ಫೆಬ್ರವರಿ 5ರಿಂದ 10ರ ವರೆಗೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಕ್ಯಾನ್ಸರ್ ಜಾಗೃತಿ ಸಪ್ತಾಹ
ಶಿವಮೊಗ್ಗ: ಕ್ಯಾನ್ಸರ್ ರೋಗಿಗಳಿಗೆ “ಪಿಕ್‌ಲೈನ್' ಕಾರ್ಯ ವಿಧಾನದಿಂದ ನೋವು ರಹಿತ ಕೀಮೋಥೆರಪಿ ಸಾದ್ಯ. ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಫೆಬ್ರವರಿ 5ರಿಂದ 10ರ ವರೆಗೆ ಕ್ಯಾನ್ಸರ್ ಜಾಗೃತಿ ಸಪ್ತಾಹ ಆಯೋಜಿಸಲಾಗಿದೆ ಎಂದು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿಸ್ಟ್ ಡಾ. ಅಪರ್ಣ ಶ್ರೀವತ್ಸರವರು ತಿಳಿಸಿದರು.
ಇಂದು ಬೆಳಿಗ್ಗೆ ಶಿವಮೊಗ್ಗದಲ್ಲಿ ಖಾಸಾಗಿ ಹೋಟೆಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕ್ಯಾನ್ಸರ್ ಒಂದು ಮಾರಣಾಂತಿಕ ರೋಗವಾಗಿದ್ದು ಆರಂಭಿಕ ಹಂತದಲ್ಲೇ ಸೂಕ್ತ ತಪಾಸಣೆಗಳ ಮೂಲಕ ಪತ್ತೆ ಹಚ್ಚಿ ರೋಗಿಯನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಫೆಬ್ರುವರಿ 4ರಂದು ವಿಶ್ವದಾದ್ಯಂತ ಕ್ಯಾನ್ಸರ್ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು
ಈ ನಿಟ್ಟಿನಲ್ಲಿ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಪ್ರತಿ ತಿಂಗಳು ಮೊದಲನೇ ಗುರುವಾರ ಕ್ಯಾನ್ಸರ್ ನಿಂದ ಗೆದ್ದುಳಿದವರೊಂದಿಗೆ ಸಮಾಲೋಚನೆಯನ್ನು ನಡೆಸಲಾಗುತ್ತದೆ ಎಂದರು.
ಕೀಮೋಥೆರಪಿಯಿಂದ ಅನೇಕ ಕ್ಯಾನ್ಸರ್‌ಗಳನ್ನು ಸಂಪೂರ್ಣ ಗುಣಪಡಿಸುವುದು ಸಾಧ್ಯವಿದೆ. ಆದರೆ ಕೀಮೋಥೆರಪಿ ತನ್ನದೇ ಆದ ಸೈಡ್ ಎಫೆಕ್ಟ್‌ಗಳನ್ನು ಹೊಂದಿದೆ. ಕೀಮೋ ಇಂಜೆಕ್ಷನ್ ಕೊಟ್ಟ ರಕ್ತನಾಳಗಳಿಗೆ ಹಾನಿ ಮಾಡಿ ನೋವನ್ನುಂಟು ಮಾಡುತ್ತದೆ. ಅಂಥಹ ರಕ್ತನಾಳಗಳು ನಾರುಗಟ್ಟಿ ಮುಂದಿನ ಕೀಮೋಥೆರಪಿಗೆ ರಕ್ತನಾಳಗಳು ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕೀಮೋ ಸರಿಯಾಗಿ ಕೊಡದಿದ್ದಲ್ಲಿ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಬೊಬ್ಬೆಯುಂಟಾಗಿ ಕೈ ಊತ ಬರಬಹುದು. ಕ್ರಮೇಣ ರಕ್ತ ಪರೀಕ್ಷೆಗಳಿಗೆ ರಕ್ತ ತೆಗೆಯುವುದೂ ಕಷ್ಟಕರವಾಗುತ್ತದೆ. ಇಂತಹ ದುಷ್ಪರಿಣಾಮಗಳನ್ನು ತಡೆಗಟ್ಟಿ ಕೀಮೋಥೆರಪಿಯನ್ನು ಸರಿಯಾಗಿ ಹಾಗೂ ನೋವಿಲ್ಲದೆ ಕೊಡಲು “ಪಿಕ್‌ಲೈನ್' ಕ್ಯಾನ್ಸರ್ ರೋಗಿಗಳಿಗೆ ಲೈಫ್‌ಲೈನ್ ಆಗಿದೆ ಎಂದರು.
“ಪಿಕ್‌ಲೈನ್'- ಏನಿದು? (PICC- Peripherally inserted central catheter)
ಕೈಯಿನ ದೊಡ್ಡ ರಕ್ತನಾಳಕ್ಕೆ ತೂರ್ನಳಿಕೆಯನ್ನು ಉಪಯೋಗಿಸಿ “ಪಿಕ್‌ಲೈನ್ಅನ್ನು ಅಳವಡಿಸಲಾಗುತ್ತದೆ. ಇದರಿಂದ ಕರಾರುವಕ್ಕಾಗಿ ರಕ್ತನಾಳದ ಒಳಗೆ ಸರಿಯಾಗಿ ಕೀಮೋಥೆರಪಿಯನ್ನು ಕೊಡಬಹುದು. ರಕ್ತ ಪರೀಕ್ಷೆಗಳಿಗೆ ಬೇಕಾದ ರಕ್ತವನ್ನೂ ಸಹ ಇದರಿಂದ ತೆಗೆಯಬಹುದು. “ಪಿಕ್‌ಲೈನ್'ನ ಸಹಾಯದಿಂದ ಪದೇ ಪದೇ ರೋಗಿಗೆ ಚುಚ್ಚುವ ಅಗತ್ಯವಿಲ್ಲದೇ, ನೋವಿಲ್ಲದೇ ಕೀಮೋಥೆರಪಿ ಕೊಡಬಹುದು. ಒಮ್ಮೆ ಹಾಕಿದ ಕೊಡಬಹುದು. ಒಮ್ಮೆ ಹಾಕಿದ “ಪಿಕ್‌ಲೈನ್ಅನ್ನು 3 ರಿಂದ 6 ತಿಂಗಳು
ಉಪಯೋಗಿಸಬಹುದು ಎಂದರು.
