ಶ್ರೀ ಶಂಕರ ಜಯಂತಿ ಸಭಾ ವತಿಯಿಂದ ಚಿನ್ನದ ಕಿರೀಟ ಸಮರ್ಪಣೆ

ಶಿವಮೊಗ್ಗ : ಶ್ರೀ ಶಂಕರ ಜಯಂತಿ ಸಭಾ ವತಿಯಿಂದ ದೊಡ್ಡ ಬ್ರಾಹ್ಮಣರ ಬೀದಿಯ ಶ್ರೀ ಲಕ್ಷ್ಮೀನಾರಾಯಣ ದೇವಾಲಯಕ್ಕೆ ದೇವರಿಗೆ 60 ಲಕ್ಷ ರೂ. ಮೌಲ್ಯದ ಚಿನ್ನದ ಕಿರ ಸಮರ್ಪಿಸಲಾಗಿದೆ.

ಕಳೆದ 122 ವರ್ಷಗಳಿಂದ ಶ್ರೀ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಶ್ರೀ ಶಂಕರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಭಕ್ತರ ಅಪೇಕ್ಷೆಯಂ ಲಕ್ಷ್ಮೀನಾರಾಯಣ ದೇವರಿಗೆ 60 ಲಕ್ಷ್ಮಿ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಮುಜರಾಯಿ ಅಧಿಕಾರಿ ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಲಾಯಿತು. 

ಈ ಸಂದರ್ಭದಲ್ಲಿ ಮಾ ಕುಮಾರ್, ಶ್ರೀ ಶಂಕರ ಜಯಂತಿ ಸಭಾ ಅಧ್ಯಕ್ಷ ಬಿ ಎನ್. ಕೃಷ್ಣ ಮೂರ್ತಿ, ಪ್ರಧಾನ ಕಾರ್ಯದರ್ಶಿ ಎ. ಅನಂತಸ್ವಾಮಿ, ಎಂ ಶಂಕರ್, ಎನ್ ಎಂ.ರಘುರಾಮ್. ಸ್ವಾಮಿನಾಥ, ಸುಮತಿ ಚಿದಂಬರ, ಶ್ರೀಪಾದ ಭಟ್ರು, ಅರ್ಚಕ ವಿನಾಯಕ ಭಟ್ರು ಉಪಸ್ತಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.