2024 ನೇ ಸಾಲಿನಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಶಿವಮೊಗ್ಗ ಪೊಲೀಸ್ ಇಲಾಖೆ:298 ಪ್ರಕರಣಗಳ ಪತ್ತೆ ಅಂದಾಜು 3,76,99,299/- ರೂಗಳ ಮಾಲುಗಳ ವಶ
ಶಿವಮೊಗ್ಗ, ಜಿಲಾ ಪೊಲೀಸ್ ವತಿಯಿಂದ, ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕವಾಯತು (Property Return Parade)
ಶಿವಮೊಗ್ಗ, ಜಿಲಾ ಪೊಲೀಸ್ ವತಿಯಿಂದ ಇಂದು ಪೊಲೀಸ್ ಕವಾಯತು ಮೈದಾನ ಡಿಎಆರ್ ಶಿವಮೊಗ್ಗದಲ್ಲಿ 2024ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ
ಹಿಂದಿರುಗಿಸುವ ಕವಾಯತನ್ನು ಹಮ್ಮಿಕೊಳ್ಳಲಾಗಿತ್ತು.
2024ನೇ ಸಾಲಿನ 244 ಪ್ರಕರಣಗಳು ಮತ್ತು ಹಿಂದಿನ ವರ್ಷಗಳ 54 ಪ್ರಕರಣಗಳು ಸೇರಿ ಒಟ್ಟು 298 ಪ್ರಕರಣಗಳನ್ನು ಪತ್ತೆ ಮಾಡಿ, ಅಂದಾಜು ಮೌಲ್ಯ 3,76,99,299/- ರೂಗಳ ಮಾಲುಗಳನ್ನು
ವಶ ಪಡಿಸಿಕೊಂಡಿರುತ್ತದೆ ಮತ್ತು CEIR ( Central Equipment Identity Register) ಪೋರ್ಟಲ್ ಮುಖಾಂತರ
ಕಳೆದು ಹೋದ ಒಟ್ಟು 477 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲಾಗಿರುತ್ತದೆ.
2024ನೇ ಸಾಲಿನಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 612 ಇತ್ತು ಕಳವು ಪ್ರಕರಣಗಳು
ವರದಿಯಾಗಿರುತ್ತವೆ. ಸದರಿ ಪ್ರಕರಣಗಳಲ್ಲಿ 2 ಲಾಭಕ್ಕಾಗಿ ಕೊಲೆ, 3 ದರೋಡೆ, 19 ಸುಲಿಗೆ, 4 ಸರಗಳ್ಳತನ, 51 ಕನ್ನಕಳವು, 14
ಮನೆಗಳ್ಳತನ, 62 ಸಾಮಾನ್ಯ ಕಳವು, 6 ಜಾನುವಾರು ಕಳವು, 70 ವಾಹನ ಕಳವು ಹಾಗೂ 13 ವಂಚನೆ ಪ್ರಕರಣಗಳು ಸೇರಿದಂತೆ
ಒಟ್ಟು 244 ಪ್ರಕರಣಗಳನ್ನು ಪತ್ತೆ ಮಾಡಿ ಅಂದಾಜು ಮೌಲ್ಯ 3,22,37,654/- ರೂ ಗಳ ಬಂಗಾರದ ಆಭರಣಗಳು, ಬೆಳ್ಳಿಯ
ಆಭರಣಗಳು, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಮತ್ತು ಇತರೆ
ವಸ್ತುಗಳನ್ನು ವಶಪಡಿಸಿಕೊಂಡಿರುತ್ತದೆ.
ಅಲ್ಲದೇ ಹಿಂದಿನ ವರ್ಷಗಳಲ್ಲಿ ವರದಿಯಾದ ಪ್ರಕರಣಗಳಲ್ಲಿ 26 ಮನೆಗಳ್ಳತನ, 11
ಸಾಮಾನ್ಯ ಕಳವು ಮತ್ತು 17 ವಾಹನ ಕಳವು ಸೇರಿದಂತೆ ಒಟ್ಟು 54
54,61,645/- ರೂಗಳ ಮಾಲುಗಳನ್ನು ವಶಪಡಿಸಿಕೊಂಡಿರುತ್ತದೆ ಹಾಗೂ CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಲಾದ
ಮೊಬೈಲ್ ಫೋನ್ ಗಳನ್ನು ಈ ದಿನ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
ಪ್ರಕರಣಗಳನ್ನು ಸಹಾ ಪತ್ತೆ ಮಾಡಿ ಅಂದಾಜು ಮೌಲ್ಯ
ಮತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ, ಕಳೆದುಹೋದ ಮಾಲನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸುವಲ್ಲಿ, ಪ್ರಮುಖ
ಪಾತ್ರವಹಿಸಿದ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ಉತ್ತಮ ಕಾರ್ಯಕ್ಕೆ ಶ್ರೀ ಮಿಥುನ್ ಕುಮಾರ್ ಜಿ.ಕೆ.
ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಂಶಂಸಿಸಿ ಅಭಿನಂದಿಸಿರುತ್ತಾರೆ.
Leave a Comment