ಶ್ರೀ ಅಟಲ್ ಬಿಹಾರಿ ವಾಜಪೇಯಿ* ಅವರ *100ನೇ ವರ್ಷದ ಜನ್ಮ ಶತಮಾನೋತ್ಸವ,* *ಸುಶಾಸನ ದಿನ* ಪ್ರಯುಕ್ತ 100 *ಶತದಿಪೋತ್ಸವದ* ಆಚರಣೆ

ಬಿಜೆಪಿ ಭದ್ರಾವತಿ ಮಂಡಲದ ವತಿಯಿಂದ  ಭಾರತ ರತ್ನ ಮಾಜಿ ಪ್ರಧಾನಿ *ಶ್ರೀ ಅಟಲ್ ಬಿಹಾರಿ ವಾಜಪೇಯಿ* ಅವರ *100ನೇ ವರ್ಷದ ಜನ್ಮ ಶತಮಾನೋತ್ಸವ,* *ಸುಶಾಸನ ದಿನ*  ಪ್ರಯುಕ್ತ 100 *ಶತದಿಪೋತ್ಸವದ* ಆಚರಣೆ

ಬಿಜೆಪಿ ಭದ್ರಾವತಿ ಮಂಡಲದ ಕಾರ್ಯಾಲಯದಲ್ಲಿ ಅಜಾತಶತ್ರು, ಭಾರತ ರತ್ನ, ಕೋಟಿ ಕೋಟಿ ಕಾರ್ಯಕರ್ತರಿಗೆ ಪ್ರೇರಣೆ ಮಾರ್ಗದರ್ಶಕರಾದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಭದ್ರಾವತಿ ಮಂಡಲದ ಅಧ್ಯಕ್ಷರಾದ *ಧರ್ಮ ಪ್ರಸಾದ್ ಜಿ* ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಾಲಯದ ಆವರಣವನ್ನು  ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 
    ಅನಂತರ  ಕಾರ್ಯಕರ್ತರು 100 ಶತ ದೀಪಗಳನ್ನು ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.  ಶ್ರೀ ಹರ್ಷ ಕೆ ಎನ್, ವಕೀಲರು ನುಡಿ ನಮನಗಳನ್ನು ಅರ್ಪಿಸಿದರು. 

 ಈ ಕಾರ್ಯಕ್ರಮದಲ್ಲಿ ಭದ್ರಾವತಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್, ಸುಶಾಸನ ದಿನ ಕಾರ್ಯಕ್ರಮದ ಸಂಚಾಲಕರಾದ ಸಾಗರ್ ಡಿ ಆರ್, ಸಹ ಸಂಚಲಕರಾದ ಕಲ್ಲೇಶ್, ಜಿಲ್ಲಾ ವಿಶೇಷ ಆಫ್ವಾನಿತರಾದ ಸಿಮೆಂಟ್ ಮಂಜಣ್ಣ, ಪ್ರಮುಖರಾದ ರಾಮಲಿಂಗಯ್ಯ, ಮೋರ್ಚ  ಅಧ್ಯಕ್ಷರು ರಾಜಶೇಖರ್, ಧನುಷ್ ಬೋಸ್ಲೆ,
 ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸನ್ನ ಕುಮಾರ್ ಬಾರಂದೂರು, ಸೇರಿದಂತೆ ಸಚ್ಚಿದಾನಂದ,  ಉಮಾವತಿ,    ಲೋಲಕ್ಷಿ, ಜೈ ಲಕ್ಷ್ಮಿ ಹಾಗೂ ಪ್ರಮುಖ  ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.