿಳಿದು ಬಂದಿದೆ. ಇವರಿಬ್ಬರೂ ಎಂಕೆಕೆ ರಸ್ತೆಯ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. 

ಲಷ್ಕರ್ ಮೊಹಲ್ಲಾಗೆ ಬೈಕ್ ನಲ್ಲಿ‌ ಬರುತ್ತಿದ್ದಾಗ  ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಬಂದು ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಅಟ್ಯಾಕ್ ಮಾಡಿದ್ದಾರೆ. ನಂತರ ಕಲ್ಲು ಎತ್ತಾಕಿ ಸಾಯಿಸಿರುವುದಾಗಿ ತಿಳಿದು ಬಂದಿದೆ.ಕೊಲೆ ಮಾಡಿದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ನಿನ್ನೆ ದಿವಸ ಯಾಸಿನ್ ಜೊತೆ  ಯುವಕರೊಂದಿಗೆ ಗಲಾಟೆಯಾಗಿದೆ.  ಯಾಸಿನ್ ಆಸ್ಪತ್ರೆಗೆ ಸೇರಿರುವುದಾಗಿ ತಿಳಿದು ಬಂದಿದೆ. ಇಂದು ಇಬ್ಬರ ಜನತಾ ಮಟನ್ ಬಳಿ ಬರುತ್ತಿದ್ದಂತೆ ಅಟ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ.
  ಹಾಡುಹಗಲಲ್ಲೇ ನಡೆದ ಹತ್ಯೆಯ ಬಗ್ಗೆ ಲಷ್ಕರ್ ಮೊಹಲ್ಲಾ‌ ಜನತೆ ಬೆಚ್ಚಿ ಬಿದ್ದದ್ದಾರೆ.

ಕೋಟೆ ಪೊಲೀಸರು ಸ್ಥಳಕ್ಕೆ ಬಂದಿದ್ದು ತನಿಖೆ ಮುಂದುವರಿದಿದೆ. ಆರೋಪಿಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಡಬ್ಬಲ್ ಮರ್ಡರ್ ಕೊಲೆಗೆ ಕಾರಣವೇನು?

ಲಷ್ಕರ್ ಮೊಹಲ್ಲಾ ಸರ್ಕಲ್ ನಲ್ಲಿ ಮಟನ್ ಅಂಗಡಿಯ ಮಾಲೀಕ ರೌಡಿಶೀಟರ್ ಯಾಸಿನ್  ಅನ್ನು‌ ಹೊಡೆಯಲು ಬಂದ ಇಬ್ಬರನ್ನು ಕಲ್ಲು ಮತ್ತು ಸೈಕಲ್  ಎತ್ತು ಹಾಕಿ ಸಾಯಿಸಿದ ಘಟನೆ ನಡೆದಿದೆ. 

ಜನತಾ ಮಟನ್ ಸ್ಟಾಲ್ ಮಾಲೀಕ ಯಾಸಿನ್ ಗೆ‌ ಕೂಡ ತೀವ್ರತರದ ಹಲ್ಲೆ ಆಗಿದ್ದು ಆಸ್ಪತ್ರೆ ಗೆ ಸೇರಿಸಲಾಗಿದೆ.

ಹಲವು ದಿನಗಳಿಂದ ನಡೆಯುತ್ತಿದ್ದ ಗ್ಯಾಂಗ್ ವಾರ್ ಗೆ ಇಬ್ಬರು ಇಂದು ಬಲಿಯಾಗಿದ್ದಾರೆ.

ಸುಹೇಲ್‌ ಅಲಿಯಾಸ್‌ ಖಲಂದರ್‌ ಅಲಿಯಸ್‌ ಸೇಬು ಮತ್ತು ಗೌಸ್‌ ಎಂಬುವವರು ಹತ್ಯೆಯಾಗಿದ್ದಾರೆ. ಈ ಪೈಕಿ ಒಬ್ಬಾತ ಕೆ.ಆರ್‌.ಪುರಂ ನಿವಾಸಿ. ಮತ್ತೊಬ್ಬ ಅಣ್ಣಾನಗರದವನು. ಆರೋಪಿಗಳ ಗುರುತು ಪತ್ತೆಯಾಗಿದೆ, ಆರೋಪಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.