ಎಲ್ಲಾ ಸಮಾನ‌ಮನಸ್ಕ ಪತ್ರಕರ್ತರಿಗೆ ನೂತನ ಶಿವಮೊಗ್ಗ KWJVoice ಸಂಘಕ್ಕೆ ಆತ್ಮೀಯವಾಗಿ ಸ್ವಾಗತ....

ಶಿವಮೊಗ್ಗದಲ್ಲಿ ನೂತನ ಪತ್ರಕರ್ತರ ಸಂಘ (KWJVoice) ಅಸ್ತಿತ್ವಕ್ಕೆ: ಸದಸ್ಯತ್ವ ಪಡೆಯಲು ಅರ್ಜಿ ಅಹ್ವಾನ
ಶಿವಮೊಗ್ಗ: ಶ್ರೀಯುತ ಬಂಗ್ಲೆ ಮಲ್ಲಿಕಾರ್ಜುನ  ರಾಜ್ಯಾದ್ಯಕ್ಷರ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದೆ .ಸಂಘದ ಕಚೇರಿ ಕೂಡ ಶಿವಮೊಗ್ಗದ ದುರ್ಗಿಗುಡಿಯ ಭರಣಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.

  ಶಿವಮೊಗ್ಗ ನಗರ ಮತ್ತು ಜಿಲ್ಲೆಯ ನೂರಾರು ಸಮಾನ ಮನಸ್ಕ ಪತ್ರಕರ್ತರು ಸೇರಿ ಯಾವುದೇತಾರಮ್ಯವಿಲ್ಲದೇ,ಬೇದಭಾವ ಇಲ್ಲದೇ,ಮಾದ್ಯಮ ಪಟ್ಟಿಯಲ್ಲಿನ ಪತ್ರಕರ್ತರು ಮತ್ತು ಮಾದ್ಯಮ ಪಟ್ಟಿ ಹೊರತುಪಡಿಸಿದ ಪತ್ರಕರ್ತರು ಹಾಗೂ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ಬ್ಲಾಗ್,ವೆಬ್ ಸೈಟ್ ,ಯೂಟ್ಯೂಬ್  ಪತ್ರಕರ್ತರು ಸೇರಿ ಕಟ್ಟಿದ ಸಂಘಟನೆ ಇದಾಗಿದೆ. ಈ ನೂತನ ಸಂಘಟನೆಯ ಉದ್ದೇಶ ಯಾವ ಸಂಘಟನೆಯ ವಿರುದ್ದವು ಅಲ್ಲ.

 ದಿನಪತ್ರಿಕೆ,ವಾರಪತ್ರಿಕೆ,fortnightly,
ಮಾಸಿಕೆ ಪತ್ರಿಕೆಯ ಪತ್ರಕರ್ತರು ನೂತನ ಪತ್ರಕರ್ತರ  ಸಂಘಟನೆಯಲ್ಲಿ ಸೇರ ಬಯಸುವವರು ಸಂಘದ ಕಚೇರಿಯಲ್ಲಿ ಅರ್ಜಿ ಫಾರಂ ಪಡೆದು ಸೂಕ್ತವಾದ ದಾಖಲಾತಿ ಯೊಂಧಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಬಹುದು.

ರಾಜ್ಯಾದ್ಯಕ್ಷರ ಆದೇಶದ ಮೇರೆಗೆ ಶಿವಮೊಗ್ಗ ಜಿಲ್ಲಾ ಘಟಕದ ಪಧಾದಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸರ್ವಾನುಮತದಿಂದ ಎಲ್ಲರ ಒಪ್ಪಿಗೆ ಪಡೆದು ಸರ್ವಾನುಮತದಿಂದ ನೇಮಕ ಮಾಡಲಾಗಿದೆ.

ಇದು ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಯಾಗಿದೆ. ರಾಜ್ಯಾದ್ಯಂತ ಈಗಾಗಲೇ 3500 ಸದಸ್ಯರು ಇದ್ದಾರೆ. ಸುಮಾರು ಜಿಲ್ಲೆಗಳಲ್ಲಿ ಸಂಘದ ಜಿಲ್ಲಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕದಲ್ಲಿ ಸಮಾನ ಮನಸ್ಕ  ಪ್ರಾಮಾಣಿಕ ಪತ್ರಕರ್ತರು, ನೈಜ ಪತ್ರಕರ್ತರನ್ನು  ಈ ಸಂಘಟನೆಯಲ್ಲಿ ತರುವ ಪ್ರಯತ್ನ ನಡೆದಿದೆ.

ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಲ್ಲಿರುವ ಪತ್ರಿಕೆಯ ಸಂಪಾದಕರು ವರದಿಗಾರರು ಹಾಗೂ ಡಿಜಿಟಲ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾದ ಪತ್ರಕರ್ತರನ್ನು ಈ ಸಂಘಟನೆಗೆ ಸೇರಿಸುವ ಪ್ರಯತ್ನ ಮುಂದುವರಿದಿದೆ. 

 ಈಗಾಗಲೇ ಸದರಿ ಸಂಘದ ಸದಸ್ಯರಾಗಲು 100 ಕ್ಕೂ ಹೆಚ್ಚು ಪತ್ರಕರ್ತರು ಸದಸ್ಯತ್ವದ ಅರ್ಜಿ ಫಾರಂ ಪಡೆದಿದ್ದಾರೆ.ಅವರೆಲ್ಲರನ್ನೂ ಅರ್ಜಿಗಳನ್ನು ಪರಿಶೀಲನೆ ಮಾಡಿ ಸಂಘದಲ್ಲಿ ಸೇರಿಸುವ ಪ್ರಯತ್ನ ನಡೆದಿದೆ.ಎಲ್ಲಾ ಅರ್ಜಿಗಳನ್ನು ಅನುಮೋದನೆ ಗಾಗಿ ರಾಜ್ಯ ಅದ್ಯಕ್ಷ ರಿಗೆ ಕಳುಹಿಸಲಾಗುವುದು.ಅನುಮೋದನೆ ಯಾದ ನಂತರ ಅಧಿಕೃತ ಐಡಿ ಕಾರ್ಡ್ ಸದಸ್ಯರಿಗೆ ವಿತರಿಸಲಾಗುತ್ತದೆ.
 
ಶಿವಮೊಗ್ಗ ಜಿಲ್ಲಾ ಘಟಕದ  Karnataka working journalist Voice ಸಂಘಟನೆಯ ಸದಸ್ಯತ್ವದ ಅರ್ಜಿಗಳು ಲಭ್ಯವಿದೆ.ಅರ್ಜಿ ಮತ್ತು ಸದಸ್ಯತ್ವದ ಶುಲ್ಕ ರೂ.500/- ನೀಡಿ ಅರ್ಜಿ  ಪಡೆದುಕೊಳ್ಳಬಹುದು. .ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಅರ್ಜಿಯನ್ನು ನೀಡಲಾಗುವುದು.
ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಆತ್ಮೀಯವಾಗಿ ಸ್ವಾಗತ.ಬನ್ನಿ ಕೈ ಜೋಡಿಸಿ
ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಆತ್ಮೀಯವಾಗಿ ಸ್ವಾಗತ.ಬನ್ನಿ ಕೈ ಜೋಡಿಸಿ ಒಟ್ಟಾಗಿ ಪತ್ರಕರ್ತರ ಶ್ರೇಯೋ ಅಭಿವೃದ್ದಿ,ಹಿತಕಾಯುವ ಕೆಲಸ ಮಾಡೋಣ,ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸೋಣ...ಸರ್ಕಾರದಿಂದ ಪತ್ರಕರ್ತರಿಗೆ ಸಿಗಬಹುದಾದ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡೋಣ...
ಅರ್ಜಿಯ ಜೊತೆಯಲ್ಲಿ ತಮ್ಮ ಪತ್ರಿಕೆಯ ಒಂದು ಪ್ರತಿ, ಒಂದು ಪಾಸ್ ಪೋರ್ಟ್ ಪೋಟೋ....RNI certificate xerox,ಆದಾರ್ ಕಾರ್ಡ್ ನೀಡತಕ್ಕದ್ದು. ವರದಿಗಾರರು ಮತ್ತು ಪೋಟೋ ಗ್ರಾಫ್ ಗಳು ಆಗಿದ್ದಲ್ಲಿ ಸಂಪಾದಕರಿಂದ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಧೃಡಿಕರಣ ಪತ್ರ ತರತಕ್ಕದ್ದು. 

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಘಟಕದ Karnataka working journalist Voice ಸಂಘದ ಜಿಲ್ಲಾ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ (ರಾಜು).ಮೊ.9449063043 ಮತ್ತು ಪ್ರಧಾನ ಕಾರ್ಯದರ್ಶಿಯಾದ ಅರವಿಂದ್.ಮೊ.9481090929 ಇವರನ್ನು ಸಂಪರ್ಕಿಸಲು ಕೋರಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.