ಎಸ್ಎಂಎಸ್ಎಸ್ಎಸ್ ವತಿಯಿಂದ ನೆರೆ ಸಂತ್ರಸ್ಥರಿಗಾಗಿ ನಿರ್ಮಿಸಿರುವ ಮನೆಗಳ ಉದ್ಘಾಟನೆ ಹಸ್ತಾಂತರ ಕಾರ್ಯಕ್ರಮ
ಶಿವಮೊಗ್ಗ: ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ(ಎಸ್ಎಂಎಸ್ಎಸ್ಎಸ್) ವತಿಯಿಂದ ನೆರೆ ಸಂತ್ರಸ್ಥರಿಗಾಗಿ ನಿರ್ಮಿಸಿರುವ ಮನೆಗಳ ಉದ್ಘಾಟನೆ ಹಸ್ತಾಂತರ ಕಾರ್ಯಕ್ರಮ ಇಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯಿತು.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಅನೇಕರು, ಮನೆಗಳನ್ನು ಕಳೆದುಕೊಂಡಿದ್ದರು. ಹಲವು ಮನೆಗಳಿಗೆ ಹಾನಿಯಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಎಸ್ಎಂಎಸ್ಎಸ್ಎಸ್ ಸಂಸ್ಥೆ ಬಿದ್ದ ಮನೆಗಳ ದುರಸ್ತಿ ಮತ್ತು ಹೊಸ ಮನೆಗಳ ನಿರ್ಮಾಣ ಮಾಡುವ ಕಾರ್ಯಕ್ಕೆ ಕೈ ಹಾಕುವ ಮೂಲಕ ದೀನ ದಲಿತರ, ಶೋಷಿತರ, ಅವಕಾಶ ವಂಚಿತ ಸಮುದಾಯಗಳಿಗೆ ನೆರವು ನೀಡಿದೆ.
ಇದರ ಅಂಗವಾಗಿ ಇಂದು ಮನೆಗಳ ಉದ್ಘಾಟನೆ ಮತ್ತು ಹಸ್ತಾಂತರ ಕಾರ್ಯಕ್ರಮ ಸೂಗೂರಿನಿಂದ ಆರಂಭವಾಗಿ ಅಣ್ಣಾನಗರ, ಜೆಪಿ ನಗರ, ಕುಂಸಿ, ಹಾಲ್ಕುಣಿ ಮುಂತಾದ ಗ್ರಾಮಗಳಲ್ಲಿ ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಸುಮಾರ 14 ಮನೆಗಳ ದುರಸ್ತಿ, 7 ಹೊಸ ಮನೆಗಳ ನಿರ್ಮಾಣ ಇದಲ್ಲದೇ, ದಾವಣಗೆರೆ ಜಿಲ್ಲೆಯಲ್ಲಿ ಮನೆಗಳ ದುರಸ್ತಿ, ಹೊಸ ಮನೆ ನಿರ್ಮಾಣ ಸೇರಿ ಒಟ್ಟು 49 ಮನೆಗಳ ದುರಸ್ತಿ ಮತ್ತು ಹೊಸ ಮನೆಗಳನ್ನು ಸಂಸ್ಥೆ ನಿರ್ಮಾಣ ಮಾಡಿದೆ. ಇದು ಫಲಾನುಭವಿಗಳಿಗೆ ಹಸ್ತಾಂತರ ಮಾಡಿದೆ.
ಈ ಮನೆಗಳು ಕೇವಲ ಕ್ರೈಸ್ತ ಸಮುದಾಯಕ್ಕೆ ಮಾತ್ರ ನೀಡದೇ ಹಿಂದು, ಮುಸ್ಲಿಂ ಸಮುದಾಯಗಳಿಗೂ ನೀಡಲಾಗಿದೆ. 20 ಮನೆಗಳಲ್ಲಿ 8 ಮನೆಗಳನ್ನು ಹಿಂದು, 8 ಮನೆ ಮುಸ್ಲಿಂ ಸಮುದಾಯಕ್ಕೆ, 4 ಕ್ರೈಸ್ತ ಸಮುದಾಯದವರಿಗೆ ನೀಡುವ ಮೂಲಕ ಧರ್ಮಾತೀತವಾಗಿ ಸಂಸ್ಥೆ ಕೆಲಸ ಮಾಡಿದೆ. 1 ಮನೆಗೆ ಸುಮಾರು 4 ಲಕ್ಷ ರೂ. ಖರ್ಚು ಮಾಡಿ 49 ಮನೆ ನಿರ್ಮಾಣ ಮಾಡುವ ಮೂಲಕ ನೊಂದಿರುವ ಕುಟುಂಬಗಳಿಗೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಬೆಂಗಳೂರು ಮಹಾಧರ್ಮ ಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾಡೋ, ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ, ಫ್ರಾನ್ಸಿಸ್ ಸೆರಾವೋ, ಫಾದರ್ ಕ್ಲಿಫರ್ಡ್ ರೋಷನ್ ಪಿಂಟೋ ಸೇರಿದಂತೆ ಹಲವರು ಇದ್ದರು.
Leave a Comment