ಕಾರ್ಖಾನೆಗಳ ತ್ಯಾಜ್ಯದಿಂದ ನದಿಗಳ ನೀರು ಕಲುಷಿತ :ಕ್ರಮಕ್ಕಾಗಿ ಸದನಲ್ಲಿ ಧ್ವನಿ ಎತ್ತಿದ ಶಾಸಕ ಡಾ.ಧನಂಜಯ ಸರ್ಜಿ
ಬೆಳಗಾವಿ : ಕೈಗಾರಿಕೆಗಳ ತ್ಯಾಜ್ಯದಿಂದ ಪರಿಸರ ಮಾಲಿನ್ಯ ತಡೆಗಟ್ಟುವ ಬಗ್ಗೆ ಹಾಗೂ ನದಿಗಳ ನೀರು ಕಲುಷಿತಗೊಂಡು ಅಲ್ಯೂಮಿನಿಯಂ ಅಂಶವು ಹೆಚ್ಚಳಗೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಈ ಬಗ್ಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಸರ್ಕಾರವನ್ನು ಪ್ರಶ್ನಿಸಿದರು.
ಚಳಿಗಾಲದ 154 ನೇ ವಿಧಾನ ಪರಿಷತ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಅವರು “ಗಂಗಾ ಸ್ನಾನ ತುಂಗಾ ಪಾನ” ಎಂದು ಹೇಳುತ್ತೇವೆ, ಆದರೆ, ತುಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿಲ್ಲ, ತುಂಗಾ ನದಿಯಲ್ಲಿ ಅಲ್ಯೂಮಿನಿಯಂ ಅಂಶವು ಹೆಚ್ಚಾಗಿದ್ದು, ಹಾಗೆಯೇ ಕುಡಿಯುವ ನೀರಿನಲ್ಲೂ ಅಲ್ಯೂಮಿನಿಯಂ ಅಂಶ ಹೆಚ್ಚಾಗಿದೆ. ಅಲ್ಯೂಮಿನಿಯಂ ಹೆಚ್ಚಾಗುವುದರಿಂದ ಮೆದುಳಿಗೆ ತೊಂದರೆ, ಮೂಳೆ, ಲಿವರ್, ಸಮಸ್ಯೆಗಳಾಗುತ್ತಿದೆ. ಈ ಅಲ್ಯೂಮಿನಿಯಂ ಅಂಶವು ರಾಜ್ಯದ ಯಾವೆಲ್ಲಾ ನದಿಗಳಲ್ಲಿದೆ ಎಂದು ಪತ್ತೆ ಮಾಡಲಾಗಿದೆಯೇ ? ಬೆಣ್ಣೆಕರೆಯ ಕಲುಷಿತ ನೀರು ನಾಲೆಗಳನ್ನು ಸೇರಿದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ. ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಪ್ರಪಂಚದ 195 ದೇಶಗಳಲ್ಲಿ ಕಲುಷಿತ ನೀರಿನಲ್ಲಿ ಭಾರತವು 122 ನೇ ರ್ಯಾಂಕಿಗ್ ನಲ್ಲಿದೆ, ಶೇ. 70 ರಷ್ಟು ನೀರು ಕಲುಷಿತಗೊಂಡಿದೆ, 3 ಕೋಟಿ 87 ಲಕ್ಷ ಜನರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಮಕ್ಕಳು ಕಲುಷಿತ ನೀರಿನಿಂದಾಗಿ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿದಾಗಿ ಇಡೀ ನಮ್ಮ ದೇಹವೇ ರಾಸಾಯನಿಕಯುಕ್ತ ದೇಹವಾಗಿದೆ, ಉದಾಹರಣೆಗೆ ನಮಗೆ 46 ವರ್ಷ ಆಗಿದೆಯೆಂದರೆ 46 ಎಟಿಎಂ ಕಾರ್ಡ್ ನಷ್ಟು ಮೈಕ್ರೋ ಪ್ಲಾಸ್ಟಿಕ್ ಕೂಡ ನಮ್ಮ ದೇಹವನ್ನು ಸೇರಿಕೊಂಡಿದೆ, ರಕ್ತದೊತ್ತಡ, ಸಕ್ಕರ ಕಾಯಿಲೆ, ಕ್ಯಾನ್ಸರ್ ಹಾಗೂ ಕೆಮಿಕಲ್ ಯುಕ್ತವಾಗಿ ಕಿಡ್ನಿ, ಲಿವರ್ ತೊಂದರೆಗಳು ಹೆಚ್ಚಾಗುತ್ತಿದೆ. ಶಿವಮೊಗ್ಗದಲ್ಲಿ ಕಲುಷಿತ ನೀರಿನಿಂದಾಗಿ ಮೀನುಗಳು, ಕಪ್ಪೆಗಳು ಹಾಗೂ ದನ ಕರುಗಳ ಸಾವಾಗಿದೆ. ಇನ್ನೇನು ಮನುಷ್ಯರೇ ಸಾಯುವುದಕ್ಕಿಂತ ಮುಂಚೆ ಸಾರ್ವಜನಿಕರು ಹೂಡಿದ ಮೊಕದ್ದಮೆಯಿಂದಾಗಿ ಶಿವಮೊಗ್ಗದ ಕಲುಷಿತ ಕಾರ್ಖಾನೆಯ ಬಗ್ಗೆ ಕ್ರಮ ಕೈಗೊಂಡಿರುವುದಾಗಿ ಸಚಿವರು ಹೆಳಿದ್ದಾರೆ, ಆದರೆ, 2023 ರಲ್ಲಿ ಆ ಕಾರ್ಖಾನೆಯ ಬಂದ್ ಮಾಡುತ್ತೇವೆ ಎಂದು ಹೇಳಿದ ಮೇಲೆ ಕಾರ್ಖಾನೆಯು ಮಾನದಂಡಗಳನ್ನು ಅನುಸರಿಸಿದೆ.
