ನಿವೃತ್ತ DAR ಧಪೇದಾರ್ ಡ್ರೈವರ್ ತಿಪ್ಪೇಸ್ವಾಮಿ ಹೃದಯಘಾತ ನಿಧನ -ಸಂತಾಪ
ಶಿವಮೊಗ್ಗ: ನಿವೃತ್ತ DAR ಧಫೇದಾರ್ ಡ್ರೈವರ್ ತಿಪ್ಪೇಸ್ವಾಮಿ ಹೃದಯಾಘಾತದಿಂದ ಇಂದು ಬೆಳಿಗ್ಗೆ 10-10 ಕ್ಕೆ ಶರಾವತಿ ನಗರದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ
ಮೃತ ತಿಪ್ಪೇಸ್ವಾಮಿ ರವರು ಹಲವು ವರ್ಷಗಳ ಕಾಲ ರಾಜ್ಯ ಗುಪ್ತ ದಳದಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಮೃತ ತಿಪ್ಪೇಸ್ವಾಮಿ ಇವರು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದರು. ಇವರ ನಿಧನದ ಸುದ್ದಿ ತಿಳಿದ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಪಧಾದಿಕಾರಿಗಳು ಕಂಬನಿ ಮಿಡಿದು ಸಂತಾಪ ವ್ಯಕ್ತಪಡಿಸಿದರು.
ಮೃತ ತಿಪ್ಪೇಸ್ವಾಮಿ ರವರ ಆತ್ಮಕ್ಕೆ ಚಿರಶಾಂತಿಸಿಗಲೀ ಮತ್ತು ಮೃತ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೀ ಎಂದು ಪ್ರಾರ್ಥಿಸುವ...
ಮೃತ ತಿಪ್ಪೇಸ್ವಾಮಿ ರವರು ಪತ್ನಿ ಕೊಟ್ರಮ್ಮ ಮತ್ತು ಮಗ ಶಶಿಧರ್ ಪ್ರಸಾದ್,ಮಗಳು ಸೋನೀಕಾ ಹಾಗೂ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಅಂತ್ಯಸಂಸ್ಕಾರ ಇಂದು ಸಂಜೆ ಸುಮಾರು 4 ಗಂಟೆಯ ನಂತರ ನಗರದ ಶರಾವತಿ ಸ್ಮಶಾನದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
Leave a Comment