ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಶಿವಮೊಗ್ಗ ಘಟಕದಿಂದ ವಕೀಲರ ಸಂಘಕ್ಕೆ ಸಂಪೂರ್ಣ ಬೆಂಬಲ : ಡಿ.ಜಿ.ನಾಗರಾಜ್, ಜಿಲ್ಲಾಧ್ಯಕ್ಷರು

ಶಿವಮೊಗ್ಗ:ಮಲೆನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕೆಂಬ ಶಿವಮೊಗ್ಗದ ವಕೀಲರ ಸಂಘದ ನ್ಯಾಯಸಮ್ಮತ ಹೋರಾಟಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಶಿವಮೊಗ್ಗ ಘಟಕದಿಂದ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ ಎಂದು  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಶಿವಮೊಗ್ಗ ಜಿಲ್ಲಾಧ್ಯಕ್ಷರು ಆದ  ಡಿ.ಜಿ.ನಾಗರಾಜ್ ಹೇಳಿದರು.
ಇಂದು ಗುರುವಾರ ಬೆಳಿಗ್ಗೆ ನಗರದ ವಕೀಲರ ಭವನದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಹಾಗೂ ಹೋರಾಟ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು  ಹೋರಾಟಕ್ಕೆ ಧ್ವನಿಗೂಡಿಸಿ ಬೆಂಬಲ ಪತ್ರವನ್ನು ವಕೀಲರ ಸಂಘದ ಅಧ್ಯಕ್ಷರಿಗೆ ನೀಡಿ ಬೆಂಬಲ ಸೂಚಿಸಿದರು.
ವಕೀಲರ ಹೋರಾಟಕ್ಕೆ ಸಾಥ್ ನೀಡಿದರು.
ದಿನಾಂಕ 30-5-2026 ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.    ಈ ಸಂದರ್ಭದಲ್ಲಿ ಶಿವಮೊಗ್ಗದ ವಕೀಲರ ಸಂಘದ ಅಧ್ಯಕ್ಷರು ರಾಘವೇಂದ್ರ ರವರು ಮಾತನಾಡಿದರು ಶಿವಮೊಗ್ಗದಲ್ಲಿ ಸಂಚಾರಿ ಪೀಠಕ್ಕಾಗಿ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. 
"ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗುವುದು ಇಂದಿನ ತುರ್ತು ಅಗತ್ಯವಾಗಿದೆ. ಇದರಿಂದ ಈ ಭಾಗದ ಜನರಿಗೆ ಮತ್ತು ವಕೀಲರಿಗೆ ಕಾಲಹರಣ ಹಾಗೂ ಆರ್ಥಿಕ ಹೊರೆ ತಪ್ಪಲಿದ್ದು, ಶೀಘ್ರ ನ್ಯಾಯ ಸಿಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
 ಸಂಘದ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ್ ಮಾತನಾಡುತ್ತಾ, "ನ್ಯಾಯದಾನ ಪ್ರಕ್ರಿಯೆ ಜನಸಾಮಾನ್ಯರ ಸನಿಹಕ್ಕೆ ಬರಬೇಕು. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ  ಸ್ಥಾಪನೆಯಾಗುವವರೆಗೂ ನಮ್ಮ ಬೆಂಬಲ ಮುಂದುವರಿಯುತ್ತದೆ ಎಂದು  ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ಸಂಘದ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ್, ಕಾರ್ಯದರ್ಶಿ ಶಿವರಾಜ್ ಬಿ.ಸಿ, ಖಜಾಂಚಿ ಗಿರೀಶ್ ಬಿ.ಸಿ, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ,ನಿರ್ದೇಶಕ ರಾದ ಕಮಾಲಕ್ಷಪ್ಪ, ವಿಷ್ಣು ಪ್ರಸಾದ್,ನಂದನ್ ಕುಮಾರ್ ಸಿಂಗ್, ಕಾನೂನು ಸಲಹೆಗಾರರು ಮತ್ತು ವಕೀಲರಾದ ಷಡಾಕ್ಷರಪ್ಪ , ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.