ನಿವೃತ್ತ ಬ್ಯಾಂಕರ್ ಸಮಸ್ಯೆಗಳು ಅಗಾಧವಾಗಿ ಬೆಳೆದಿದೆ - ಡಾ ಇಂದ್ರಜಿತ್ ಸನ್ಯಾಲ್
ಬ್ಯಾಂಕ್ ನಿವೃತ್ತಿ ಹೊಂದಿದವರಲ್ಲಿ ಏಕತೆಯನ್ನು ಬಲಪಡಿಸಲು ತಮ್ಮ ಬೆಂಬಲ ಮತ್ತು ಧ್ವನಿಯನ್ನು ಹೆಚ್ಚಿಸಲು ಭಾರತದ ಪ್ರತಿಯೊಂದು ರಾಜ್ಯ ಭಾಗಗಳ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದು ಯು ಎಫ್ ಬಿ ಆರ್ ಅಧ್ಯಕ್ಷ ಡಾ ಇಂದ್ರಜಿತ್ ಸನ್ಯಾಲ್, ಸಂಘಟನಾ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಕೊಡಕ್ಕಲ್ ಶಿವಪ್ರಸಾದ್, ಶ್ರೀ ಅಲೋಕತೀರ್ಥ ಮೊಂಡಲ್, ಶ್ರೀ ಎ ಎಸ್ ಮೂರ್ತಿ, ಶ್ರೀ ಘನಶ್ಯಾಮ್ ಜಂಗೀರ್, ಶ್ರೀಮತಿ ಆಶಾ ಶರ್ಮಾ, ಶ್ರೀ ಕಾಮೇಶ್ವರ ರಾವ್, ಶ್ರೀಮತಿ ಪೂರ್ಣಿಮಾ ತೋನ್ಸೆ ಮುಂತಾದ ವಿವಿಧ ಬ್ಯಾಂಕರ್ ಗಳು ಭಾಗವಹಿಸಿದ್ದು ಚಿತ್ರದಲ್ಲಿ ಕಾಣಬಹುದು.
ಕೋಲ್ಕತ್ತಾ : ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ರಿಟೈರ್ಡ್ (ರಿ) ಇವರ ಕಾರ್ಯಕಾರಿ ಸಮಿತಿ ಮತ್ತು ವಾರ್ಷಿಕ ಸಾಮಾನ್ಯ ಸಭೆಯು ಜೂಮ್ ಮೀಟಿಂಗ್ ಅಪ್ಲಿಕೇಶನ್‌ನಲ್ಲಿ ಈದಿನ ನಡೆಸಿತು.
ಸಭೆಯ ಅಧ್ಯಕ್ಷತೆಯನ್ನು ಯು ಎಫ್ ಬಿ ಆರ್ ಇದರ ಅಧ್ಯಕ್ಷ ಹಾಗೂ ಬ್ಯಾಂಕ್ ಓಫ್ ಇಂಡಿಯಾ ನಿವೃತ್ತ ಸಹಾಯಕ ಮಹಾ ಪ್ರಭಂದಕ ಡಾ ಇಂದ್ರಜಿತ್ ಸನ್ಯಾಲ್ ಅವರು ವಹಿಸಿ ನಿವೃತ್ತ ಬ್ಯಾಂಕರ್ ಗಳ ವಿವಿಧ ಸಮಸ್ಯೆಗಳು ಮತ್ತು ಅಬಗ್ಯೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಯೆ ವಿವರವಾಗಿ ಚರ್ಚಿಸಿದರು. ಅರೋಗ್ಯ ವಿಮೆಯ ಪ್ರೀಮಿಯಂ ಮತ್ತು ಜಿ ಎಸ್ ಟಿ ಏರಿರುವುದರ ಬಗ್ಯೆ ಪ್ರಸ್ತಾಪಿಸಿ ಇದರಿಂದ ನಿವೃತ್ತರಿಗೆ ಆಗಿರುವ ನಷ್ಟ ಹಾಗೂ ಕಳವಳವನ್ನು ಪರಿಹರಿಸುವ ಬಗ್ಯೆ ಸಂಬಂದಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸ್ಪಷ್ಟ ಪಡಿಸಿದರು.
Leave a Comment