"ಶಿಕಾರಿಪುರದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 538 ನೇ ಜಯಂತಿ ಆಚರಣೆ"

ಶಿಕಾರಿಪುರದ ಕನಕ ಮಂಟಪ (ಕನಕ ಪಾರ್ಕ್) ನಲ್ಲಿ ತಾಲೂಕು ಆಡಳಿತ. ತಾಲೂಕು ಪಂಚಾಯತ್. ಪುರಸಭೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವಿವಿಧ ಇಲಾಖೆಗಳು. ವಿವಿಧ ಸಂಘ ಸಂಸ್ಥೆಗಳು. ಶಿಕಾರಿಪುರ ತಾಲೂಕು ಕುರುಬ ಸಮಾಜ ಇವರುಗಳ  ಸಂಯುಕ್ತ ಆಶ್ರಯದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. 
ಈ ಒಂದು ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಶಿವಮೊಗ್ಗ ಜಿಲ್ಲೆ ಸಂಸದರಾದಂತಹ ಶ್ರೀ ಬಿ ವೈ ರಾಘವೇಂದ್ರರವರು ಉಪಸ್ಥಿತಿ ವಹಿಸಿದ್ದರು. ಕನಕದಾಸರ ಕೀರ್ತನೆಗಳು ಹಾಗೂ ಜೀವನ ಚರಿತ್ರೆಯ ಬಗ್ಗೆ ಹಾಗೂ ಅವರ ಸಾಧನೆಗಳ ಬಗ್ಗೆ ಸವಿಸ್ತಾರವಾಗಿ ಕಾರ್ಯಕ್ರಮದಲ್ಲಿ ಮಾತನಾಡಿ ಕನಕದಾಸರ ವೈಚಾರಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
 ಇದೇ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕರು ಹಾಗೂ ಸಮಾಜ ಚಿಂತಕರು ಆಗಿರುವ ಶ್ರೀ ಸುರೇಶ್ ಎನ್ ರವರು ಮಾತನಾಡಿ ಕನಕದಾಸರು ಜೀವನದ ಸಾಗಿ ಬಂದ ದಾರಿ ಸಾಧನೆ ಹಾಗೂ ಇತಿಹಾಸದ ಸಂಪೂರ್ಣ ಚಿತ್ರಣವನ್ನು ವಿವರಿಸಿದ್ದರು. 
ಕನಕ ಟ್ರಸ್ಟ್ ಶಿಕಾರಿಪುರ ಇವರಿಂದ ಕಾರ್ಯಕ್ರಮಕ್ಕೆ ಬಂದಂತಹ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
 ಈ ಒಂದು ಕಾರ್ಯಕ್ರಮದಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀ ನಗರದ ಮಹಾದೇವಪ್ಪನವರು. ಕುರುಬ ಸಮಾಜದ ತಾಲೂಕು ಅಧ್ಯಕ್ಷರಾದ ಶ್ರೀ ಕಬ್ಬಡಿ ರಾಜಣ್ಣ. ಮತ್ತು ಕೆ ಪಿ ಸಿ ಸಿ ಸದಸ್ಯರಾದ ಶ್ರೀ ಗೋಣಿ ಮಾಲತೇಶ್. ರವರು ಹಾಗೂ ಪುರಸಭೆ ಅಧ್ಯಕ್ಷರಾದ ಸುನಂದ ಮಂಜುನಾಥ್  ತಾಲೂಕು ತಹಶೀಲ್ದಾರಾದ ಮಂಜುಳಾ ಶಂಕರ್ ಭಜಂತ್ರಿ ರವರು ಹಾಗೂ ಇನ್ನು  ಮುಖಂಡರುಗಳು ಗಣ್ಯರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.