ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೇಟ್ ಕೆ.ಎಸ್. ಈಶ್ವರಪ್ಪ ಅಥವಾ ಕಾಂತೇಶ್ ಗೆ ಸಂಜೆ ಪ್ರಕಟ!! News update..
ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೇಟ್ ಇದುವರೆಗೆ ಪ್ರಕಟವಾಗದೇ ವಿಳಂಬ ಆಗುತ್ತಿರುವುದಕ್ಕೆ ಬಿಜೆಪಿಯಲ್ಲಿ ಕಾರ್ಯಕರ್ತರು ಅಸಮಾಧಾನ ಗೊಂಡಿದ್ದು, ಯಾರಿಗಾದರೂ ಸರಿ ಟಿಕೇಟ್ ಅನೌನ್ಸ್ ಮಾಡಿ ಎಂಬ ಒತ್ತಾಯ ಕೇಳಿಬರುತ್ತಿದೆ.ಇನ್ನೆರಡು ದಿವಸ ಮಾತ್ರ ಚುನಾವಣೆ ಗೆ ಸ್ಪರ್ಧಿಸಲು ನಾಮೀನೇಷನ್ ಮಾಡಲು ಕಾಲವಾಕಾಶವಿದ್ದು, ಬಹುಬೇಗನೇ ಟಿಕೇಟ್ ಯಾರಿಗೆ ಎಂಬುದನ್ನು ಪ್ರಕಟಮಾಡುವ ಜವಾಬ್ದಾರಿ ಹೈಕಮಾಂಡ್ ಮೇಲಿದೆ.
ಇತ್ತೀಚಿಗೆ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಕೆ.ಎಸ್. ಈಶ್ವರಪ್ಪ ಮತ್ತು ಅವರ ಮಗ ಕಾಂತೇಶ್ ರವರು ಯಾವುದೇ ಅಸಮಾಧಾನ ಸೂಚಿಸದೇ ಹೈಕಮಾಂಡ್ ಹೇಳಿದಂತೆ ಮತ್ತೆ ಪಕ್ಷಕ್ಕೆ ಗೌರವ ತರುವ ಮಾತನಾಡುತ್ತಾ ಇರುವುದರಿಂದ ಅವರ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಒಲವು ಹೆಚ್ಚಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಇಂದು ಸಂಜೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಯಾರೇಂಬುದು ಸಂಜೆ ಒಳಗೆ ಪ್ರಕಟವಾಗಲಿದ್ದು. ಈಶ್ವರಪ್ಪ ಅಥವಾ ಅವರ ಮಗ ಕಾಂತೇಶ್ ಗೆ ಟೀಕೇಟ್ ಗ್ಯಾರಂಟಿ ಎಂದು ತಿಳಿದುಬಂದಿದೆ. ನಾಳೆ ಈಶ್ವರಪ್ಪ ಅಥವಾ ಕಾಂತೇಶ್ ಅವರ ಬೆಂಬಲಿಗರೋಂಧಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಬೆಳಿಗ್ಗೆ ಶುಭಗಳಿಗೆಯಲ್ಲಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
News update......
ಅದೇ ರೀತಿಯಲ್ಲಿ ಖ್ಯಾತ ವೈದ್ಯ ಡಾ.ಧನಂಜಯ ಸರ್ಜಿರವರ ಹೆಸರು ಸಹ ಮಂಚೂಣಿಯಲ್ಲಿ ಇದೀಗ ತೇಲಿ ಬಂದಿದ್ದು, ಶಿವಮೊಗ್ಗ ನಗರ ಕ್ಷೇತ್ರ ದಿಂದ ಸರ್ಜಿಯವರಿಗೆ ಟಿಕೇಟ್ ಗ್ಯಾರಂಟಿ ನಾಳೆ ಬಿ ಫಾರಂ ಅವರಿಗೆ ಸಿಗುತ್ತದೆ, ರೆಡಿಯಾಗಿ ಎಂದು ಬಿಜೆಪಿಯ ಮುಖಂಡರುಗಳ ಒಂದು ಬಣ ಅವರಿಗೆ ಅಶ್ವಾಸನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಇದರ ಮದ್ಯೆ ಬಿಜೆಪಿ ಹಿರಿಯ ಮುಖಂಡ RSS ಮುಖಂಡರಾದ ಭಾನುಪ್ರಕಾಶ್ ಮಗ ಶಿವಮೊಗ್ಗ ಬಿಜೆಪಿ ಯುವಮೊರ್ಚಾ ಜಿಲ್ಲಾದ್ಯಕ್ಷ ಎಂ.ಬಿ. ಹರಿಕೃಷ್ಣ ಹೆಸರು ಪ್ರಕಟವಾದರೇ ಅಚ್ಚರಿ ಏನಿಲ್ಲ.....
ಇದೀಗ ಎರಡು ದಿನ ಬುಧವಾರ ಮಧ್ಯಾಹ್ನ ದಿಂದ ಗುರುವಾರ ಸಂಜೆ ವರೆಗೆ ಅಮಾವಾಸ್ಯೆ ಇರುವುದರಿಂದ. ನಾಳೆ ಬೆಳಿಗ್ಗೆ ಶುಭಮಹೋರ್ತದಲ್ಲಿ ನಾಮಪತ್ರ ಸಲ್ಲಿಸ ಬೇಕಾಗಿದೆ. ಆದ್ದರಿಂದ ಯಾರಾದರೊಬ್ಬರು ಹೆಲಿಕಾಪ್ಟರ್ ನಲ್ಲಿ ಬಿ ಫಾರಂ ತೆಗೆದುಕೊಂಡು ಬರುವ ಸಾದ್ಯತೆ ಇದೆ ಎನ್ನಲಾಗಿದೆ. ಬಹಳ ಕುತೂಹಲ ಕೆರಳಿಸಿದೆ.
ಈ ಬಗ್ಗೆ ನಾಮ ಪತ್ರ ಸಲ್ಲಿಸಲು ಎಲ್ಲಾ ತಯಾರಿ ನಡೆದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಸಂಜೆಯವರೆಗೆ ಕಾಯ್ದು ನೋಡುವ..
Leave a Comment