ವ್ಯಕ್ತಿತ್ವದ ಬಲವರ್ಧನೆಗೆ ರಾಷ್ಟ್ರೀಯ ಸೇವಾ ಯೋಜನೆ ಕಾರಣ :ಸುರೇಶ್ ಜಂಬಾನಿ

ಸಾಗರ :ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ರೂಡಿಸಿಕೊಳ್ಳಿ ಎಂದು ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಒಂದರ ಕಾರ್ಯಕ್ರಮಾಧಿಕಾರಿಗಳಾದ ಸುರೇಶ್ ಜಂಬಾನಿ ತಿಳಿಸಿದರು. 
ಅವರು ಸಮೀಪದ ಹುಲ್ಲತ್ತಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದಂತಹ ಒಂದು ದಿನದ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಕಾಲೇಜು ಹಂತದಲ್ಲಿ ಇಂತಹ ಸೇವಾ ಕಾರ್ಯಗಳು ಮಾಡುವುದರಿಂದ ಜೀವನದಲ್ಲಿ ಮರೆಯಲಾಗದ ನೆನಪುಗಳು ಉಳಿಯುತ್ತದೆ. ಹಾಗೂ ಇದರಿಂದ ನಮ್ಮ ಹಾವ, ಭಾವಗಳು ಮತ್ತು ವ್ಯಕ್ತಿತ್ವ ಬಲವರ್ಧನೆಗೊಂಡು  ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ಈ ರಾಷ್ಟ್ರೀಯ ಸೇವಾ ಯೋಜನೆ ಕಾರಣವಾಗುತ್ತದೆ ಎಂದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಹುಲ್ಲತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಚೆನ್ನಪ್ಪ ರವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಯಾವುದೇ ಫಲಾನು ಪೇಕ್ಷೆ ಇಲ್ಲದೆ ಸೇವೆಯನ್ನು  ಮಾಡುತ್ತೀರಿ ನಿಮ್ಮ ಸೇವೆಗೆ ಒಂದಲ್ಲ ಒಂದು ದಿನ ಫಲ ದೊರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಘಟಕ ಎರಡರ ಕಾರ್ಯಕ್ರಮಾಧಿಕಾರಿಗಳಾದ ಡಾ. ಮಮತಾ ಹೆಗಡೆ, ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕರಾದ ಕೊಟ್ರೇಶ್, ಹುಲ್ಲತ್ತಿ ಶಾಲೆ ಶಿಕ್ಷಕರಾದ ಜ್ಯೋತಿ, ನಿವೃತ್ತ ಶಿಕ್ಷಕರಾದ ಗಣಪತಿಯಪ್ಪ ಹಾಗೂ ಎಸ್. ಟಿ .ಎಂ. ಸಿ .ಅಧ್ಯಕ್ಷರಾದ ಜಯಂತ್,ಹಾಗೂ ಸದಸ್ಯರಾದ ಮಹಾಬಲೇಶ್ ಮತ್ತು  ಇತರರು ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.