KWJV ನೂತನ ಶಿವಮೊಗ್ಗ ಜಿಲ್ಲಾ ಘಟಕದ ಪತ್ರಕರ್ತರಿಗೆ ಐಡಿ ಕಾರ್ಡ್ ವಿತರಣೆ

ಶಿವಮೊಗ್ಗ: ಶ್ರೀಯುತ ಬಂಗ್ಲೆ ಮಲ್ಲಿಕಾರ್ಜುನ  ರಾಜ್ಯಾದ್ಯಕ್ಷರ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕ ಕಾರ್ಯಾಲಯ ಇತ್ತಿಚೆಗೆ ಅಸ್ತಿತ್ವಕ್ಕೆ ಬಂದಿದೆ. ಸದಸ್ಯತ್ವ ಹೊಂದಿದ ಪತ್ರಕರ್ತರಿಗೆ ಇಂದು ಅಧಿಕೃತವಾಗಿ ಜಿಲ್ಲಾ ಅಧ್ಯಕ್ಷರಾದ ಡಿ.ಜಿ.ನಾಗರಾಜ್ ರವರು ಐಡಿ ಕಾರ್ಡ್ ವಿತರಣೆ ಮಾಡಿ ಸದಸ್ಯರಿಗೆ ಶುಭ ಕೋರಿದರು.ಸದರಿ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮ ಇಂದು ಶನಿವಾರ ಸಂಜೆ ದುರ್ಗಿಗುಡಿ 3 ನೇ ಕ್ರಾಸ್, ಭರಣಿ ಕಾಂಪ್ಲೆಕ್ಸ್ ನಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸದಸ್ಯರೊಂದಿಗೆ   ಮಾತನಾಡಿದ ಜಿಲ್ಲಾಧ್ಯಕ್ಷರು  ಸಂಘಟನೆಗೆ ಒತ್ತು ನೀಡುವಂತೆ ತಿಳಿಸಿದರು. ಈಗಾಗಲೇ  50 ಕ್ಕೂ ಹೆಚ್ಚು ಸದಸ್ಯರು ಅರ್ಜಿಯನ್ನು ‌ಪಡೆದಿದ್ದು, ಇದೀಗ 30 ಸದಸ್ಯರಿಗೆ ಐಡಿ ಕಾರ್ಡ್ ಬಂದಿದೆ. ಶಿವಮೊಗ್ಗ ನಗರ ಮತ್ತು ಜಿಲ್ಲೆಯ ನೂರಾರು ಸಮಾನ ಮನಸ್ಕ ಪತ್ರಕರ್ತರು ಸೇರಿ ಯಾವುದೇ ತಾರಮ್ಯವಿಲ್ಲದೇ,ಬೇದಭಾವ ಇಲ್ಲದೇ,ಮಾಧ್ಯಮ ಪಟ್ಟಿ ಮತ್ತು ಮಾಧ್ಯಮ ಪಟ್ಟಿ ಹೊರತುಪಡಿಸಿದ ಎಲ್ಲಾ ಪತ್ರಕರ್ತರು ಹಾಗೂ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ಬ್ಲಾಗ್,ವೆಬ್ ಸೈಟ್ ಪತ್ರಕರ್ತರು ಸೇರಿ ಕಟ್ಟಿದ ಸಂಘಟನೆ ಇದಾಗಿದೆ ಎಂದರು.ಈ ಸಂಘಟನೆಯ ಉದ್ದೇಶ ಯಾವ ಸಂಘಟನೆಯ ವಿರುದ್ದವು ಅಲ್ಲ .ಅದಕ್ಕೆ ನಮ್ಮ ಹತ್ತಿರ ಟೈಮ್ ಸಹ ಇರುವುದಿಲ್ಲ ನಮ್ಮ ಉದ್ದೇಶ ಒಟ್ಟಾಗಿ ಪತ್ರಕರ್ತರ ಶ್ರೇಯೋ ಅಭಿವೃದ್ದಿ,ಹಿತಕಾಯುವ ಕೆಲಸ ಮಾಡೋಣ,ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸೋಣ ಎಂದರು.ದಿನಪತ್ರಿಕೆ,ವಾರಪತ್ರಿಕೆ,fortnightly,
ಮಾಸಿಕೆ ಪತ್ರಿಕೆಯ ಪತ್ರಕರ್ತರು ನೂತನ ಪತ್ರಕರ್ತರ  ಸಂಘಟನೆಯಲ್ಲಿ ಸೇರ ಬಯಸುವವರು ಸಂಘದ ಕಚೇರಿಯಲ್ಲಿ ಅರ್ಜಿ ಫಾರಂ ಪಡೆದು ಸೂಕ್ತವಾದ ದಾಖಲಾತಿಯೊಂಧಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಬಹುದು ಎಂದರು.
ಶಿವಮೊಗ್ಗ ಜಿಲ್ಲಾ ಘಟಕದ  Karnataka working journalist Voice ಸಂಘಟನೆಯ ಸದಸ್ಯತ್ವದ ಅರ್ಜಿಗಳು ಲಭ್ಯವಿದೆ.ಅರ್ಜಿ ಮತ್ತು ಸದಸ್ಯತ್ವದ ಶುಲ್ಕ ಸೇರಿ ರೂ.500/- ನೀಡಿ ಅರ್ಜಿ  ಪಡೆದುಕೊಳ್ಳಬಹುದು. .ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಅರ್ಜಿಯನ್ನು ನೀಡಲಾಗುವುದು ಎಂದರು.ಹೆಚ್ಚಿನ ಮಾಹಿತಿಗಾಗಿ  Karnataka working journalist Voice ಸಂಘದ ಜಿಲ್ಲಾ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ (ರಾಜು).ಮೊ.9449063043 ಮತ್ತು ಪ್ರಧಾನ ಕಾರ್ಯದರ್ಶಿಯಾದ ಅರವಿಂದ್.ಮೊ.9481090929 ಇವರನ್ನು ಸಂಪರ್ಕಿಸುವಂತೆ ತಿಳಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.