ಇನ್ನು ಮುಂದೆ ರೈತರ ಬೆಳೆ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ:ಉಪವಲಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್

ಆನಂದಪುರ:ನುರಿತ ಮಾವತರನ್ನು ಆದಷ್ಟು ಬೇಗನೆ ಕರೆಸಿ ಇಲ್ಲಿಂದ ಆನೆಯನ್ನು ಓಡಿಸುವ ಕೆಲಸ ಮಾಡುತ್ತೇವೆ ಎಂದು ಉಪವಲಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದರು.
ಇವರು ಸಮೀಪದ  ಗೌತಮಪುರದಲ್ಲಿ ಆನೆ ಹಾನಿ ಮಾಡಿದ ಮಂಜಪ್ಪನವರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಈ ಭಾಗದಲ್ಲಿ ಆನೆಗಳು ರೈತರ ಜಮೀನನ್ನು ಬಹಳಷ್ಟು ಹಾಳು ಮಾಡಿದೆ. ಇನ್ನು ಮುಂದೆ ನಾನೇ ಸ್ವತಃ ಖುದ್ದಾಗಿ ನಿಂತು ಸೂಕ್ತ ಕ್ರಮ ವಹಿಸಿ ಮತ್ತು ಪ್ರಾಮಾಣಿಕವಾಗಿ ರೈತರಿಗೆ ಪರಿಹಾರವನ್ನು ದೊರಕಿಸಿ ಕೊಡುವಂತೆ ಮಾಡುತ್ತೇನೆ ಎಂದರು. 

ಹಾಗೆ ಇವತ್ತಿನಿಂದಲೇ ನಾವು ಕಾರ್ಯ ಪ್ರವೃತ್ತರಾಗುತ್ತೇವೆ.ಸಕ್ಕರೆಬೈಲಿ ನಿಂದ ಮೂರು ಜನ ಮಾವತರು ಈಗಾಗಲೆ ಬರುತ್ತಿದಾದರೆ ಇವರ ಸಹಾಯದಿಂದ ಆನೆಗಳನ್ನು ಪುನಃ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಓಡಿಸುವ ಕೆಲಸವನ್ನು ಆದಷ್ಟು ಬೇಗನೆ ಮಾಡುತ್ತೇವೆ. ಹಾಗೂ ಇನ್ನು ಮುಂದೆ ಯಾವುದೇ ರೀತಿಯಲ್ಲಿ ರೈತರ  ಬೆಳೆ ಹಾನಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು. 

ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿಯಾದ ಶ್ರೀನಿವಾಸ್, ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲಸೆ ಚಂದ್ರಪ್ಪ ಮತ್ತು ಪಕ್ಷದ ಮುಖಂಡರಾದ ಸೋಮಶೇಖರ್ ಲಾವಿಗೆರೆ, ಚೇತನ್ ರಾಜ್ ಕಣ್ಣೂರ್,ಗಜೇಂದ್ರ ,ಎಂ.ಎಲ್ ಈಶ್ವರ, ಮೋಹನ್ ಮತ್ತು ಅರಣ್ಯ ಸಿಬ್ಬಂದಿ ವರ್ಗದವರು ಹಾಗೂ ರೈತರು ಮತ್ತು ಇತರರು ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.