ಹಾಗಾಗಿ ಕೈಗಾರಿಕೆಗಳು ವಿವಿಧ ರೀತಿಯ ತ್ಯಾಜ್ಯಗಳನ್ನು ವಿಲೇವಾರಿಗೆ ಅನುಸರಿಸಬೇಕಾದ ಮಾನದಂಡಗಳು, ಶಿವಮೊಗ್ಗ ಜಿಲ್ಲೆಯ ಹಲವಾರು ಕೈಗಾರಿಕೆಗಳು ಮಾನದಂಡಗಳನ್ನು ಪಾಲಿಸದೆ ಅಪಾಯಕಾರಿ ತ್ಯಾಜ್ಯಗಳನ್ನು ನೇರವಾಗಿ ಕೆರೆ/ನದಿಗಳಿಗೆ ಬಿಡುತ್ತಿದ್ದು ಸರ್ಕಾರ ಯಾವ ರೀತಿ ಕ್ರಮ ಕೈಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸುವಂತೆ ಸರ್ಕಾರದ ಗಮನೆ ಸೆಳೆದರು.
ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ ಭೀಮಣ್ಣ ಖಂಡ್ರೆ ಅವರು ಉತ್ತರಿಸಿ, ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ 400 ಕೆರೆಗಳಿಗೆ ಇರುವ ಮಾಲಿನ್ಯದ ಬಗ್ಗೆ ಕಾಲ ಕಾಲಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಾಲಿನ್ಯ ನಿಯಂತ್ರ ಮಂಡಳಯು ಕಾಲ ಕಾಲಕ್ಕೆ ನೀರು ಆಗಲಿ ಅಥವಾ ಶುದ್ಧೀಕರಣ ಮಾಡದಿದ್ದರೆ, ವಾಯು ಮಾಲಿನ್ಯ, ಜಲ ಮಾಲಿನ್ಯ ಕಾಯಿದೆ ಉಲ್ಲಂಘನೆ ಮಾಡಿದರೆ ಅಂತಹ ಕಾರ್ಖಾನೆಗಳನ್ನು ಮುಚ್ಚಲು ಈಗಾಗಲೇ ಆದೇಶವನ್ನು ನೀಡಲಾಗಿದೆ. ಬೆಣ್ಣೆಕೆರೆಯಲ್ಲಿದ್ದ ಅಶುದ್ಧ ನೀರನ್ನು ಕೈಗಾರಿಕೆಯುವರು ಆರ್ ಒ ಪ್ಲಾಂಟ್ ಅಳವಡಿಸಿ ಶುದ್ಧೀಕರಿಸುತ್ತಿದ್ದಾರೆ. ಮಾನದಂಡಕ್ಕೆ ಅನುಸರಿಸಿದ ನಂತರವೇ ಕೈಗಾರಿಕೆ ಮುಂದುವರಿಸಲು ಅವಕಾಶ ನೀಡಲಾಗಿದೆ.
ಇನ್ನು ತುಂಗಾ ನದಿಯಲ್ಲಿರುವ ಅಲ್ಯೂಮಿನಿಯಂ ಪ್ರಮಾಣದ ಬಗ್ಗೆ ವರದಿಯನ್ನು ಇದ್ದು, ಸಂಪೂರ್ಣ ಒದಗಿಸಲಾಗುವುದು ಎಂದರಲ್ಲದೇ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಉಲ್ಲಂಘನೆ ಮಾಡುವ ಕಾರ್ಖಾನೆಗಳು ಹಾಗೂ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
Leave a Comment