ರೈತರ ಹಾಗೂ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ:ಡಾ|| ಆರ್. ಎಂ. ಮಂಜುನಾಥ ಗೌಡ

ಬ್ಯಾಂಕ್ ನ 2024 ಸಾಲಿನ ನೂತನ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಹಕರ
ಅನುಕೂಲಕ್ಕಾಗಿ ನೂತನ ಶಾಖೆಗಳನ್ನು
ತೆರೆಯುವ ಯೋಜನೆಯನ್ನು ಹೊಂದಲಾಗಿದೆ.ಸುಸ್ತಿ ಸಾಲಗಳನ್ನು ಪರಸ್ಪರ ಒಪ್ಪಂದದ (ಓ.ಟಿ.ಎಸ್)ಮೂಲಕ ಮುಕ್ತಾಯ ಮಾಡಿಕೊಳ್ಳಲು ಸುವರ್ಣಾವಕಾಶವಿದ್ದು, ಮಾರ್ಚ್-2024 ರವರೆಗೆ ಈ ಅವಕಾಶವಿರುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷರಾದ
ಡಾ|| ಆರ್. ಎಂ. ಮಂಜುನಾಥ ಗೌಡ ಹೇಳಿದರು.
ಇಂದು ಬೆಳಿಗ್ಗೆ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕ್ ನ 2024 ಸಾಲಿನ ನೂತನ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಮಾಡಿ ಎಲ್ಲರಿಗೂ “2024 ರ ಹೊಸ ವರ್ಷ” ಹಾಗೂ “ಸಂಕ್ರಾತಿ ಹಬ್ಬದ” ಶುಭಾಶಯಗಳನ್ನು ಹೇಳಿದ ನಂತರ  ಪತ್ರಿಕಾ ಗೋಷ್ಠಿಯಲ್ಲಿ  ಮಾತನಾಡಿದರು. - 2022-23 ನೇ ಸಾಲಿನಲ್ಲಿ ಒಟ್ಟು ರೂ.17.26 ಲಾಭ, ರೂ.12.69 ಕೋಟಿ ನಿವ್ವಳ ಲಾಭಗಳಿಸಿ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು 'ರಾಜ್ಯದಲ್ಲಿ ದ್ವಿತೀಯ ಸ್ಥಾನ' ಹಾಗೂ ಬೆಂಗಳೂರು ವಿಭಾಗದಲ್ಲಿ 'ಮೊದಲನೇ ಸ್ಥಾನ'ದಲ್ಲಿರುತ್ತದೆ ಎಂದರು.

 ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ, ವತಿಯಿಂದ ಡಿಸೆಂಬರ್-2023 ರ ಮಾಹೆಯನ್ನು ಠೇವಣಿ ಮಾಸಾಚರಣೆ' ಯನ್ನಾಗಿ ಆಚರಿಸುತ್ತಿದ್ದು, ರೂ.100.00 ಕೋಟಿ ಠೇವಣಿಯನ್ನು ಸಂಗ್ರಹಣೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
 2022-23 ನೇ ಸಾಲಿನ ಅಂತ್ಯಕ್ಕೆ ರೂ.1293.10 ಕೋಟಿ ಠೇವಣಿ ಸಂಗ್ರಹಣೆಯಾಗಿದ್ದು, ಠೇವಣಿ ಸಂಗ್ರಹಣೆಯಲ್ಲಿಯೂ ಬೆಂಗಳೂರು ವಿಭಾಗದಲ್ಲಿ ಮೊದಲನೇ ಸ್ಥಾನದಲ್ಲಿರುತ್ತದೆ. ಷೇರು ಬಂಡವಾಳ ರೂ.132.42 ಕೋಟಿ ಹಾಗೂ ನಿಧಿಗಳು ರೂ.60.10 ಕೋಟಿಗಳಿರುತ್ತದೆ ಎಂದರು.
* ಶೂನ್ಯ ಬಡ್ಡಿ ದರದಲ್ಲಿ ವಿತರಿಸಿದ ಅಲ್ಪಾವಧಿ ಕೃಷಿ ಬೆಳೆ ಸಾಲ ಒಟ್ಟು 103250 ರೈತರಿಂದ ರೂ.964,55 ಕೋಟಿಗಳ ಹೊರಬಾಕಿ ಇರುತ್ತದೆ. ಈ ಪೈಕಿ 3246 ಹೊಸ ರೈತರಿಗೆ ರೂ.38.65 ಕೋಟಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ 5477 ರೈತ ಸದಸ್ಯರಿಗೆ ರೂ. 56.26 ಕೋಟಿ ಮತ್ತು ಹೆಚ್ಚುವರಿ ಸಾಲ 8897 ರೈತರಿಗೆ ರೂ.44.47 ಕೋಟಿ ಸಾಲ ವಿತರಣೆ ಮಾಡಲಾಗಿದೆ.
2023-24 ನೇ ಸಾಲಿನಲ್ಲಿ 2100 ಸ್ವ-ಸಹಾಯ ಸಂಘಗಳಿಗೆ ರೂ.70.00 ಕೋಟಿ ಸಾಲ ವಿತರಿಸುವ ಗುರಿ ನಿಗದಿಪಡಿಸಿಕೊಳ್ಳಲಾಗಿದ್ದು, ಪ್ರಸಕ್ತ ದಿನಾಂಕದವರೆಗೆ ಒಟ್ಟು 1136 ಸ್ವ-ಸಹಾಯ ಸಂಘಗಳ ಗುಂಪುಗಳಿಗೆ ರೂ.48.32 ಕೋಟಿ ಸಾಲ ಹಂಚಿಕೆ ಮಾಡಿದ್ದು, ಸಾಲ ವಸೂಲಾತಿ ಶೇ.96.00 ಇರುತ್ತದೆ ಎಂದರು.

