ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಹೊಸ ಕಟ್ಟಡದ ಉದ್ಘಾಟನೆ
ಶಿವಮೊಗ್ಗ: ಈ ದಿನ ದಿನಾಂಕಃ-04-01-2023 ರಂದು ಬೆಳಗ್ಗೆ *ಶ್ರೀ ಅರಗ ಜ್ಞಾನೇಂದ್ರ, ಮಾನ್ಯ ಗೃಹ ಸಚಿವರು ಕರ್ನಾಟಕ ರಾಜ್ಯರವರು* ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಶಿವಮೊಗ್ಗ ನಗರದಲ್ಲಿ ನಿರ್ಮಿಸಲಾಗಿರುವ *ಪೂರ್ವ ಸಂಚಾರ ಪೊಲೀಸ್ ಠಾಣೆಯ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಗೆ ಹಸ್ತಾಂತರಿಸಿದರು.* ಈ ಸಂದರ್ಭದಲ್ಲಿ ಶ್ರೀ ತ್ಯಾಗರಾಜನ್, ಐಪಿಎಸ್, ಡಿಐಜಿಪಿ, ಪೂರ್ವ ವಲಯ ದಾವಣಗೆರೆ, ಶ್ರೀ ಮಿಥುನ್ ಕುಮಾರ್, ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಶ್ರೀ ರೋಹನ್ ಜಗದೀಶ್, ಐಪಿಎಸ್, ಎಎಸ್.ಪಿ ಸಾಗರ, ಶ್ರೀ ಈಶ್ವರಪ್ಪ, ಮಾಜಿ ಸಚಿವರು ಮತ್ತು ಶಾಸಕರು, ಶಿವಮೊಗ್ಗ, ಶ್ರೀ ಆಯನೂರು ಮಂಜುನಾಥ್, ಎಂ ಎಲ್ ಸಿ ಮತ್ತು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.
Leave a Comment