ಇನ್ಸ್‌ಪೆಕ್ಟರ್ ಗಳ ವರ್ಗಾವಣೆ: ಶಿವಮೊಗ್ಗಕ್ಕೆ ಖಡಕ್ ಇನ್ಸ್ಪೆಕ್ಟರ್ cyber cop award ಗುರುರಾಜ.ಕೆ.ಟಿ ತುಂಗಾನಗರ ಠಾಣೆಗೆ ಆಗಮನ
ಇನ್ನೊಂದೆಡೆ ಶಿವಮೊಗ್ಗ ಪ್ರಮುಖ ಇನ್‌ಸ್ಪೆಕ್ಟರ್‌ಗಳ ಪೈಕಿ ಒಬ್ಬರಾದ ದೀಪಕ್ ಎಂಎಸ್ ಇವರಿಗೆ ವರ್ಗಾವಣೆ ಆಗಿದ್ದು ಅವರಿಗೆ ಸ್ಥಳ ತೋರಿಸಿಲ್ಲ. ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ದಕ್ಷ,ಪ್ರಾಮಾಣಿಕ, ಖಡಕ್ ಇನ್ಸ್ಪೆಕ್ಟರ್, cyber cop award ಗುರುರಾಜ.ಕೆ.ಟಿ – ಶಿವಮೊಗ್ಗದ ತುಂಗಾ ನಗರ ಠಾಣೆಗೆ ಆಗಮನ:. cyber cop award ಗುರುರಾಜ.ಕೆ.ಟಿ –
ಇನ್ನೊಂದೆಡೆ ಕಡೂರು ಪೊಲೀಸ್ ಟ್ರೈನಿಂಗ್ ಸ್ಕೂಲ್‌ನಲ್ಲಿದ್ದ ಕೆಟಿ ಗುರುರಾಜ್ ಶಿವಮೊಗ್ಗಕ್ಕೆ ವಾಪಸ್ ಆಗುತ್ತಿದ್ದಾರೆ.ಇವರು ದಕ್ಷ ಪ್ರಾಮಾಣಿಕ,ಖಡಕ್ ಅಧಿಕಾರಿಯಾಗಿದ್ದು ,ಈ ಹಿಂದೇ ದೊಡ್ಡ ಪೇಟೆ ಠಾಣೆಯಲ್ಲಿ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸಿ ಹಲವಾರು ಪ್ರಕರಣಗಳಲ್ಲಿನ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾಗಿದ್ದರು.ಕಿಡಿಗೇಡಿಗಳಿಗೆ ಸಿಂಹಸ್ವಪ್ನವಾಗಿದ್ದರು.ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ನೀಡುವ ವರ್ಷದ ಸೈಬರ್ ಕಾಪ್ (cyber cop award) ಪ್ರಶಸ್ತಿ ಶಿವಮೊಗ್ಗ ಸಿ.ಇ.ಎನ್ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ಕೆ.ಟಿ.ಗುರುರಾಜ್ ಅವರಿಗೆ ಲಭಿಸಿತ್ತು. ಇದು ಶಿವಮೊಗ್ಗ ಪೊಲೀಸ್ ಇಲಾಖೆಗೆ ಹಿರಿಮೆ ಹೆಚ್ಚಿಸಿತ್ತು.ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.ಹರಿಯಾಣದ ಗುರುಗ್ರಾಮದಲ್ಲಿ ನಡೆದ ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸಮಾವೇಶದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಪ್ರಶಸ್ತಿ ಸ್ವೀಕರಿಸಿದ್ದರು.ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದರು.
ವೇಗದ ತನಿಖೆ, ಶಿಕ್ಷಕನಿಗಾಯ್ತು ಶಿಕ್ಷೆ:
ಮಕ್ಕಳ ಅಶ್ಲೀಲ ಚಿತ್ರಗಳನ್ನು ಇಂಟರ್ ನೆಟ್ ಗೆ ಅಪ್ಲೋಡ್ ಮಾಡುತ್ತಿರುವ ಪ್ರಕರಣವನ್ನು ಶಿವಮೊಗ್ಗ ಸಿ.ಇ.ಎನ್ ಠಾಣೆ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಭೇದಿಸಿದ್ದರು. ಶಿವಮೊಗ್ಗದ ಶಿಕ್ಷಕನೊಬ್ಬ ಈ ಕೃತ್ಯ ಎಸಗಿದ್ದ. ಕೆ.ಟಿ.ಗುರುರಾಜ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಈ ಪ್ರಕರಣದ ಶೀಘ್ರ ತನಿಖೆ, ಆರೋಪಿಗೆ ಶಿಕ್ಷೆ ಕೊಡಿಸಿದ್ದು ಭಾರತದ ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆಯಾಗಿತ್ತು.
ಇನ್ಸ್‌ಪೆಕ್ಟರ್ ಗಳ ವರ್ಗಾವಣೆ: ಶಿವಮೊಗ್ಗಕ್ಕೆ ಆಗಮನ,ಮತ್ತೆ ನಿರ್ಗಮನ ಯಾರು?ಅಂತೀರಾ ನೋಡಿ...
ಗುರುರಾಜ.ಕೆ.ಟಿ – ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿರುವ ಪೊಲೀಸ್ ತರಬೇತಿ ಶಾಲೆಯಿಂದ ಶಿವಮೊಗ್ಗದ ತುಂಗಾ ನಗರ ಠಾಣೆಗೆ ವರ್ಗಾವಣೆ.
ಮಂಜುನಾಥ.ಬಿ – ತುಂಗಾ ನಗರ ಪೊಲೀಸ್ ಠಾಣೆಯಿಂದ ಲೋಕಾಯುಕ್ತ ಎಸ್‌ಐಟಿಗೆ ವರ್ಗಾಯಿಸಲಾಗಿದೆ.
ಮಂಜುನಾಥ – ಆಂತರಿಕ ಭದ್ರತಾ ವಿಭಾಗದ ವರ್ಗಾವಣೆ ಆದೇಶದಲ್ಲಿರುವವರು ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಗೆ ವರ್ಗಾವಣೆ.
ದೀಪಕ್.ಎಂ.ಎಸ್ – ಶಿವಮೊಗ್ಗ ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
Leave a Comment