 ಶೂನ್ಯ ಬಡ್ಡಿ ದರದಲ್ಲಿ ಪಶು ಸಂಗೋಪನೆ ಉದ್ದೇಶಕ್ಕಾಗಿ ಒಟ್ಟು 2607 ಸದಸ್ಯರಿಗೆ ರೂ.5.46 ಕೋಟಿ ಕೆ.ಸಿ.ಸಿ ಹೈನುಗಾರಿಕೆ ಸಾಲವನ್ನು ನೀಡಲಾಗಿರುತ್ತದೆ.
ವಸೂಲಾತಿಯಲ್ಲಿಯೂ ಬ್ಯಾಂಕು ಉತ್ತಮ ಪ್ರಗತಿ ಸಾಧಿಸಿದ್ದು, ಕೆ.ಸಿ.ಸಿ. ಬೆಳೆ ಸಾಲದ ವಸೂಲಾತಿ ಶೇ 99.32 ರಷ್ಟು ಮತ್ತು ಕೃಷಿಯೇತರ ಸಾಲದಲ್ಲಿ ಶೇ.82.08 ಗಳಷ್ಟು ಪ್ರಗತಿ ಸಾಧಿಸಿ, ಎನ್.ಪಿ.ಎ ಪ್ರಮಾಣ ಶೇ ಶೇ.5.73 ಕ್ಕೆ ಇಳಿಕೆಯಾಗಿರುತ್ತದೆ ಎಂದರು.

 ರಾಜ್ಯ ಸರ್ಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ 2022-23 ನೇ ಸಾಲಿನಲ್ಲಿ ಒಟ್ಟು 1.86 ಲಕ್ಷ ಸದಸ್ಯರನ್ನು ನೊಂದಾಯಿಸಲಾಗಿದ್ದು, 2023-24 ನೇ ಸಾಲಿನ ನೋಂದಣೆ ದಿನಾಂಕ.01.12.2023 ರಿಂದ ಪ್ರಾರಂಭವಾಗಿದ್ದು, ದಿನಾಂಕ.31.01.2024 ರವರೆಗೆ ಮುಂದುವರೆಯಲಿದೆ. ಕಳೆದ ಸಾಲಿನಂತೆ ಗ್ರಾಮೀಣ/ನಗರ ಸಹಕಾರ ಸಂಘಗಳ ಸದಸ್ಯರಿಗೆ ಗರಿಷ್ಟ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.500/- ಮತ್ತು ರೂ.1000/- ಅನುಕ್ರಮವಾಗಿ ವಂತಿಕೆಯನ್ನು ನಿಗದಿಪಡಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಭತ್ತ, ಮೆಕ್ಕೆಜೋಳ, ಅಡಿಕೆ ಮತ್ತು ಮಾವು ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 15397 ರೈತರು ರೂ.5.50 ಕೋಟಿ ವಿಮಾ ಕಂತನ್ನು ನಮ್ಮ ಬ್ಯಾಂಕಿನ ಮೂಲಕ ಪಾವತಿಸಿ ನೊಂದಣಿ ಮಾಡಿಸಿರುತ್ತಾರೆ ಎಂದರು.
2022 ನೇ ಸಾಲಿನಲ್ಲಿ 11961 ರೈತರು ರೂ.3.40 ಕೋಟಿ ವಿಮೆ ಪಾವತಿಸಿದ್ದು, ರೂ.24.00 ಕೋಟಿ ಬೆಳೆ ವಿಮಾ ಪರಿಹಾರ 2023 ರಲ್ಲಿ ಸಂಬಂಧಪಟ್ಟ 10489 ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿರುತ್ತದೆ ಎಂದರು.

 ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಸೇವಾ ಕೇಂದ್ರಗಳನ್ನಾಗಿಯೂ ಮಾರ್ಪಡಿಸುವ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯು ಈಗಾಗಲೇ ಜಾರಿಯಲ್ಲಿದ್ದು, ಇದುವರೆಗೆ 38 ಪ್ರಸ್ತಾವನೆಗಳನ್ನು ಅಪೆಕ್ಸ್ ಬ್ಯಾಂಕ್ ಮೂಲಕ ನಬಾರ್ಡ್‌ಗೆ ಸಲ್ಲಿಸಲಾಗಿದೆ ಎಂದರು.

 29 ಸಂಘಗಳಿಂದ ರೂ. 14.24 ಕೋಟಿ ಮಂಜೂರಾಗಿರುತ್ತದೆ. ಸದರಿ ಮಂಜೂರಾತಿಯಲ್ಲಿ ಒಟ್ಟು 20 ಸಂಘಗಳಿಗೆ ಬ್ಯಾಂಕಿನಿಂದ ಸಾಲ ಬಿಡುಗಡೆಗೊಳಿಸಲಾಗಿರುತ್ತದೆ.
ಬ್ಯಾಂಕಿನಿಂದ ಗ್ರಾಹಕರಿಗೆ ಆರ್.ಟಿ.ಜಿ.ಎಸ್/ನೆಫ್ಟ್, ರೂಪೇ ಕಿಸಾನ್, ರೂಪೇ ಡೆಬಿಟ್ ಕಾರ್ಡ್ ಸೌಲಭ್ಯ, ಎ.ಟಿ.ಎಂ, ಎಸ್.ಎಂ.ಎಸ್ ಅಲರ್ಟ್, ಇಂಟರ್‌ ಬ್ರಾಂಚ್ ಟ್ರಾನ್ಸ್‌ಕ್ಷನ್, ಆಧಾ‌ ಪೇಮೆಂಟ್ ಬ್ರಿಡ್ಜ್ ಸಿಸ್ಟಂ (ಎಪಿಬಿಎಸ್), ಪಿಎಫ್‌ಎಂಎಸ್, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ಮುಂತಾದ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

• ಬ್ಯಾಂಕ್ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು ಈ ಅಪ್ ಮೂಲಕ ಬ್ಯಾಂಕಿನ ಗ್ರಾಹಕರು ಖಾತೆಗಳ ಬ್ಯಾಲೆನ್ಸ್, ಮಿನಿ ಪಾಸ್ ಬುಕ್, ಬ್ಯಾಂಕಿನ ಸಾಮಾನ್ಯ ಮಾಹಿತಿಗಳು, ಪಾಸಿಟೀವ್ ಪೇ ಸಿಸ್ಟಂ ನಡಿಯಲ್ಲಿ ಗ್ರಾಹಕರು ನೀಡಿದ ಚೆಕ್ ವಿವರಗಳನ್ನು ಪಡೆಯಬಹುದಾಗಿದೆ ಎಂದರು.

* ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಏಕರೂಪ ತಂತ್ರಾಶದ ಯೋಜನೆಯಡಿಯಲ್ಲಿ ಗಣಕೀಕರಣ ಮಾಡುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಕೇಂದ್ರ ಸರ್ಕಾರದ “ಸಹಕಾರ್ ಸೇ ಸಮೃದ್ಧಿ” ಯೋಜನೆಯಡಿ ಸಹಕಾರಿ ಚಳುವಳಿಗಳನ್ನು ಬಲಪಡಿಸಲು, ಕೆಳಹಂತದ ಎಲ್ಲಾ ವರ್ಗದ ಜನರಿಗೆ ಸಹಕಾರಿ ತತ್ವ/ಮಹತ್ವ/ಚಾಲನೆಯನ್ನು ಸಹಕಾರಿಯಾಗುವಂತೆ, ವಿವಿಧೋದ್ದೇಶ ಯೋಜನೆಗಳನ್ನು ಸಂಘಗಳ ಮೂಲಕ ಜಾರಿಗೊಳಿಸಲಾಗಿರುತ್ತದೆ. ಸದರಿ ಯೋಜನೆಯಡಿಯಲ್ಲಿ ಸಾಮಾನ್ಯ ಸೇವಾ ಕೇಂದ್ರ (Common service centre) ಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ನೊಂದಣಿ ಮಾಡಿಕೊಂಡು ಜನೌಷಧ ಕೇಂದ್ರ, ಪೆಟ್ರೋಲ್ ಬಂಕ್, ಗ್ಯಾಸ್‌ ಬಂಕ್, ಗ್ರಾಹಕರ ಸೇವಾ ಕೇಂದ್ರಗಳು ಮತ್ತು ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಲಾಗಿದೆ ಎಂದರು.

