ಭದ್ರಾವತಿ ಶಾಸಕ ಸಂಗಮೇಶಗೆ ಕೊರಾನ ಪಾಸಿಟಿವ್. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು
ಭದ್ರಾವತಿ: ಶಾಸಕ ಬಿ.ಕೆ. ಸಂಗಮೇಶ್ವರ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ
ದಾಖಲಿಸಲಾಗುತ್ತಿದೆ.
ಈ ಕುರಿತಂತೆ ಮಾತನಾಡಿದ ಸಂಗೇಶ್ವರ್ ಅವರ ಪುತ್ರ ಗಣೇಶ್, ತಂದೆಯವರಿಗೆ ಎಲ್ಲ ಆರೋಗ್ಯ ಪರೀಕ್ಷೆಯಲ್ಲಿ ನಾರ್ಮ್‌ಲ್ ರಿಪೋರ್ಟ್ ಬಂದಿದೆ. ಆದರೆ, ಕೊರೋನಾ ಪಾಸಿಟಿವ್ ಬಂದಿದ್ದರೂ, ಅವರಿಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲ ಎಂದರು.
ಈ ವೇಳೆ ಸಿದ್ದರಾಮಯ್ಯನವರು ಕರೆ ಮಾಡಿ ವಿಚಾರಿಸಿದ್ದು, ತತಕ್ಷಣವೇ ಬೆಂಗಳೂರಿಗೆ ಕರೆತಂದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ, ಆಸ್ಪತ್ರೆಯ ವೈದ್ಯರೊಂದಿಗೂ ಸಹ ಈಗಾಗಲೇ ಚರ್ಚಿಸಲಾಗಿದ್ದು, ರಾತ್ರಿಯೇ ಬೆಂಗಳೂರಿಗೆ ತೆರಳಿ ದಾಖಲಿಸಲಾಗುವುದು ಎಂದರು.
ತಂದೆಯವರಿಗೆ ಕೊರೋನಾ ಪಾಸಿಟಿವ್ ಇದ್ದರೂ ಸಹ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಮಾತ್ರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಅಷ್ಟೆ.. ಕ್ಷೇತ್ರದ ಜನರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಯಾವುದೇ ರೀತಿಯಲ್ಲೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ವಿನಂತಿ ಮಾಡಿಕೊಂಡರು.
Leave a Comment