ಕಾ.ನಿ.ಪ.ಧ್ವನಿಯಿಂದ ಶಿವಮೊಗ್ಗ ಜಿಲ್ಲೆಯ 5 ತಾಲ್ಲೂಕು ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕ ಯಾರು ಅಂತೀರಾ ನೋಡಿ..

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಬಲವರ್ಧನೆಗಾಗಿ ಶಿವಮೊಗ್ಗ ಜಿಲ್ಲೆಯ 5 ತಾಲ್ಲೂಕು ಘಟಕಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡಿ ನೇಮಕಾತಿಯ ಪತ್ರವನ್ನು ಇಂದು  ವಿತರಣೆ ಮಾಡಲಾಯಿತು.
ದಿನಾಂಕ:6-11-2025 ರಂದು ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಬೆಳಿಗ್ಗೆ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕಾರ್ಯಕ್ರಮ ದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರುಗಳಿಗೆ ನೇಮಕಾತಿಯ ಪತ್ರವನ್ನು ರಾಜ್ಯಾದ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಮತ್ತು ಡಿ.ಜಿ.ನಾಗರಾಜ್ ರವರು ವಿತರಣೆ ಮಾಡಿ, ಸಂಘದ ಬಲವರ್ಧನೆ ಗೆ ಶ್ರಮಿಸುವಂತೇ ಹೇಳಿ ಶುಭಹಾರೈಸಿದರು.
ತೀರ್ಥಹಳ್ಳಿ ತಾಲ್ಲೂಕಿನ ಘಟಕದ  ಅಧ್ಯಕ್ಷರಾಗಿ ಸಹ್ಯಾದ್ರಿ ವಾರ್ತೆಯ ಹಿರಿಯ ಪತ್ರಕರ್ತರು ಮತ್ತು ಸಂಪಾದಕರಾದ ಬಿ.ಗಣಪತಿ,ಭದ್ರಾವತಿಯ ತಾಲ್ಲೂಕಿನ ಘಟಕದ ಅಧ್ಯಕ್ಷರಾಗಿ  ಹಿರಿಯಪತ್ರಕರ್ತರಾದ ಆರ್.ವಿ.ಕೃಷ್ಣ ರವರನ್ನು ಶಿಕಾರಿಪುರ ತಾಲ್ಲೂಕಿನ ಘಟಕದ ಅಧ್ಯಕ್ಷರಾಗಿ ಭುವನೇಶ್ವರ್ ರವರನ್ನು,ಹೊಸನಗರ ತಾಲ್ಲೂಕಿನ ಘಟಕದ ಅಧ್ಯಕ್ಷರಾಗಿ ಗಣೇಶ್ ಬೆಳ್ಳಿ ಇವರನ್ನು ಹಾಗೂ ಸಾಗರ ತಾಲ್ಲೂಕಿನ ಘಟಕದ ಅದ್ಯಕ್ಷ ರಾಗಿ ಶಶಿಧ್ವನಿ ಪತ್ರಿಕೆಯ ಸಂಪಾದಕರಾದ ಶಶಿಕಾಂತ್.ಎಂ.ಎಸ್          ರವರನ್ನು ನೇಮಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ಕಾ.ನಿ.ಪ.ಧ್ವನಿ ನೂತನ ಪ್ರಧಾನ ಕಾರ್ಯದರ್ಶಿ ಯಾಗಿ ಡೇರಿಂಗ್ ನೇಚರ್ ಯುವ ನೇತಾರರಾದ ಆಕ್ಟೀವ್ ಪತ್ರಕರ್ತರಾದ ಡಿಟೆಕ್ಟಿವ್‌ ನ್ಯೂಸ್ ಸಂಪಾದಕರಾದ ಕೆ.ಎಂ.ಸತೀಶ್ ಗೌಡ ಇವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಮತ್ತು ಜಿಲ್ಲಾಧ್ಯಕ್ಷರಾದ ಡಿ.ಜಿ.ನಾಗರಾಜ್ ಹಾಗೂ ಪಧಾದಿಕಾರಿಗಳು ಶುಭಕೋರಿದರು.
ಕಾರಣಾಂತರಗಳಿಂದ ಹಿಂದಿನ ಪ್ರಧಾನ ಕಾರ್ಯದರ್ಶಿ ಡಿ.ಪಿ.ಅರವಿಂದ ಇವರನ್ನು ಬದಲಾವಣೆ ಮಾಡಿ ನಿರ್ದೇಶಕರಾಗಿ ನೇಮಿಸಲಾಯಿತು.

