ಶ್ರೀರಾಮನಗರ ಬಡಾವಣೆ ವಾಸಿ ರಮೇಶಪ್ಪ ಎಂಬುವವರ ಪತ್ನಿ ಅನಿತಾ ಕಾಣೆ

ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಮನವಿ
ಶಿವಮೊಗ್ಗ, ಜೂನ್ 19: ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಬಡಾವಣೆ 3ನೇ ಕ್ರಾಸ್, ಕರುಮಾರಿಯಮ್ಮ ದೇವಸ್ಥಾನದ ಹತ್ತಿರದ ವಾಸಿ ರಮೇಶಪ್ಪ  ಎಂಬುವವರ ಪತ್ನಿ 30 ವರ್ಷದ ಅನಿತಾ ಎಂಬ ಮಹಿಳೆ ಜೂನ್ 15 ರಂದು ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. 
ಈಕೆಯ ಚಹರೆ 5.0 ಅಡಿ ಎತ್ತರ, ಎಣ್ಣೆಕೆಂಪು ಮೈಬಣ್ಣ, ಸಾಧಾರಣಾ ಮೈಕಟ್ಟು ಹೊಂದಿದ್ದು, ಬಲಗೈನಲ್ಲಿ ನವಿಲುಗರಿ ಟ್ಯಾಟು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಮೆರೂನ್ ಕಲರ್ ಟಾಪ್ ಮತ್ತು ಗೋಲ್ಡ್ ಕಲರ್ ಪ್ಯಾಂಟ್ ಧರಿಸಿರುತ್ತಾಳೆ.  
ಈಕೆಯ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಶಿವಮೊಗ್ಗ, ಜಿಲ್ಲಾ ನಿಸ್ತಂತು ಕೇಂದ್ರ ಅಥವಾ  ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100, ದೂ.ಸಂ: 08182-261414 /261416 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ
---------------

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.