ಹೊಸ ವರ್ಷಾಚರಣೆ ಪಾರ್ಟಿಯಲ್ಲಿ ಏರ್ ಫೈರ್: ಏರ್ ಫೈರ್ ಮಾಡಿದವ ಹೃದಾಯಘಾತದಿಂದ ಸಾವು,ಮತ್ತೊಬ್ಬ ಗುಂಡೇಟು ತಗುಲಿ ಸಾವು

ಶಿವಮೊಗ್ಗ :ಸಹ್ಯಾದ್ರಿ ಕಾಲೇಜು ಬಳಿ ಇರುವ ಗೋಪಾಲ್ ಗ್ಲಾಸ್ ಹೌಸ್ ಮನೆ ಮಾಲೀಕ ಮಂಜುನಾಥ್ ಓಲೇಕರ್ ಎಂಬುವರ ಮನೆಯಲ್ಲಿ ಹೊಸವರ್ಷದ ಪಾರ್ಟಿಯಲ್ಲಿ ಎಡವಟ್ಟೊಂದು ನಡೆದು, ದುರಂತ ಸಂಭವಿಸಿದೆ. 
ಮನೆ ಸುತ್ತಮುತ್ತಲ ಕುಟುಂಬದವರೊಡನೆ ಹೊಸವರ್ಷದ ಸಂಭ್ರಮಚಾರಣೆಯಲ್ಲಿದ್ದ ಮಂಜುನಾಥ್ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಹನ್ನೆರಡು ಗಂಟೆ ರಾತ್ರಿಯಲ್ಲಿ ಏರ್ ಫೈರ್ ಮಾಡಿದ್ದಾರೆ. ಈ ಮೂಲಕ 2023 ಕ್ಕೆ ಶುಭಕೋರಲು ಮುಂದಾಗಿದ್ದಾರೆ.

 ಏರ್​ ಫೈರ್​ ಮಿಸ್ ಪೈರ್ ಆಗಿದೆ. ಅಲ್ಲದೆ ಪಾರ್ಟಿ ಮಾಡುತ್ತಿದ್ದ ಎದುರಿನ ಹುಡುಗನಿಗೆ ತಗುಲಿದೆ.ಗಂಭೀರ ಗಾಯಗೊಂಡ ಯುವಕನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
 ಹೊಸವರ್ಷ ಪಾರ್ಟಿ ಸಂದರ್ಭ ಗಾಳಿಯಲ್ಲಿ ಗುಂಡು ಹಾರಿಸುವ ಸಂದರ್ಭ ಮಿಸ್ ಫೈರ್ ಆಗಿ ವಿನಯ್(34) ಎಂಬುವವರು ಗಂಭೀರ ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಗುಂಡು ಹಾರಿಸಿದ ನಗರದ ಗೋಪಾಲ್ ಗ್ಲಾಸ್ ಮಾಲೀಕ ಮಂಜುನಾಥ್ ಓಲೇಕಾರ್ ಅವರಿಗೆ ಹೃದಯಾಘಾತವಾಗಿದೆ. ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. 

ಮಂಜುನಾಥ್ ಅವರು ತಮ್ಮ ಡಬಲ್ ಬ್ಯಾರಲ್ ಗನ್ ಲೋಡ್ ಮಾಡಿಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಅವರ ಮಗ ಸಂದೀಪ್‌ನ ಸ್ನೇಹಿತ ವಿನಯ್(34) ಎಂಬುವವರಿಗೆ ಹೊಟ್ಟೆಗೆ ಗುಂಡು ತಗುಲಿದೆ.ಶಿವಮೊಗ್ಗದ ವಿದ್ಯಾನಗರದಲ್ಲಿ ಈ ಘಟನೆಯು ಸಂಭವಿಸಿದೆ. 




ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.