ಜಿಲಾಧ್ಯಕ್ಷರಾದ ಡಿ.ಜಿ.ನಾಗರಾಜ್ ರವರು ಈ ಸಂದರ್ಭದಲ್ಲಿ ಮಾತನಾಡಿ ತಾಲ್ಲೂಕು ಘಟಕದ ಅಧ್ಯಕ್ಷರು ಗಳು ಕೂಡಲೇ ಪಧಾದಿಕಾರಿಗಳನ್ನು ನೇಮಿಸಿಕೊಂಡು ಸಂಘದ ಸದಸ್ಯತ್ವಕ್ಕೆ ಆದ್ಯತೆಯನ್ನು ನೀಡುವಂತೇ ತಿಳಿಸುತ್ತಾ ಸುದ್ದಿಯನ್ನು ಮಾಡುವ ವೃತ್ತಿ ನಿರತ ಪತ್ರಕರ್ತರನ್ನು ಮಾತ್ರ ಧ್ವನಿ ಸಂಘದ ಸದಸ್ಯರಾಗಿ ನೇಮಿಸಿ ಕೊಳ್ಳಲು ಅರ್ಜಿಯನ್ನು ಪಡೆಯುವುದರ ಜೋತೆಗೆ ತಮ್ಮ ತಮ್ಮ ತಾಲ್ಲೂಕು ಘಟಕಗಳಿಗೆ ತಕ್ಷಣ ಪಧಾದಿಕಾರಿಗಳನ್ನು ನೇಮಿಸಿಕೊಂಡು ಸದರಿ ಪಟ್ಟಿಯನ್ನು ಕಳುಹಿಸಿಕೊಡಲು ನೂತನ ಅಧ್ಯಕ್ಷರುಗಳಿಗೆ ತಿಳುವಳಿಕೆ ನೀಡಿದರು. 

ನಮ್ಮ ಧ್ವನಿ ಸಂಘಟನೆಯ ಹೋರಾಟ ಯಾವುದೇ ಸಂಘಟನೆಯ ವಿರುದ್ದ ಅಲ್ಲ, ಪತ್ರಕರ್ತರ ಕ್ಷೇಮಾಭಿವೃದ್ಧಿ, ಪತ್ರಕರ್ತರ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸರ್ಕಾರದಿಂದ ಏನು ಸವಲತ್ತುಗಳನ್ನು ಕೊಡಿಸಬೇಕು ಅದರ ಬಗ್ಗೆ ನಾವು ಯೋಚಿಸುತ್ತೆವೆ.ಪತ್ರಕರ್ತರ ಏಳಿಗೆ ಮುಖ್ಯ, ನಮ್ಮ ಧ್ವನಿ ಸಂಘಟನೆ ಪತ್ರಕರ್ತರ ಸ್ನೇಹಿ ಯಾಗಿ ಕೆಲಸ ಮಾಡುತ್ತದೆ. ಪತ್ರಕರ್ತರ ತಲೆ ತೋರಿಸಿ ಹಣ ಸಂಪಾದಿಸುವ  ಉದ್ದೇಶ ನಮ್ಮ ಸಂಘಟನೆಯದ್ದಲ್ಲ ಎಂದರು.ನಮ್ಮಲ್ಲಿ ಎಲ್ಲಾ ಸಮಾನ ಮನಸ್ಕ ಪತ್ರಕರ್ತರಿಗೆ ಸದಸ್ಯತ್ವ ಪಡೆಯಲು ಅವಕಾಶವಿದೆ. ಪತ್ರಕರ್ತರು ಆಯಾ ತಾಲ್ಲೂಕು ಘಟಕದ ಅಧ್ಯಕ್ಷರುಗಳನ್ನು ಬೇಟಿ ಮಾಡಿ ನಿಯಮಾನುಸಾರ ಅರ್ಜಿಯನ್ನು ಪಡೆದು ಸಲ್ಲಿಸಬೇಕು ಎಂದರು.