ರಾಜ್ಯ ಸರ್ಕಾರದ ಆದೇಶದಂತೆ 2023-24 ನೇ ಸಾಲಿಗೆ ಶೂನ್ಯ ಬಡ್ಡಿ ದರದಲ್ಲಿ ರೂ.5.00 ಲಕ್ಷಗಳವರೆಗೆ ಕೃಷಿ ಸಾಲ ಮತ್ತು ರೂ.2.00 ಲಕ್ಷಗಳವರೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ದುಡಿಯುವ ಬಂಡವಾಳ ಸಾಲ ವಿತರಣೆ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರದ ಆದೇಶದಂತೆ 2023-24 ನೇ ಸಾಲಿಗೆ ಶೇ.3 ರ ಬಡ್ಡಿ ದರದಲ್ಲಿ ರೂ.15.00 ಲಕ್ಷಗಳವರೆಗೆ ಮಧ್ಯಮಾವಧಿ ಸಾಲ ವಿತರಣೆ ಮಾಡಲಾಗುವುದು.
ರಾಜ್ಯ ಸರ್ಕಾರದ ಆದೇಶದಂತೆ 2023-24 ನೇ ಸಾಲಿಗೆ ಗುಡ್ಡಗಾಡು ಪ್ರದೇಶದಲ್ಲಿನ ರೈತರಿಗೆ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗೆ ನಾಲ್ಕು ಚಕ್ರದ ಪಿಕ್‌ ಅಪ್ ವ್ಯಾನ್ ಖರೀದಿಸಲು ರೂ.7.00 ಲಕ್ಷಗಳವರೆಗೆ ಸಾಲವನ್ನು ಶೇ.4 ರ ಬಡ್ಡಿ ದರದಲ್ಲಿ ವಿತರಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ಆದೇಶದಂತೆ 2023-24 ನೇ ಸಾಲಿಗೆ ರೈತರು ತಮ್ಮ ಹಾಗೂ ತಮ್ಮ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಅನುವಾಗುವಂತೆ ಗೋದಾಮು ನಿರ್ಮಿಸಲು ಸಹಕಾರ ಸಂಘಗಳ ಮುಖಾಂತರ ನೀಡುವ ರೂ.20.00 ಲಕ್ಷಗಳವರೆಗಿನ ಸಾಲಕ್ಕೆ ಶೇ.7 ರ * ಬಡ್ಡಿ ಸಹಾಯಧನ ಅನ್ವಯವಾಗುತ್ತದೆ ಎಂದರು.
ರೈತರ ಹಾಗೂ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಯೋಜನೆಯ ಮುಂದಿನ ಹಂತವಾಗಿ ಮೊಬೈಲ್‌ ವಾಹನದ ಸೌಲಭ್ಯವನ್ನು ಜಾರಿಗೆ ತರಲಾಗುವುದು.
ಬ್ಯಾಂಕಿನಿಂದ ಪೆಟ್ರೋಲ್ ಬಂಕ್, ಟ್ರಾನ್ಸ್‌ಪೋರ್ಟ್ ಕಂಪನಿ, ಹಾಸ್ಪಿಟಲ್ ಮುಂತಾದ ಉದ್ಯಮಗಳಿಗೆ ಸಾಲ ನೀಡುವ ಮೂಲಕ ಕೃಷಿಯೇತರ ಸಾಲ ನೀಡಿಕೆ ಹೆಚ್ಚಿಸಲು ಕ್ರಮಕೈಗಗೊಳ್ಳಲಾಗಿದೆ ಎಂದರು.
- 2023-24 ನೇ ಸಾಲಿನಲ್ಲಿ ರೂ.1350.00 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. 25F-2024 ರ ಅಂತ್ಯಕ್ಕೆ ರೂ.30.00 ಕೋಟಿ ನಿವ್ವಳ ಲಾಭಗಳಿಸುವ ಯೋಜನೆಯನ್ನು
ಹೊಂದಲಾಗಿದೆ ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಷಡಾಕ್ಷರಿ, ನಿರ್ದೆಶಕರಾದ ದುಗ್ಗಪ್ಪ ಗೌಡ, ಪರಮೇಶ್ ಎಂ.ಎಂ. ಸುದೀರ್ ಜಿ.ಎಂ., ಎಚ್.ಕೆ.ವೆಂಕಟೇಶ್, ದಶರಥಗೌಡ, ಸಹಕಾರ ಇಲಾಖೆ ಅಧಿಕಾರಿ ವಾಸುದೇವ್ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.