“ಪಿಕ್‌ಲೈನ್ ಅನ್ನು ಅಳವಡಿಸಲು ಅಥವಾ ತೆಗೆಯಲು ಆಪರೇಷನ್ ಅವಶ್ಯಕತೆ ಇರುವುದಿ ಸರಿಯಾದ ಶುಶೂಷೆ ಮಾಡಿದ್ದಲ್ಲಿ “ಪಿಕ್‌ಲೈನ್'ನ ಸೋಂಕು ಮತ್ತು ಬ್ಲಾಕ್‌ಅನ್ನು ತಡೆಗಟ್ಟಬಹುದು. 7 ರಿಂದ ದಿನಗಳಿಗೊಮ್ಮೆ “ಪಿಕ್‌ಲೈನ್ಅನ್ನು ಡ್ರೆಸ್ಟಿಂಗ್ ಮಾಡಬೇಕಾಗುತ್ತದೆ ಎಂದರು.
'ಪಿಕ್‌ಲೈನ್'ನ ಅನುಕೂಲಗಳು:
1. ನೋವಿಲ್ಲದೆ ಕೀಮೋಥೆರಪಿ ಮಾಡಬಹುದು.
2. ಕೀಮೋಥೆರಪಿಯ ಸೈಡ್ ಎಫೆಕ್ಟ್‌ಗಳಾದ ರಕ್ತನಾಳಗಳ ಹಾನಿಯನ್ನು ತಡೆಗಟ್ಟಬಹುದು.
3. ರಕ್ತ ಪರೀಕ್ಷೆಗಳಿಗೆ ರಕ್ತವನ್ನು ನೋವಿಲ್ಲದೆ ತೆಗೆಯಬಹುದು.
4. ಪಿಕ್‌ಲೈನ್ ಅಳವಡಿಸಲು ಆಪರೇಷನ್ ಅಗತ್ಯವಿಲ್ಲ.
ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಪಿಕ್‌ಲೈನ್ ಹಾಕಬಲ್ಲ ಮತ್ತು ಅದರ ಶುಶೂನ ಮಾಡಬಲ್ಲ ನುರಿತ ನರ್ಸ್‌ಗಳು ಮತ್ತು ವೈದ್ಯರ ತಂಡ ಇದೆ. ಕ್ಯಾನ್ಸರ್ ರೋಗಿಗಳು ನೋವಿಲ್ಲದೆ ಮತ್ತು ಸುರಕ್ಷತವಾ ಕೀಮೋಥೆರಪಿ ಪಡೆಯಲು ಸುವ್ಯವಸ್ಥೆಯನ್ನು ಹೊಂದಿದೆ ಎಙದರು.
ಆಸ್ಪತ್ರೆಯ ವೈದ್ಯರುಗಳಾದ ಡಾ. ಅಪರ್ಣ ಶ್ರೀವತ್ಸ, ಡಾ. ವಿವೇಕ್, ಡಾ. ಆಶಾಶ್ರೀ ಉಪಾಧ್ಯ ಡಾ. ಮಧು, ಡಾ. ಶಿಲ್ಪಾ ಪ್ರಭು ಹಾಗೂ ಡಾ. ರವಿ ಇವರುಗಳು ಕ್ರಮವಾಗಿ ಕ್ಯಾನ್ಸರ್ ಕಾಯಿಲೆಯ ಕುರಿತು ಮತ್ತು ಕ್ಯಾನ್ಸರ್ ರೋಗಿಗಳಿಗೆ ಜೀವನ ಶೈಲಿ, ಆಹಾರ ಪದ್ಧತಿ, ಯೋಗ ಮತ್ತು ವ್ಯಾಯಾಮ ಹಾಗೂ ಶಸ್ತ್ರಚಿಕಿತ್ಸೆಯ ಕುರಿತಾಗಿ ಉಚಿತ ಸಲಹೆ ಮತ್ತು ವೈದ್ಯರೊಂದಿಗೆ ಸಮಾಲೋಚನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಲು ತಪಾಸಣಾ ಶಿಬಿರಗಳು ಹಾಗೂ ಪ್ಯಾಕೇಜ್ ಸೌಲಭ್ಯವು ಫೆಬ್ರುವರಿ 29ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ: 9513915370,
9886413131 ಸಂಪರ್ಕಿಸಿ ಎಂದರು.
ಪತ್ರಿಕಾಗೋಷ್ಠಿ ಯಲ್ಲಿ
ಡಾ. ವಿವೇಕ್ ಎಂಎ ಸರ್ಜಿಕಲ್ ಅಂಕಾಲಜಿಸ್ಟ್
ಡಾ. ರವಿ ರೇಡಿಯೇಷನ್ ಅಂಕಾಲಜಿಸ್ಟ್ ಉಪಸ್ಥಿತರಿದ್ದರು.
Leave a Comment