ನಮ್ಮೋಂಧಿಗೆ ಶಿವಮೊಗ್ಗ ಜಿಲ್ಲೆಯ ಇನ್ನು ಹಲವು ಪತ್ರಕರ್ತರ ಸಂಘಟನೆಯಲ್ಲಿರುವ ಸಂಘಟನೆಯ ಸದಸ್ಯರು ಪದಾಧಿಕಾರಿಗಳು ನಮ್ಮ ಸಂಘಟನೆಯತ್ತ ಒಲವು ತೋರಿದ್ದು, ಸದ್ಯದಲ್ಲಿಯೇ ಸೇರ್ಪಡೆಯಾಗಲಿದ್ದಾರೆ.ಪೋನ್ ಮಾಡಿ ಮಾತನಾಡಿದ್ದಾರೆ.ಕೆಲವು ಪತ್ರಕರ್ತರು ಖುದ್ದು ಸಂಪರ್ಕ ಮಾಡಿದ್ದಾರೆ. ನಮ್ಮದು ಪತ್ರಕರ್ತರ ಜನಸ್ನೇಹಿ ಸಂಘಟನೆ ಇಲ್ಲಿ ಹಿಟ್ಲರ್ ಆಡಳಿತ ಇಲ್ಲ.ಎಲ್ಲಾ ಪತ್ರಕರ್ತರು ಸಮಾನರು.ಹಿರಿಯ ಕಿರಿಯ ಪತ್ರಕರ್ತರು ಎಲ್ಲರೂ ಒಂದೇ....

ನಮ್ಮ ಸಂಘಟನೆಯಲ್ಲಿ ಬೇದಭಾವ ಇಲ್ಲ, ಮಾಧ್ಯಮಪಟ್ಟಿ ಮತ್ತು ಮಾದ್ಯಮಪಟ್ಟಿಹೊರತುಪಡಿಸಿದ ಪತ್ರಿಕೆಗಳ ಪತ್ರಕರ್ತರು ಅಂತಾ ವಿಬ್ಬಾಗ ಮಾಡುವುದಿಲ್ಲ.ದಿನಪತ್ರಿಕೆ, ವಾರಪತ್ರಿಕೆ,fortnightly,ಮಾಸಿಕ ಪತ್ರಿಕೆ,ಎಲೆಕ್ಟ್ರಾನಿಕ್ ಮೀಡಿಯಾ,ಸೋಷಿಯಲ್ ಮೀಡಿಯಾ,ಯೂಟ್ಯೂಬ್, ಬ್ಲಾಗ್, ವೆಬ್ಸೈಟ್ ಪತ್ರಕರ್ತರಿಗೆ ನಮ್ಮ ಧ್ವನಿ ಸಂಘದಲ್ಲಿ ಸದಸ್ಯತ್ವ ಪಡೆಯಲು ಅವಕಾಶವಿದೆ ಎಂದು ಜಿಲ್ಲಾಧ್ಯಕ್ಷರಾದ ಡಿ.ಜಿ.ನಾಗರಾಜ್ ತಿಳಿಸಿದರು.

ಈ ಕಾರ್ಯಕ್ರಮ ದಲ್ಲಿ ಧ್ವನಿ ಸಂಘಟನೆಯ ಎಲ್ಲಾ ಪಧಾದಿಕಾರಿಗಳು ಮತ್ತು ನಿರ್ದೇಶಕರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.