"ಮತ್ತೆ ಬಾರದ ಲೋಕಕ್ಕೆ ಬಳೆಗಾರ್" :ಅಪಾರ ಜನಸ್ತೋಮ ಹಾಗೂ ಅಭಿಮಾನಿಗಳ ನಡುವೆ ಅಂತ್ಯ ಸಂಸ್ಕಾರ
ಶಿಕಾರಿಪುರ: ಜನಪರ ಕಾಳಜಿಯ ವ್ಯಕ್ತಿತ್ವ ಹಾಗೂ ಸ್ನೇಹಜೀವಿ ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರು ಹಾಗೂ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಹೆಚ್. ಟಿ. ಬಳೆಗಾರ್ ನಿಧನರಾದ ಹಿನ್ನೆಲೆಯಲ್ಲಿ ತಾಲೂಕಿನ ಮತ್ತಿ ಕೋಟೆಯ ಅವರ ತೋಟದ ಮನೆಯಲ್ಲಿ ಶುಕ್ರವಾರ ಸಂಜೆ ಅಪಾರ ಜನಸ್ತೋಮ ಹಾಗೂ ಅಭಿಮಾನಿಗಳ ನಡುವೆ ಅಂತ್ಯ ಸಂಸ್ಕಾರ ಮಾಡಲಾಯಿತು.
ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಬಿಜೆಪಿ ಹಿರಿಯ ಮುಖಂಡರಾದ ಗುರುಮೂರ್ತಿ, ಜಿಲ್ಲಾಧ್ಯಕ್ಷರಾದ ಮೇಘರಾಜ್, ತಾಲೂಕು ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ನಾಗರಾಜ್ ಗೌಡ್ರು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಂ, ಬಿಜೆಪಿ ಮುಖಂಡ ಮಹೇಶ್ ಹುಲ್ಮಾರ್, ಕಾಂಗ್ರೆಸ್ ಹಿರಿಯ ಮುಖಂಡರಾದ ಗೋಣಿ ಮಾಲ್ತೇಶ್, ನಗರದ ಮಹದೇವಪ್ಪ, ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಹಾಗೂ ಅಭಿಮಾನಿಗಳು ಸಹಸ್ರ ಸಂಖ್ಯೆಯಲ್ಲಿ ಬಂದು ಅವರ ಪಾರ್ಥಿವ ಶರೀರ ದರ್ಶನ ಪಡೆದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಈ ಸಂದರ್ಭ ಮಾತನಾಡಿ ಬಳೆಗಾರರವರಿಗೆ ತಾಲೂಕಿನ ಪರ ಇದ್ದಂತ ಕಾಳಜಿ ಅಭೂತಪೂರ್ವಾದದ್ದು, ಅವರ ನೇರ ನುಡಿ, ಶ್ರೇಷ್ಠ ನಡಿವಳಿಕೆಯಿಂದ ನಮ್ಮ ಮನಸ್ಸನ್ನು ಗೆದ್ದಿದ್ದರು. ಇಂದು ನಾನು ವಿಧಾನಸಭೆ ಪ್ರವೇಶಿಸಲು ಪ್ರಮುಖ ಕಾರಣರು ಹೆಚ್. ಟಿ ಬಳಗಾರರು ಕೂಡ. ಅವರ ಆದರ್ಶ ಅವರ ಸ್ನೇಹ ವಿಶ್ವಾಸ ನಡುವಳಿಕೆಗಳು ನಮಗೆ ಮಾರ್ಗದರ್ಶನವಾಗಿವೆ ಎಂದರು.
ಸಂಸದ ಬಿ. ವೈ ರಾಘವೇಂದ್ರ.
ಮಾತನಾಡುತ್ತಾ ಸದಾ ನಗು ನಗು ಮಗುದೊಂದಿಗೆ ಸ್ವಾಗತ ಸುತ್ತಿದ್ದ ಜನ ಸೇವೆಯಲ್ಲಿ ನಿರಂತರ ರಾಗಿದ್ದ ಬಳೆಗಾರ ಅವರಲ್ಲಿ ಅಭಿವೃದ್ಧಿಯ ತುಡಿತ ಇತ್ತು ವಿತಭಾಷಿ ಯಾದರೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೆ ಮಾದರಿ ತಾಲೂಕು ಮಾಡಲು ಅವರ ಬಯಕೆ ಇತ್ತು ಎಂದರು.
ಕುಮಾರ್ ಬಂಗಾರಪ್ಪ ಮಾಜಿ ಸಚಿವರು.
ಮಾತನಾಡುತ್ತಾ ಬಳಗಾರರು ನಮ್ಮ ತಂದೆ ಬಂಗಾರಪ್ಪನ ಅವರ ಗರಡಿಯಲ್ಲಿ ಬೆಳೆದವರು. ಬಳೆಗಾರ್ ನಮಗೆಲ್ಲ ಒಂದು ರೀತಿಯಲ್ಲಿ ಮಾರ್ಗದರ್ಶಿಯಾಗಿದ್ದರು. ಯಾವುದೇ ಪಕ್ಷದಲ್ಲೇ ಅವರಿದ್ದರೂ ಅವರ ನಡೆ ನುಡಿಗಳಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಇಂತಹ ಅಪರೂಪದ ರಾಜಕಾರಣಿಗಳು ಸಿಗುವುದೇ ಕಷ್ಟ ಭಗವಂತ ಅವರ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದರು.
ಪ್ರಸನ್ನಾನಂದ ಪುರಿ ಸ್ವಾಮೀಜಿ ರಾಜನಹಳ್ಳಿ ವಾಲ್ಮೀಕಿ ಪೀಠ ಮಾತನಾಡುತ್ತಾ
ಬಳೆಗಾರರವರು ಯಾವುದೇ ಸಮುದಾಯಕ್ಕೆ ಸೇರಿದವರು ಎಂದು ಯಾರಿಗೂ ಅನಿಸಲಿಲ್ಲ. ಆ ರೀತಿ ಜಾತ್ಯಾತೀತವಾಗಿ ಬೆಳೆದವರು. ಒಬ್ಬ ಶುದ್ಧ ಮನಸ್ಸಿನ ಶುದ್ಧ ಪ್ರಾಮಾಣಿಕ ವ್ಯಕ್ತಿ ಎಂದರು.
ಹೆಚ್. ಎಸ್ ಗುರುಮೂರ್ತಿ ಬಿಜೆಪಿ ಹಿರಿಯ ಮುಖಂಡರು ಮಾತನಾಡುತ್ತಾ ಉತ್ತಮ ಸ್ನೇಹಕ್ಕೆ ಮತ್ತೊಂದು ಹೆಸರು ಬೆಳೆಗಾರರವರು ಅವರು ರಾಷ್ಟ್ರೀಯವಾದಿಯಾಗಿದ್ದರು. ಕೆಲ ದಿನಗಳಾದರೂ ಅವರ ಸ್ನೇಹ ಮಾಡಿದ್ದು ನಮ್ಮ ಭಾಗ್ಯ ಎಂದರು.
Leave a Comment